Mysuru : ಬಿಜೆಪಿ ಅಧ್ಯಕ್ಷ ರನ್ನು ಕೂಡಲೆ ವಜಾ ಮಾಡುವಂತೆ ಒತ್ತಾಯ
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪಕ್ಷದ ಸಿದ್ಧಾಂತ ಪಾಲಿಸದ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ. ಮಂಜು ಅವರನ್ನು ಈ ಕೂಡಲೆ ಆ ಸ್ಥಾನದಿಂದ ವಜಾ ಮಾಡಬೇಕೆಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಮಿ.ರಾ. ರಮೇಶ್ ಒತ್ತಾಯಿಸಿದರು.
ಕೆ.ಆರ್. ನಗರ : ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪಕ್ಷದ ಸಿದ್ಧಾಂತ ಪಾಲಿಸದ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ. ಮಂಜು ಅವರನ್ನು ಈ ಕೂಡಲೆ ಆ ಸ್ಥಾನದಿಂದ ವಜಾ ಮಾಡಬೇಕೆಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಮಿ.ರಾ. ರಮೇಶ್ ಒತ್ತಾಯಿಸಿದರು.
ನಾಲ್ಕು ದಿನಗಳ ಹಿಂದೆ ಕೆ.ಆರ್. ನಗರದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ನಂತರ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು, ಪಕ್ಷದ ಬ್ಯಾನರ್, ಕರಪತ್ರ, ಬಾವುಟ ಸುಡಿಸಿ ಅಸಭ್ಯವಾಗಿ ವರ್ತಿಸಿರುವುದು ಸರಿಯಲ್ಲ ಎಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದಿಂದ ಅನ್ಯಾಯವಾಗಿದ್ದರೆ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡಬಹುದಿತ್ತು, ಆದರೆ ಅದನ್ನು ಬಿಟ್ಟು ಕೆಲವರನ್ನು ಕಟ್ಟಿಕೊಂಡು ಪಕ್ಷದ ವಿರುದ್ದ ನಡೆದುಕೊಂಡಿರುವುದು ಕ್ಷಮಿಸಲಸಾಧ್ಯವಾದ ಅಪರಾಧವಾಗಿದ್ದು, ವರಿಷ್ಠರು ಈ ಬಗ್ಗೆ ಕೂಡಲೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ವರ್ಷಗಳಲ್ಲಿ ಇಂತಹ ದುರ್ಘಟನೆಗಳು ನಡೆದಿರಲಿಲ್ಲ, ಆದರೆ ಈಗ ತಾಲೂಕು ಅಧ್ಯಕ್ಷರು ಇಂತಹ ಕೃತ್ಯ ನಡೆಯಲು ಕಾರಣವಾಗಿದ್ದು, ತಾಲೂಕು ಅಧ್ಯಕ್ಷರ ಘನತೆ ಕಳೆದಿದ್ದು, ಈ ಸಂಬಂಧ ರಾಜ್ಯ ಮತ್ತು ಜಿಲ್ಲೆಯ ವರಿಷ್ಠರಿಗೆ ದೂರು ನೀಡಲಾಗುತ್ತದೆಂದು ತಿಳಿಸಿದರು.
ಇದರ ಜತೆಗೆ ಕ್ಷೇತ್ರದಲ್ಲಿ ಪಕ್ಷದೊಂದೊಂದಿಗೆ ಎಂದೂ ಗುರುತಿಸಿಕೊಳ್ಳದ ಮಿರ್ಲೆ ವರದರಾಜು 2009ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬೂತ್ ಕಮಿಟಿ ಹಣ ಹೊತ್ತೊಯ್ದು ಮತ್ತೆ ಈಗ ಕಾಣಿಸಿಕೊಂಡಿದ್ದಾರೆ, ಇಂತಹ ವ್ಯಕ್ತಿಗೆ ಪಕ್ಷದಲ್ಲಿ ಯಾರು ಮಣೆ ಹಾಕಬಾರದು ಎಂದರು.
ಈಗ ಬಂದು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿ ಎನ್ನುತ್ತಿರುವ ಒಬ್ಬ ಮೋಸಗಾರನಾಗಿದ್ದು, ಇವರು ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅವರ ಪರ ಕೆಲಸ ಮಾಡುತ್ತಿದ್ದು, ಇಂತಹವರಿಂದ ಕೆ.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಲಾಭವಿಲ್ಲವೆಂದರು.
ಮಿರ್ಲೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹೇಂದ್ರ, ಬಿಜೆಪಿ ಮುಖಂಡರಾದ ಮಿರ್ಲೆ ಶಿವಕುಮಾರ್, ಶಿವಣ್ಣ ಇದ್ದರು.
ಬಿಜೆಪಿ ತೊರೆಯಲು ಸಜ್ಜಾದ ಸಚಿವ
ಮಂಡ್ಯ(ಮಾ.03): ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸುವುದರೊಂದಿಗೆ ದಾಖಲೆ ಸೃಷ್ಟಿಸಿದ್ದ ಸಚಿವ ಕೆ.ಸಿ.ನಾರಾಯಣಗೌಡರು ಇದೀಗ ಬಿಜೆಪಿ ತೊರೆಯುವ ಸುಳಿವು ನೀಡಿದ್ದಾರೆ.
ಇಷ್ಟು ದಿನ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ ಎನ್ನುತ್ತಿದ್ದ ನಾರಾಯಣಗೌಡರು ಇದೀಗ, ಕಾಂಗ್ರೆಸ್‌ನಿಂದ ಆಹ್ವಾನ ಬಂದಿರೋದು ನಿಜ. ಆದರೆ, ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆಪ್ತರು ಮತ್ತು ಹಿತೈಷಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಕೇಳಬೇಕು. ಅವರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಪಕ್ಷ ಸೇರ್ಪಡೆ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.
ಈ ಸಂಬಂಧ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೆ.ಆರ್.ಪೇಟೆ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ. ಅದಕ್ಕಾಗಿ ಪಕ್ಷಕ್ಕೆ ಬರುವಂತೆ ಒತ್ತಾಯಿಸಲಾಗುತ್ತಿದೆ. ಯಾವುದೇ ನಿರ್ಧಾರ ಮಾಡಿದರೂ ಮಾಧ್ಯಮಗಳ ಮೂಲಕವೇ ತಿಳಿಸುತ್ತೇನೆ ಎಂದು ಹೇಳಿದರು. ಈ ಮೂಲಕ ಅವರು ಇದೀಗ ಕಾಂಗ್ರೆಸ್ ಕಡೆ ಹೆಜ್ಜೆ ಹಾಕುವ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.