Asianet Suvarna News Asianet Suvarna News

ಸರಪಳಿ ಕಿತ್ತುಕೊಂಡು ಓಡಾಡಿದ ಅರಮನೆ ಆನೆ!

  • ಮೈಸೂರು ಅರಮನೆ ಆವರಣದಲ್ಲಿರುವ ಆನೆ ಬಿಡಾರದಲ್ಲಿ ಅರಮನೆಗೆ ಸೇರಿದ ಜೆಮಿನಿ ಎಂಬ ಹೆಣ್ಣಾನೆಯು ಕಬ್ಬಿಣದ ಸರಪಳಿ ಕಿತ್ತುಕೊಂಡು ಓಡಾಡಿತು
  • ಆನೆಯ ನಡೆಯಿಂದ ಸ್ಥಳದಲ್ಲಿ ಆತಂಕ ಸೃಷ್ಟಿ
employees fear after Elephant breaks chain   in mysuru snr
Author
Bengaluru, First Published Sep 21, 2021, 7:12 AM IST
  • Facebook
  • Twitter
  • Whatsapp

ಮೈಸೂರು (ಸೆ.21): ಮೈಸೂರು ಅರಮನೆ ಆವರಣದಲ್ಲಿರುವ ಆನೆ ಬಿಡಾರದಲ್ಲಿ ಅರಮನೆಗೆ ಸೇರಿದ ಜೆಮಿನಿ ಎಂಬ ಹೆಣ್ಣಾನೆಯು ಕಬ್ಬಿಣದ ಸರಪಳಿ ಕಿತ್ತುಕೊಂಡು ಓಡಾಡಿ ಆತಂಕ ಮೂಡಿಸಿತ್ತು.

ದಸರಾಕ್ಕೆ ಆಗಮಿಸಿರುವ ಗಜಪಡೆಯು ಮರಳು ಮೂಟೆ ಭಾರ ಹೊರುವ ತಾಲೀಮು ಮುಗಿಸಿ ಬಿಡಾರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಆಗ ಅಲ್ಲೇ ಸಮೀಪದಲ್ಲಿರುವ ಮರದ ಕೆಳಗೆ ಕಬ್ಬಿಣದ ಸರಪಳಿಯಿಂದ ಅರಮನೆಯ 6 ಹೆಣ್ಣಾನೆಗಳನ್ನು ಕಟ್ಟಿಹಾಕಲಾಗಿತ್ತು. 

ಹಾಸನ; ನಿಲ್ಲದ ಕಾಡಾನೆ ಹಾವಳಿ, ತಲೆ ಮೇಲೆ ಕೈಹೊತ್ತು ಕುಳಿತ ರೈತ

ಇದರಲ್ಲಿ ಜೆಮಿನಿ ಎಂಬ ಆನೆ ಸರಪಳಿ ಕಿತ್ತುಕೊಂಡು ಓಡಾಡುವ ಮೂಲಕ ಆತಂಕ ಸೃಷ್ಟಿಸಿತು. ಈ ಸಂದರ್ಭದಲ್ಲಿ ಗಜಪಡೆ ಮಾವುತರು, ಕಾವಾಡಿಗಳು ಅಭಿಮನ್ಯು ಮತ್ತು ಧನಂಜಯ ಆನೆಗಳ ಮೂಲಕ ಜೆಮಿನಿ ಆನೆಯನ್ನು ನಿಯಂತ್ರಣಕ್ಕೆ ತಂದರು.  

Follow Us:
Download App:
  • android
  • ios