ಠೇವಣಿ ಉಳಿಸ್ಕೊಳ್ಳೋಕೆ ಕಾಂಗ್ರೆಸ್ ಪರದಾಟ: ನಳಿನ್ ಕುಮಾರ್

ಕಾಂಗ್ರೆಸ್ ಠೇವಣಿ ಉಳಿಸಿಕೊಳ್ಳಲೂ ಪರದಾಟ | ಚುನಾವಣೆ ಬಗ್ಗೆ ನಳಿನ್ ಮಾತು

Nalin kumar katil speaks about bjp in Panchayat Election dpl

ಮಂಗಳೂರು(ಡಿ.31): ಈ ಚುನಾವಣೆ ಬಿಜೆಪಿ ಪಾಲಿಗೆ ಯಶಸ್ಸಿನ ಚುನಾವಣೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯ ಪಡೆದಿದ್ದಾರೆ.  ಚುನಾವಣೆಗೆ ನಿಂತ ಕಾರ್ಯಕರ್ತರಿಗೆ ಬಿಜೆಪಿ ಬೆಂಬಲ ನೀಡಿದೆ. 55% ಕ್ಕಿಂತ ಹೆಚ್ಚು ಕಾರ್ಯಕರ್ತರು ಜಯಗಳಿಸಿದ್ದಾರೆ ಎಂದು.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟ ಹಿನ್ನಲೆ ಮಂಗಳೂರಿನಲ್ಲಿ ಮಾತನಾಡಿ, 29,478 ಬಿಜೆಪಿ ಬೆಂಬಲಿತರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. 24,000 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. 18,825 ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದಾರೆ. 9,753 ಇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಹೇಳಿದ್ದಾರೆ.

ಪಂಚಾಯತ್ ಚುನಾವಣೆ: ಒಂದೇ ಮನೆಯ ಮೂವರಿಗೆ ಸೋಲು; ಅಪ್ಪ, ಅಮ್ಮ, ಮಗ ಸ್ಯಾಡ್

ಬಿಜೆಪಿ ರಾಜ್ಯದಲ್ಲಿ ಸರ್ವವ್ಯಾಪಿಯಾಗಿ ವಿಸ್ತರಿಸಿದೆ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಮನ್ನಣೆ ಸಿಕ್ಕಿದೆ. ಕಾಂಗ್ರೆಸ್ ನ ಗೂಂಡಾಗಿರಿ ಪೃವೃತ್ತಿ, ಕುಂತತ್ರ ರಾಜಕಾರಣವನ್ನು ತಿರಸ್ಕಾರ ಮಾಡಿದ್ದಾರೆ. ಕೆಲವು ಕಡೆ ಕಾಂಗ್ರೆಸ್ ನ್ನು ತಿರಸ್ಕಾರ ಮಾಡಿ SDPI ಕಡೆ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ನ ಸಂಪ್ರದಾಯಿಕ ಮತಗಳೂ ಕೈ ಬಿಟ್ಟಿದೆ. ಕಾಂಗ್ರೆಸ್ ಠೇವಣಿ ಉಳಿಸಿಕೊಳ್ಳಲೂ ಪರದಾಡಿದೆ. APMC ಕಾಯ್ದೆ ವಿಚಾರದಲ್ಲಿ ಜನರನ್ನು ಹುಯಿಲೆಬ್ಬಿಸುವ ಯತ್ನ ಮಾಡಿದೆ. ಆದರೆ ಫಲಿತಾಂಶ ಎಲ್ಲವುದಕ್ಕೂ ಉತ್ತರ ನೀಡಿದೆ. ಮೋದಿಯ ಕೃಷಿ ಕಾಯ್ದೆಗೆ ಜನ ಸಂಪೂರ್ಣ ಬೆಂಬಲ‌ ನೀಡಿದ್ದಾರೆ. ಕೃಷಿ ಪ್ರಧಾನವಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಅವರು ಹೇಳಿದ್ದಾರೆ.

ಸ್ಲಂನಲ್ಲಿದ್ದು ಮೆಡಿಕಲ್‌ ಬಿಎಸ್ಸಿ ಓದಿದ ಯುವತಿ ಈಗ ಗ್ರಾ.ಪಂ. ಸದಸ್ಯೆ!

ಯುವಕರು ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸರ್ಕಾರ ಮಾಡಿರುವ ಕೆಲಸಕ್ಕೆ ಜನ ಮೆಚ್ಚಿಕೊಂಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios