ನಬಾರ್ಡ್ ಅನುದಾನ ಶೇ.58ರಷ್ಟು ಕಡಿತ: ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಕರ್ನಾಟಕ ರಾಜ್ಯ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಸಹಕಾರ ಕ್ಷೇತ್ರವೂ ಕಾರಣ. ನಾವು ಹೆಚ್ಚು ಕೃಷಿ, ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದೇವೆ. ರೈತರು ಉತ್ಪಾದಿಸುವ ವಸ್ತುಗಳಿಗೆ ಅವರೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಆ ಅಧಿಕಾರ ಎಲ್ಲಾ ರೈತ ಉತ್ಪಾದಕರಿಗೂ ದೊರೆಯಬೇಕು. ಅದು ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದ ಇದುವರೆಗೂ ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆ.ಆರ್.ಪೇಟೆ(ಡಿ.05): ಕೇಂದ್ರ ಸರ್ಕಾರ ನಬಾರ್ಡ್‌ನಿಂದ ನೀಡಲಾಗುತ್ತಿದ್ದ ಅನುದಾನವನ್ನು ಶೇ.58ರಷ್ಟು ಕಡಿತಗೊಳಿಸಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಉತ್ಪನ್ನಗಳ ಸಹಕಾರ ಸಂಘದಿಂದ ನಿರ್ಮಿಸಿರುವ ಕೆ.ಎನ್. ಕೆಂಗೇಗೌಡ ಸಹಕಾರ ಭವನ ಉದ್ಘಾಟಿಸಿದ ನಂತರ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ನಬಾರ್ಡ್ ಅನುದಾನ ಕಡಿತಗೊಳಿಸಿರುವುದರಿಂದ ರೈತರಿಗೆ ನೀಡಲಾಗುತ್ತಿರುವ ಕೃಷಿ ಸಾಲವನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗುತ್ತಿರುವುದನ್ನು ಕಂಡು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್ ಅನುದಾನವನ್ನು ಹಿಂದೆ ಇದ್ದ ಮಾದರಿಯಲ್ಲೇ ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದೆ. ಆದರೆ, ಇದುವರೆಗೂ ನಬಾರ್ಡ್‌ನಿಂದ ಸಿಗುತ್ತಿದ್ದ ಅನುದಾನ ದೊರಕಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಸಿಎಂ ಪತ್ನಿ ಮುಡಾ ಅಕ್ರಮ ನಿಜ ಎಂದಿದ್ದಕ್ಕೆ ಆಕ್ರೋಶ: ಇ.ಡಿ ಮೇಲೆ ಸಿದ್ದರಾಮಯ್ಯ ದಾಳಿ
ದೇಶದಲ್ಲಿ ಕರ್ನಾಟಕ ರಾಜ್ಯ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಸಹಕಾರ ಕ್ಷೇತ್ರವೂ ಕಾರಣ. ನಾವು ಹೆಚ್ಚು ಕೃಷಿ, ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದೇವೆ. ರೈತರು ಉತ್ಪಾದಿಸುವ ವಸ್ತುಗಳಿಗೆ ಅವರೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಆ ಅಧಿಕಾರ ಎಲ್ಲಾ ರೈತ ಉತ್ಪಾದಕರಿಗೂ ದೊರೆಯಬೇಕು. ಅದು ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದ ಇದುವರೆಗೂ ಸಾಧ್ಯವಾಗಿಲ್ಲ. ಕೈಗಾರಿಕೋದ್ಯಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ಅವರೇ ದರ ನಿಗದಿ ಮಾಡುತ್ತಾರೆ. ಆದರೆ, ಕೃಷಿ ಉತ್ಪನ್ನಗಳಿಗೆ ದರ ನಿಗದಿಪಡಿಸುವ ಅಧಿಕಾರ ರೈತರಿಗೆ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಕೇಂದ್ರ - ರಾಜ್ಯ ಸರ್ಕಾರಗಳು ಒಕ್ಕೂಟದ ವ್ಯವಸ್ಥೆ ಯಲ್ಲಿದ್ದೇವೆ. ಆ ಒಕ್ಕೂಟ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ದೇಶದ 140 ಕೋಟಿ ಜನರಿದ್ದು, ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ಆಗ ಮಾತ್ರ ಸಮಾನತೆ ಸಾಧಿಸಲು ಸಾಧ್ಯ. ಇಂದಿಗೂ ದೇಶದಲ್ಲಿ ಅಸಮಾನತೆ ಇದೆ. ಅದನ್ನು ತೊಡೆದುಹಾಕಬೇಕು. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ, ಸಿಗುವಂತಾಗಬೇಕು ಅಂಬೇಡ್ಕರ್ ಹೇಳಿದ್ದರು. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದಾಗಿ ತಿಳಿಸಿದರು.
ಪಡಿತರ ಚೀಟಿ ರದ್ದುಪಡಿಸಿರುವುದಾಗಿ ಹಲವರು ದೂರುತ್ತಿದ್ದಾರೆ. ನಾವು ಪಡಿತರ ಚೀಟಿ ಕಡಿತ ಗೊಳಿಸಿಲ್ಲ. ಅರ್ಹರು, ಬಡವರಿಗೆ ಸಿಗಬೇಕು ಎಂಬ ದೃಷ್ಟಿಯಿಂದ ಪರಿಷ್ಕರಣೆ ಮಾಡಿದ್ದೇವೆ. ಉಳ್ಳವರನ್ನ ಬಿಟ್ಟು ಎಲ್ಲಾ ಬಡವರಿಗೂ ಸಿಗಬೇಕು ಎಂಬುದಷ್ಟೇ ಉದ್ದೇಶ ಎಂದರು.
ಕರ್ನಾಟಕ ಒಂದರಲ್ಲೇ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಮಗೆ ಮಾರಾಟ ಮಾಡಲು ಆಗದೆ ದೆಹಲಿಗೆ ಹೋಗಿ ಮಂಡ್ಯ ಹಾಲು ಮಾರಾಟ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಕರ್ನಾಟಕದ ಹಾಲಿಗೆ ಬೇಡಿಕೆ ಹೆಚ್ಚಿದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದ್ದು ನಾನು. 5 ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇವೆಲ್ಲವೂ ರೈತರ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಕೊಡುಗೆಗಳಲ್ಲವೇ ಎಂದರು.
ಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಜಾರಿಗೆ ತಂದಿದ್ದೆ. ಇದು ನನಗೆ ಅತ್ಯಂತ ಹೆಮ್ಮೆ ತಂದಿದೆ. ಬಡವರಿಗೆ ನೀಡುವ ಸವಲತ್ತುಗಳನ್ನು ಅಭಿವೃದ್ಧಿ ಹೆಸರಿನಲ್ಲಿ ವಿಪಕ್ಷಗಳು ಟೀಕಿಸಬಾರದು ಎಂದರು.
ತಾಲೂಕಿನ ಸಹಕಾರ ಸಂಘಗಳಲ್ಲಿ ಒಳ್ಳೆಯ ನಾಯಕತ್ವ ಇರುವುದು ಕಾಣುತ್ತಿದೆ. ಕಿಕ್ಕೇರಿ ಸಹಕಾರ ಸಂಘವು 26 ಕೋಟಿಯಷ್ಟು ಸ್ವಂತ ಬಂಡವಾಳವನ್ನು ಕೆ.ಆರ್.ಪೇಟೆ ಕಸಬಾ ಹಾಗೂ ಹೊಸಹೊಳಲು ಸಹಕಾರ ಸಂಘಗಳು ಕೂಡಾ ಉತ್ತಮವಾಗಿ ಕೆಲಸ ಮಾಡುತ್ತಿವೆ. ಇದರಿಂದ ಮೂರು ಸಂಘಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿವೆ. ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕು. ಹೆಗ್ಗಣಗಳು ಸೇರಿಕೊಂಡರೆ ಅಭಿವೃದ್ಧಿ ಕಷ್ಟ, ಮನ್ಸುಲ್ ಕೂಡಾ ಪ್ರಗತಿಯ ಹಾದಿಯಲ್ಲಿದೆ ಎಂದರು.
ಮುಡಾ ಕೇಸಲ್ಲಿ ಸಿದ್ದು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಕುಮಾರಸ್ವಾಮಿ ಭವಿಷ್ಯ
ಸಮಾರಂಭದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಮ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್. ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಮಳವಳ್ಳಿ ಶಿವಣ್ಣ, ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ. ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ರಾಜ್ಯ ಸಹಕಾರ ಬ್ಯಂಕ್ ಅಧ್ಯಕ್ಷ ಜೋಗೀಗೌಡ, ಉಪಾಧ್ಯಕ್ಷ ಎಚ್.ಕೆ.ಅಶೋಕ್, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್, ಕೆ.ಶ್ರೀನಿವಾಸ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಲವು ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.
ಮಂತ್ರಿಮಂಡಲ ಪುನಾರಚನೆ ಮಾಡುತ್ತೇನೆ ಎಂದು ನಾನೆಲ್ಲೂ ಹೇಳಿಲ್ಲ. ಈ ಬಗ್ಗೆ ವರಿಷ್ಠರು ಕೂಡ ಸೂಚನೆ ಕೊಟ್ಟಿಲ್ಲ. ಕಾಂಗ್ರೆಸ್‌ನಿಂದ ಹಾಸನದಲ್ಲಿ ಗುರುವಾರ ಸಮಾವೇಶ ನಡೆಯುತ್ತಿದೆ. ಇದರಲ್ಲಿ ಭಿನ್ನರಾಗ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.