ಮುಡಾ ಕೇಸಲ್ಲಿ ಸಿದ್ದು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಕುಮಾರಸ್ವಾಮಿ ಭವಿಷ್ಯ
ಸಿದ್ದರಾಮಯ್ಯ ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಪರಿಹಾರ ಎಂದು 14 ನಿವೇಶನ ಪಡೆದಿರುವುದೇ ಕಾನೂನು ಬಾಹಿರ. ಸಿದ್ದರಾಮಯ್ಯ ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕು ಎಂದು ಕಿಡಿಕಾರಿದ ಕೇಂದ್ರ ಬೃಹತ್ ಕೈಗಾರಿಕಾ ಇಲ್ಲ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಡಿ.05): ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಇಲ್ಲ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಡಾ ಹಗರಣದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಹಾದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ರಾಜ್ಯಪಾಲರಿಗೆ ದೂರು ನೀಡಿದವರೇ ಇ.ಡಿ. ಗೂ ದೂರು ಕೊಟ್ಟಿದ್ದಾರೆ. ಇದರಲ್ಲಿ ಕೇಂದ್ರವನ್ನು ದೂರಿದರೆ ಏನು ಉಪಯೋಗ? ಸಿದ್ದರಾಮಯ್ಯ ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಪರಿಹಾರ ಎಂದು 14 ನಿವೇಶನ ಪಡೆದಿರುವುದೇ ಕಾನೂನು ಬಾಹಿರ. ಸಿದ್ದರಾಮಯ್ಯ ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗಡಗಡ ನಡುಗಿಸಿದ ಮುಡಾ!
ಸಚಿವರು ಇ.ಡಿ ವಿರುದ್ದ ಕಿಡಿಕಾರುತ್ತಿದ್ದಾರೆ. ಹತಾಶೆ ಯಿಂದ ನಿಂದಿಸುತ್ತಿದ್ದಾರೆ. ಸರ್ಕಾರ ಒಂದು ರೀತಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರ ಗುಂಪಿನಂತಿದೆ. ಅಧಿಕಾರಕ್ಕೆ ಬಂದಾಗಿನಿಂದ 17 ರಿಂದ 18 ಎಸ್‌ಐಟಿಗಳನ್ನು ರಚನೆ ಮಾಡಿಕೊಂಡು ಹಗೆ ಸಾಧಿಸುತ್ತಿದ್ದಾರೆ. ಸಚಿವ ಕೃಷ್ಣಬೈರೇಗೌಡ ಇ.ಡಿ.ಯನ್ನು ಸೀಳು ನಾಯಿ ಎಂದು ನಿಂದಿಸಿದ್ದಾರೆ. ಅವರಿಗೆ ಹ್ಯಾಟ್ಸ್ ಆಫ್ ಮಾಡೋಣ ಎಂದು ವ್ಯಂಗ್ಯವಾಡಿದರು.
ಯಾರಿಗೆ ಸಾಂತ್ವನ ಹೇಳುವರು?:
ಹಾಸನದ ಪ್ರಕರಣಕ್ಕೆ ಸಂಬಂಧಿಸಿ ವಕೀಲ ದೇವರಾಜೇಗೌಡ ಆಡಿಯೋ ಬಿಡುಗಡೆ ಮಾಡಿದ್ದರು. ಆಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನೇನು ಹೇಳಿದರು ಎನ್ನುವುದನ್ನು ಇಡೀ ದೇಶವೇ ಕೇಳಿಸಿಕೊಂಡಿದೆ. ಹಾಸನದಲ್ಲಿ ಅದೇನೋ ಸಮಾವೇಶ ಮಾಡಲು ಹೋಗುತ್ತಿದ್ದು, ಸಾಂತ್ವನ ಹೇಳಲಿದ್ದಾರೆ ಅಂತೆ. ಯಾರಿಗೆ ಸಾಂತ್ವನ ಹೇಳುತ್ತಾರೆ? ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿದರು. ಒಬ್ಬರನ್ನಾದರೂ ಬಂಧಿಸಿದ್ದರಾ ಎಂದು ಇದೇ ವೇಳೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
700 ಕೋಟಿ ಮೆಗಾ ಹಗರಣ: ಸಿದ್ದು ಪತ್ನಿ ಮುಡಾ ಸೈಟ್ ಅಕ್ರಮ ನಿಜ, ಇ.ಡಿ. ಬಾಂಬ್!
ನವದೆಹಲಿ: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಹಸ್ತಾಂತರದ ಹಿಂದೆ ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಬಹಿರಂಗಪಡಿಸಿದೆ. ಇದೇ ವೇಳೆ, ಮುಡಾದಿಂದ ಬೇನಾಮಿ ಹಾಗೂ ಇನ್ನಿತರೆ ವ್ಯವಹಾರಗಳ ಮೂಲಕ 1095 ನಿವೇಶನಗಳನ್ನು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರ ಮೌಲ್ಯ ಬರೋಬ್ಬರಿ 700 ಕೋಟಿ ರು. ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ. ಈ ಸಂಬಂಧ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇ.ಡಿ. ಪತ್ರ ಬರೆದಿದೆ.
ಇ.ಡಿ. ಹೇಳೋದೇನು?:
'ಪಾರ್ವತಿ ಅವರಿಗೆ ಭೂ ಹಸ್ತಾಂತರದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಸಾಕ್ತ ತಿರುಚುವಿಕೆಯ ಪುರಾವ ಲಭಿಸಿವೆ. ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ ಆಗಿದೆ. ಕೆಲವು ವ್ಯಕ್ತಿಗಳ ಪರ ಲಾಬಿ ನಡೆಸಲಾಗಿದೆ ಹಾಗೂ ಪ್ರಭಾವ ಬಳಸಲಾಗಿದೆ ಮತ್ತು ಪೋರ್ಜರಿ ಸಹಿಗಳ ಸಾಕ್ಷ್ಯಗಳು ನಮ್ಮ ತನಿಖೆ ವೇಳೆ ಪತ್ತೆಯಾಗಿವೆ' ಎಂದು ಇ.ಡಿ. ತಿಳಿಸಿದೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್.ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ, ಕುಮಾರ್ ಅವರು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ 'ಅನಾವಶ್ಯಕ ಪ್ರಭಾವ' ಬೀರಿದ್ದರು ಎಂಬುದಕ್ಕೆ ಸಾಕ್ಷ್ಯ ಲಭಿಸಿದೆ.
ಮುಡಾ ಹಗರಣ: ಸಚಿವ ಬೈರತಿ ಸುರೇಶ್ ಕಚೇರಿಗೂ ಬಂತು ಇ.ಡಿ ನೋಟಿಸ್
ಪಾರ್ವತಿ ಹಾಗೂ ಇತರರ ಕ್ರಮ:
'ಸೈಟ್ ಹಂಚಿಕೆಯಲ್ಲಿ ಶಾಸನಬದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 14 ಸೈಟ್ ಪಾರ್ವತಿ ಅವರಿಗೆ ಕಾನೂನುಬಾಹಿರವಾಗಿ ಹಂಚಲಾಗಿದೆ ಎಂದು ಸ್ಪಷ್ಟವಾಗಿ ಗಮನಿಸಬಹುದು' ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳುಹಿಸಲಾದ ಇತ್ತೀಚಿನ ಸಂವಹನದಲ್ಲಿ ಲೋಕಾಯುಕ್ತ ಇಲಾಖೆಗೆ ಇ.ಡಿ. ಮಾಹಿತಿ ನೀಡಿದೆ.
ಈ ನಡುವೆ, 'ಮುಡಾ ಕೇಸು ಬರೀಪಾರ್ವತಿ ಪ್ರಕರಣದೊಂದಿಗೆ ಅಂತ್ಯವಾಗಲಿಲ್ಲ. 700 ಕೋಟಿ ರು.ಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಒಟ್ಟು 1,095 ಸೈಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ' ಎಂದು ಇ.ಡಿ. ಹೇಳಿದೆ. ಈ ಸಂಬಂಧ ತನಿಖಾ ವರದಿ ತನಗೆ ಲಭಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.