ಪಂಚಾಯತ್ ಚುನಾವಣೆ: ಒಂದೇ ಮನೆಯ ಮೂವರಿಗೆ ಸೋಲು; ಅಪ್ಪ, ಅಮ್ಮ, ಮಗ ಸ್ಯಾಡ್
ಅಪ್ಪ, ಅಮ್ಮ, ಮಗನಿಗೆ ಸೋಲು! ಮೂವರು ಅಭ್ಯರ್ಥಿಗಳು 1 ಮತದಿಂದ ಗೆಲುವು ಅಳಿಯನ ವಿರುದ್ಧ ಮಾವನಿಗೆ ಗೆಲುವು
ಮಂಡ್ಯ(ಡಿ.31): ಪಾಂಡವಪುರ ಪಿಎಸ್‌ಎಸ್ ಕೆ ಪ್ರೌಢಶಾಲೆಯಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರೆ, ಸೋತ ಅಭ್ಯರ್ಥಿಗಳು ನಿರಾಸೆಯಿಂದ ತಮ್ಮ ಮನೆಗೆ ತೆರಳಿದರು.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆಯವರೆಗೂ ಮುಂದುವರೆದಿತ್ತು. ಸಣ್ಣಪುಟ್ಟಗೊಂದಲವನ್ನು ಹೊರತುಪಡಿಸಿದರೆ ಮತ ಎಣಿಕೆ ಕಾರ್ಯವನ್ನು ಬಹುತೇಕ ಯಶಸ್ವಿಯಾಗಿ ನಡೆಸಿದರು.
ಸ್ಲಂನಲ್ಲಿದ್ದು ಮೆಡಿಕಲ್ ಬಿಎಸ್ಸಿ ಓದಿದ ಯುವತಿ ಈಗ ಗ್ರಾ.ಪಂ. ಸದಸ್ಯೆ!
ಮತ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆಯೇ ಅಭ್ಯರ್ಥಿಗಳು ಹಾಗೂ ಏಜೆಂಟ್‌ಗಳ ಗುರುತಿನ ಚೀಟಿಯೊಂದಿಗೆ ಮತ ಕೇಂದ್ರ ಆಗಮಿಸಿದಾಗ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಏಜೆಂಟ್‌ಗಳಿಗೆ ಆರೋಗ್ಯ ತಪಾಸಣೆ (ಥರ್ಮಲ್ ಸ್ಕಾ್ಯನಿಂಗ್) ನಂತರ ಎಣಿಕೆ ಕೇಂದ್ರಕ್ಕೆ ತೆರಳಲು ಅವಕಾಶ ಮಾಡಿಕೊಡಲಾಯಿತು.
ಮತ ಎಣಿಕೆ ಕೇಂದ್ರಕ್ಕೆ ಬಂದ ಕೆಲವು ಅಭ್ಯರ್ಥಿಗಳು ತಮ್ಮ ಗುರುತಿನ ಚೀಟಿಯೊಂದಿಗೆ ಜೇಬಿನಲ್ಲಿ ಪೂಜೆ ಮಾಡಿಸಿದ ನಿಂಬೆಹಣ್ಣು, ಯಂತ್ರಗಳನ್ನು ಇಟ್ಟುಕೊಂಡು ಮತ ಕೇಂದ್ರಕ್ಕೆ ಆಗಮಿಸಿದರು. ಈ ವೇಳೆ ಮತ ಕೇಂದ್ರದ ಬಾಗಿಲಿನಲ್ಲಿ ಅವರನ್ನು ತಪಾಸಣೆ ನಡೆಸಿದಾಗ ನಿಂಬೆಹಣ್ಣು, ಯಂತ್ರವನ್ನು ಹೊರಗಡೆ ಬಿಸಾಡಿ ನಂತರ ಅಭ್ಯರ್ಥಿಗಳು ಮತಕೇಂದ್ರಕ್ಕೆ ತೆರಳಿದರು.
ಶಾಸಕರ ಸೋದರ ಪುತ್ರನಿಗೆ ಗೆಲುವು
ಚಿನಕುರಳಿ ಗ್ರಾಮದ 4ನೇ ವಾರ್ಡ್ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕ ಸಿ.ಎಸ್. ಪುಟ್ಟರಾಜು ಸೋದರ ಪುತ್ರ ಸಿ. ಶಿವಕುಮಾರ್ ಗೆಲುವು ಸಾಧಿಸಿ 2ನೇ ಬಾರಿಗೆ ಗ್ರಾಪಂ ಪ್ರವೇಶಿಸಿದರು. ಮಾಜಿ ಶಾಸಕ ಕೆ.ಕೆಂಪೇಗೌಡ ಸೊಸೆ ಜ್ಯೋತಿ ಮಂಜುನಾಥ್ ಗೆಲುವು ಸಾಧಿಸಿದರು.
2 ಬಾರಿ ಮರು ಎಣಿಕೆ:
ಕೆನ್ನಾಳು ಗ್ರಾಪಂ ವ್ಯಾಪ್ತಿಯ ಹರಳಹಳ್ಳಿಯ 2ನೇ ಬ್ಲಾಕ್ ಸಾಮಾನ್ಯ ಕ್ಷೇತ್ರದಲ್ಲಿ ಫಲಿತಾಂಶದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. 2ನೇ ಬಾರಿಗೆ ಮರು ಮತ ಎಣಿಕೆ ನಡೆಸಲಾಯಿತು. ಆರಂಭದ ಎಣಿಕೆಯಲ್ಲಿ ಶಿವರಾಮು 2 ಮತಗಳ ಅಂತರದಿಂದ ಗೆಲುವು ಸಾಧಿಸಿದರು ಎಂಬುದಾಗಿ ಘೋಷಿಸಲಾಗಿತ್ತು.
ಪ್ರತಿಸ್ಪರ್ಧಿ ಚಿದಂಬರ್ ಮರು ಎಣಿಕೆ ಮಾಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮರು ಎಣಿಕೆ ನಡೆಸಲಾಯಿತು. ಮರು ಎಣಿಕೆಯಲ್ಲಿ ಶಿವರಾಮು ವಿರುದ್ಧ ಚಿದಂಬರ್ 1 ಮತ ಹೆಚ್ಚಿಗೆ ಬಂದು ಗೆಲುವು ಸಾಧಿಸಿದರು. ಆಗ ಮತ್ತೆ ಮರು ಎಣಿಕೆ ಮಾಡುವಂತೆ ಶಿವರಾಮು ಮನವಿ ಮಾಡಿದರು. ಮರು ಎಣಿಕೆಯಲ್ಲೂ ಎರಡನೇ ಬಾರಿಗೆ ಚಿದಂಬರ್ 1 ಮತದಿಂದ ಗೆಲುವು ಸಾಧಿಸಿದರು.
ಆಕ್ಸ್‌ಫರ್ಡ್ ಲಸಿಕೆಗೆ ಬ್ರಿಟನ್ ಒಪ್ಪಿಗೆ: ಸಂಗ್ರಹಕ್ಕೆ ಮೈನಸ್ 70 ಡಿಗ್ರಿ ಬೇಕಿಲ್ಲ, ಬೆಲೆಯೂ ಅಗ್ಗ!
ಕಡಬ ಸಾಮಾನ್ಯ ಕ್ಷೇತ್ರದ ಮತ ಎಣಿಕೆಯಲ್ಲಿ ಶಿವಶಂಕರ್ 196, ಕೆ.ವೈ.ನವೀನ್ 195 ಮತಗಳನ್ನು ಪಡೆದರು. ಅಂತಿಮವಾಗಿ ಒಂದು ಮತದಿಂದ ಶಿವಶಂಕರ್ ಗೆಲುವು ಸಾಧಿಸಿದರು. ಈ ಹಿನ್ನೆಲೆಯಲ್ಲಿ ಮರು ಎಣಿಕೆ ಮಾಡುವಂತೆ ನವೀನ್ ಮಾಡಿದರು. ಆಗ ಚುನಾವಣಾಧಿಕಾರಿ ನಿರಾಕರಿಸಿದ ಹಿನ್ನೆಲೆಯಲ್ಲಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಎಸಿ ಸೂಚನೆ ಮೇರೆಗೆ ಮರು ಎಣಿಕೆ ನಡೆಯಿತು.
ತಾಲೂಕಿನ ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಎಸ್.ಕೊಡಗಹಳ್ಳಿ ಕ್ಷೇತ್ರದಲ್ಲಿ ಹೇಮಕುಮಾರ್ ಪ್ರತಿಸ್ಪರ್ಧಿ ವಿರುದ್ದ ಕೇವಲ 1 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಅಳಿಯನ ವಿರುದ್ದ ಮಾವನಿಗೆ ಗೆಲುವು:
ಬಳಘಟ್ಟಗ್ರಾಪಂನಲ್ಲಿ ಅಳಿಯ ಮಾವನ ವಿರುದ್ಧ ಸ್ಪರ್ಧೆ ಮಾಡಿದ್ದರು. ಮತ ಎಣಿಕೆಯಲ್ಲಿ ಅಳಿಯ ಕೃಷ್ಣೇಗೌಡ ವಿರುದ್ಧ ಮಾವ ಪಟೇಲ… ಜಯರಾಮು ಗೆಲುವು ಸಾಧಿಸಿದರು. ಅರಳಕುಪ್ಪೆ ಗ್ರಾಪಂನ 2ನೇ ವಾರ್ಡ್ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಬಿಇ ಎಂಟೆಕ್ ರೂಪ 209 ಮತಗಳ ಅಂತರದಿಂದ ಆಯ್ಕೆಯಾದರು.
ಪತ್ರಕರ್ತರ ಗೆಲುವು:
ತಾಲೂಕಿನ ಚಿನಕುರಳಿ ಗ್ರಾಮದ 4ನೇ ವಾರ್ಡ್ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆಯಿಂದ ಪತ್ರಕರ್ತ ಸಿ.ಎ.ಲೋಕೇಶ್ ಗೆಲುವು ಸಾಧಿಸಿ ನೇ ಬಾರಿಗೆ ಗ್ರಾಪಂ ಪ್ರವೇಶ ಮಾಡಿದರು. ಮತ ಎಣಿಕೆ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಶೈಲಜಾ, ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.