ಕೃಷಿ ಉಪಯೋಗಕ್ಕೆ ಬಳಸಲಾಗುವ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೈಗಾರಿಕಾ ಉದ್ದೇಶಕ್ಕೆ ಬಳಸುತ್ತಿದ್ದ ದಂಧೆಯಲ್ಲಿ ತೊಡಗಿದ್ದ ಕೈಗಾರಿಕೆಯನ್ನು ರೈತ ಸಂಘದ ಪದಾಧಿಕಾರಿಗಳು ಪತ್ತೆ ಮಾಡಿ, ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಜರುಗಿದೆ.

 ನಂಜನಗೂಡು (ಜ. 06): ಕೃಷಿ ಉಪಯೋಗಕ್ಕೆ ಬಳಸಲಾಗುವ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೈಗಾರಿಕಾ ಉದ್ದೇಶಕ್ಕೆ ಬಳಸುತ್ತಿದ್ದ ದಂಧೆಯಲ್ಲಿ ತೊಡಗಿದ್ದ ಕೈಗಾರಿಕೆಯನ್ನು ರೈತ ಸಂಘದ ಪದಾಧಿಕಾರಿಗಳು ಪತ್ತೆ ಮಾಡಿ, ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಜರುಗಿದೆ.

ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್‌ ಕಾರ್ಖಾನೆಯಲ್ಲಿ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನುಗೊಳಿಸಿ ಅದನ್ನು ಪ್ಲೆವುಡ್‌ ಗಮ್‌ ತಯಾರಿಕೆಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್‌. ವಿದ್ಯಾಸಾಗರ್‌, ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಅವರು ಕಾರ್ಖಾನೆಗೆ ತೆರಳಿದ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸಬ್ಸಿಡಿ ರಸಗೊಬ್ಬರ ಕಂಡು ಪೊಲೀಸರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಕೃಷಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾರ್ಖಾನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 135 ಚೀಲ ಸಬ್ಸಿಡಿ ಯೂರಿಯ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ.

ಕೃಷಿ ಸಹಾಯಕ ನಿರ್ದೇಶಕ ದೀಪಕ್‌ ಮಾತನಾಡಿ, ರೈತ ಸಂಘದ ಪದಾಧಿಕಾರಿಗಳ ಮಾಹಿತಿ ಮೇರೆಗೆ ಹರ್ಷ ಇಂಪೆಕ್ಸ್‌ ಕಾರ್ಖಾನೆಯ ಮೇಲೆ ದಾಳಿ ನಡೆಸಿದಾಗ 47 ಕೆಜಿ ತೂಕವಿರುವ ಸುಮಾರು 135 ಚೀಲಗಳಲ್ಲಿ ಅಕ್ರಮವಾಗಿ ಸಬ್ಸಿಡಿ ಯುರಿಯಾ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿತ್ತು. ಚೀಲಗಳ ಮೇಲೆ ಸಬ್ಸಿಡಿ ಯೂರಿಯಾ ರಸಗೊಬ್ಬರವೆಂಬುದಾಗಿ ಮತ್ತು ಕೃಷಿ ಉಪಯೋಗಕ್ಕೆ ಮಾತ್ರ ಎಂಬುದಾಗಿ ನಮೂದಾಗಿತ್ತು. ಈ ಅಕ್ರಮ ದಾಸ್ತಾನನ್ನು ವಶಕ್ಕೆ ಪಡೆದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಮತ್ತು ವಶಕ್ಕೆ ಪಡೆಯಲಾದ ದಾಸ್ತಾನಿನ ಯೂರಿಯಾದ ಮಾದರಿಯನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್‌. ವಿದ್ಯಾಸಾಗರ್‌ ಮಾತನಾಡಿ, ಯೂರಿಯಾ ಮಾರುಕಟ್ಟೆಬೆಲೆ ಮೂರು ಸಾವಿರಗಳಿದ್ದು, ಸರ್ಕಾರ ರೈತರ ಅನುಕೂಲಕ್ಕಾಗಿ ಸಬ್ಸಿಡಿ ದರದಲ್ಲಿ 266ಕ್ಕೆ ನೀಡುತ್ತಿದೆ. ಆದರೆ ರೈತರ ಸಬ್ಸಿಡಿ ರಸಗೊಬ್ಬರಗಳು ಇಂತಹ ಅಕ್ರಮ ದಂಧೆ ನಡೆಸುವ ಕೈಗಾರಿಕೆಗಳ ಪಾಲಾಗುತ್ತಿದೆ. ಇದರಿಂದ ರೈತರಿಗೆ ಯೂರಿಯಾ ರಸಗೊಬ್ಬರದ ಅಭಾವ ಉಂಟಾಗುತ್ತಿದೆ. ಆದ್ದರಿಂದ ರೈತರಿಗೆ ಅನ್ಯಾಯವೆಸಗುತ್ತಿರುವ ಇಂತಹ ಅಕ್ರಮ ದಂಧೆಯಲ್ಲಿ ತೊಡಗಿರುವ ಕೈಗಾರಿಕೆಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ಕೃಷಿ ಸಹಾಯಕ ನಿರ್ದೇಶಕ ದೀಪಕ್‌ ದೂರಿನ ಮೇರೆಗೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಇನ್ಸ್‌ಪೆಕ್ಟರ್‌ ಶಿವನಂಜಶೆಟ್ಟಿತನಿಖೆ ಮುಂದುವರೆಸಿದ್ದಾರೆ.

ತಹಸೀಲ್ದಾರ್‌ ಶಿವಮೂರ್ತಿ, ಉಪತಹಸೀಲ್ದಾರ್‌ ಪ್ರಶಾಂತ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್‌, ಸತೀಶ್‌ರಾವ್‌, ಇನ್ಸ್‌ಪೆಕ್ಟರ್‌ ಶಿವನಂಜಶೆಟ್ಟಿಇದ್ದರು.

ರಾಗಿ ದೋಖಾ

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜ.05): ಬಡ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ನೆರವಾಗಬೇಕಿದ್ದ ಅಧಿಕಾರಿಗಳೇ ವರ್ತಕರೊಂದಿಗೆ ಸೇರಿ ಪಹಣಿ ಗೋಲ್ಮಾಲ್‌ ನಡೆಸಿ ಅಮಾಯಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ರಾಜ್ಯದ ಸಣ್ಣ ರೈತರು ಆರೋಪಿಸಿದ್ದು, ಈ ಬಗ್ಗೆ ಕೃಷಿ ಇಲಾಖೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹಳ್ಳಿಯೊಂದರ ರೈತ ಮಹಿಳೆಯೊಬ್ಬರು ತಮ್ಮ ಜಮೀನಿನ ಸರ್ವೇ ಸಂಖ್ಯೆ 41ರಲ್ಲಿ ಬೆಳೆದಿದ್ದ ರಾಗಿಯನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಎಫ್‌ಐಡಿ (ಫ್ರೂಟ್ಸ್‌ ಐಡಿ) ಪಡೆಯಲು ಹೋಗಿದ್ದಾರೆ. 

ಆದರೆ ಅವರ ಜಮೀನಿನ ಪಹಣಿ ಬೇರೊಬ್ಬರ ಎಫ್‌ಐಡಿಗೆ ಲಿಂಕ್‌ ಆಗಿರುವುದು ಬೆಳಕಿಗೆ ಬಂದು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ರಾಜ್ಯದ ಹಲವೆಡೆ ಈ ರೀತಿಯ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಮುಗ್ಧರು, ವಿಧವೆಯರನ್ನೇ ಗುರಿ ಮಾಡಿಕೊಂಡು ನಡೆಸಲಾಗುತ್ತಿರುವ ಈ ಭ್ರಷ್ಟಾಚಾರದಲ್ಲಿ ವರ್ತಕರ ಜೊತೆ ಸೈಬರ್‌ ಸೆಂಟರ್‌ನವರು, ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ) ಸಿಬ್ಬಂದಿ, ಕೃಷಿ, ತೋಟಗಾರಿಕೆ, ಕಂದಾಯ ಮತ್ತಿತರ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷವೂ ಈ ದಂಧೆ ಎಗ್ಗಿಲ್ಲದೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ

ರಾಗಿ ಮಾರಾಟ ಮಾಡಲು ಎಫ್‌ಐಡಿ ತೆಗೆದುಕೊಳ್ಳಲು ಹೋದರೆ, ‘ನಿಮ್ಮ ಪಹಣಿ ಬೇರೆಯವರ ಎಫ್‌ಐಡಿಗೆ ಲಿಂಕ್‌ ಆಗಿದೆ. ನಿಮ್ಮ ರಾಗಿ ಮಾರಾಟಕ್ಕೆ ಅವಕಾಶವಿಲ್ಲ’ ಎಂದು ಹೇಳಿ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಪರಿಣಾಮ ಬಡ ರೈತರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಲಾಗದೆ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ರೈತರ ಪಹಣಿಗಳಿಗೆ ‘ಫ್ರೂಟ್ಸ್‌’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ನಕಲಿ ಎಫ್‌ಐಡಿ ಸೃಷ್ಟಿಸಿ ಹಣ ದೋಚಲಾಗುತ್ತಿದೆ ಎಂದು ಆರೋಪಿಸಲಾಗಿದೆ.