Asianet Suvarna News Asianet Suvarna News

ಮೈಸೂರು : ದಸರಾ ಆನೆಗಳಿಗೆ ತಾಲೀಮು

  • ದಸರಾ ಗಜಪಡೆಗೆ ನಡಿಗೆ ತಾಲೀಮು ಮುಂದುವರೆದಿದ್ದು, ಮಂಗಳವಾರ ಧನಂಜಯ ಆನೆ ಮೇಲೆ ಮರಳು ಮೂಟೆಯ ಭಾರ ಹೊರಿಸುವ ಮೂಲಕ ತಾಲೀಮು 
  • ಅಭಿಮನ್ಯು ಆನೆಯು ಸುಮಾರು 600 ಕೆ.ಜಿ ಭಾರ ಹೊತ್ತು ಯಶಸ್ವಿಯಾಗಿ ಸಾಗಿತು
Mysuru dasara  Training To elephants snr
Author
Bengaluru, First Published Sep 22, 2021, 10:09 AM IST

 ಮೈಸೂರು (ಸೆ.22):  ದಸರಾ (Dasara) ಗಜಪಡೆಗೆ ನಡಿಗೆ ತಾಲೀಮು ಮುಂದುವರೆದಿದ್ದು, ಮಂಗಳವಾರ ಧನಂಜಯ ಆನೆ ಮೇಲೆ ಮರಳು ಮೂಟೆಯ ಭಾರ ಹೊರಿಸುವ ಮೂಲಕ ತಾಲೀಮು ನಡೆಸಲಾಯಿತು. ಮೊದಲ ದಿನ ಅಭಿಮನ್ಯು ಆನೆಯು ಸುಮಾರು 600 ಕೆ.ಜಿ ಭಾರ ಹೊತ್ತು ಯಶಸ್ವಿಯಾಗಿ ಸಾಗಿತು. ಎರಡನೇ ದಿನ ಧನಂಜಯ ಆನೆ ಮೇಲೆ ಸುಮಾರು 400 ಕೆ.ಜಿ ಭಾರ ಹೊರಿಸಿ, ಅರಮನೆ ಆವರಣದೊಳಗೆ ಎರಡು ಸುತ್ತು ಅಭ್ಯಾಸ ಮಾಡಿಸಲಾಯಿತು. ಧನಂಜಯ ಆನೆ ಜೊತೆಗೆ ಅಭಿಮನ್ಯು, ಕಾವೇರಿ, ಚೈತ್ರ, ಲಕ್ಷ್ಮಿ, ವಿಕ್ರಮ, ಗೋಪಾಲಸ್ವಾಮಿ ಮತ್ತು ಅಶ್ವತ್ಥಾಮ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.

ಫಿರಂಗಿ ದಳದಿಂದ ಒಣ ತಾಲೀಮು:  ಮೈಸೂರು ಅರಮನೆ (palace) ಮುಂಭಾಗದ ಪ್ರಾಂಗಣದಲ್ಲಿ 7 ಪಿರಂಗಿಗಳನ್ನು ಬಳಸಿ ಕುಶಾಲತೋಪು ಸಿಡಿಸುವ ಸಂಬಂಧ ಪಿರಂಗಿ ದಳದ 30 ಸಿಬ್ಬಂದಿ ಮಂಗಳವಾರ ಒಣ ತಾಲೀಮು ನಡೆಸಿದರು.

ಸರಪಳಿ ಕಿತ್ತುಕೊಂಡು ಓಡಾಡಿದ ಅರಮನೆ ಆನೆ!

ದಸರಾ ಜಂಬೂಸವಾರಿ ವೇಳೆ 21 ಸುತ್ತು ಸಿಡಿಮದ್ದನ್ನು ಒಂದೇ ನಿಮಿಷದಲ್ಲಿ ಪಿರಂಗಿಗಳನ್ನು ಬಳಸಿ ಸಿಡಿಸಲಾಗುತ್ತದೆ. ಈ ಸವಾಲಿನ ಕೆಲಸ ನಿಬಾಯಿಸಲು 30 ಸಿಬ್ಬಂದಿಯ ಪಿರಂಗಿ ದಳ ಒಣ ತಾಲೀಮು ನಡೆಸುವ ಮೂಲಕ ಸಜ್ಜಾಗಿದೆ.

ಅರಮನೆ ಅವರಣ ಬಿಟ್ಟು ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಆನೆಗಳ ತಾಲೀಮು ವಿಚಾರವನ್ನು ಚರ್ಚಿಸಿ ತೀರ್ಮಾನಿಸಲಾಗುವುದು. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಅರಮನೆ ಅವರಣದಲ್ಲಿ ಮಾತ್ರ ಸದ್ಯಕ್ಕೆ ಅವಕಾಶ ಇರುವುದು. ಜಂಬೂಸವಾರಿ ತಾಲೀಮಿನ ಮಾರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ದಸರಾ ಉದ್ಘಾಟಕರ ಅಯ್ಕೆ ಸಂಬಂಧ ಜಿಲ್ಲಾಡಳಿತದಿಂದ ಯಾವುದೇ ಪಟ್ಟಿಕಳುಹಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ.

- ಡಾ. ಬಗಾದಿ ಗೌತಮ್‌, ಜಿಲ್ಲಾಧಿಕಾರಿ

Follow Us:
Download App:
  • android
  • ios