Mysuru : ರಸ್ತೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಆಗ್ರಹ
ವರುಣ ವಿಧಾನಸಭಾ ಕೇತ್ರ ಒಳಗೊಂಡಂತೆ ಟಿ. ನರಸೀಪುರ ಪಟ್ಟಣದ ರಸ್ತೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಒತ್ತಾಯಿಸಿ ದಸಂಸ (ಪ್ರೊ.ಬಿ. ಕೃಷ್ಟಪ್ಪ ಸ್ಥಾಪಿತ ಬಣದ) ವತಿಯಿಂದ ಪ್ರತಿಭಟಿಸಿದರು.
ಟಿ. ನರಸೀಪುರ : ವರುಣ ವಿಧಾನಸಭಾ ಕೇತ್ರ ಒಳಗೊಂಡಂತೆ ಟಿ. ನರಸೀಪುರ ಪಟ್ಟಣದ ರಸ್ತೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಒತ್ತಾಯಿಸಿ ದಸಂಸ (ಪ್ರೊ.ಬಿ. ಕೃಷ್ಟಪ್ಪ ಸ್ಥಾಪಿತ ಬಣದ) ವತಿಯಿಂದ ಪ್ರತಿಭಟಿಸಿದರು.
ಪಟ್ಟಣದ ಕಾರ್ಯಸೌಧದ ಮುಂಭಾಗ ದಸಂಸ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗಿ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ರಾಜಶೇಖರ್, ಟಿ. ನರಸೀಪುರ ಪಟ್ಟಣ ವರುಣ ಮತ್ತು ನರಸೀಪುರ ವಿಧಾನಸಭಾ ಕ್ಷೇತ್ರಗಳೆರಡಕ್ಕೂ ಸೇರಿದೆ, ಪಟ್ಟಣದ ಬಹುಪಾಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಉಳಿದ ಸ್ವಲ್ಪ ಭಾಗ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ಟಿ. ನರಸೀಪುರಕ್ಕೆ ಸೇರುತ್ತದೆ, ಆದರೂ ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.
ನಂತರ ತಹಸೀಲ್ದಾರ್ ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು. ವರುಣ ಲೋಕೋಪಯೋಗಿ ಇಲಾಖೆ ಎಇಇ ಇದ್ದರು. ತಾಲೂಕು ಸಂಚಾಲಕರಾದ ಸಿ.ಡಿ. ವೆಂಕಟೇಶ್, ಸಿದ್ದರಾಜು, ಕೆಂಪರಾಜು, ಜನಾರ್ದನ್, ಪ್ರತಾಪ್, ಶಿವಮ್ಮ, ಸರೋಜಮ್ಮ, ಜಯರಾಮ್, ಪುಟ್ಟಮಣಿ, ಲಕ್ಷ್ಮಮ್ಮ, ರಂಗಸ್ವಾಮಿ,ನವೀನ್, ಮಹೇಶ್, ನಾರಾಯಣ್ ಇದ್ದರು.