ಮಸೀದಿ ಬಾಗಿಲು ಮುಚ್ಚಿ ನಮಾಜ್‌: 7 ಮಂದಿ ಮೇಲೆ ಕೇಸ್‌

* ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ನಡೆದ ಘಟನೆ
* ಮೆಕ್ಕಾ ಮಸೀದಿಯಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿ ಸಮೂಹಿಕ ಪ್ರಾರ್ಥನೆ 
* ಖಚಿತ ಮಾಹಿತಿ ಮೇರೆಗೆ ಉಪ ತಹಸೀಲ್ದಾರ್‌ ದಾಳಿ

Case on 7 people For Mass Namaz at Virajpet in Kodagu grg

ವಿರಾಜಪೇಟೆ(ಮೇ.31): ಕೋವಿಡ್‌ ನಿಯಮ ಉಲ್ಲಂಘಿಸಿ ಮಸೀದಿ ಒಳಭಾಗದಲ್ಲಿ ಪ್ರಾರ್ಥನೆ ಮಾಡುತಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ನಗರದ ಸುಂಕದಕಟ್ಟೆಯಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಸಮೂಹಿಕ ಪ್ರಾರ್ಥನೆ ಮಾಡುತಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ.

ವಿರಾಜಪೇಟೆ ನಗರದಲ್ಲಿರುವ ಮಸೀದಿಗಳಿಗೆ ಪ್ರಾರ್ಥನೆಗೆ ತೆರಳಲು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಮಲೆತಿರಿಕೆ ಬೆಟ್ಟದ ತಪ್ಪಲಿನಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಪ್ರಾರ್ಥನೆಗೆ ಕೆಲವರು ಮುಂದಾಗಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಕೊವಿಡ್‌-19ರ ವಿಶೇಷ ತನಿಖಾ ತಂಡದ ಉಪ ತಹಸೀಲ್ದಾರ್‌ ಪ್ರದೀಪ್‌ಕುಮಾರ್‌ ಮತ್ತು ಬಿ.ಎಂ. ನಾಣಯ್ಯ ಮಸೀದಿಯ ಮೇಲೆ ದಾಳಿ ನಡೆಸಿದ್ದಾರೆ.

ಕೊಡಗಿನ ಹಳ್ಳಿಹಳ್ಳಿಗೂ ತೆರಳಿ ಸೋಂಕಿತರಿಗೆ ನೆರವು ನೀಡಿದ ಭುವನ್, ಹರ್ಷಿಕಾ!

ಮಸೀದಿಯ ಒಳಗೆ ಪ್ರವೇಶಿಸಲು ಸ್ವಲ್ಪವೇ ಬಾಗಿಲು ತೆರದು ಒಳಭಾಗದಲ್ಲಿ ಸುಮಾರು 7 ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಪ್ರಾರ್ಥನೆಯಲ್ಲಿ ತೊಡಗಿದ್ದ ಮಂದಿ ಮಾಸ್ಕ್‌ ಧರಿಸದೆ ಸಮಾಜಿಕ ಅಂತರ ಕಾಯ್ದುಕೊಳ್ಳದೆ, ಸ್ಯಾನಿಟೈಸರ್‌ ಮಾಡದಿರುವುದು ಕಂಡು ಬಂದಿದೆ. ಏಳು ಮಂದಿಯ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ವಿಪತ್ತು ನಿರ್ವಾಹಣ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios