Asianet Suvarna News Asianet Suvarna News

Mysuru Dasara 2022 : ಗಜಪಡೆಗಳಿಗೆ ಸಿಡಿಮದ್ದು ತಾಲೀಮಿನ‌ ಹೈಲೈಟ್ಸ್

ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ತಾಲೀಮು ಶುರುವಾಗಿದ್ದು, ಬೆದರಿದ ಆನೆಗಳು, ನೆಗೆದು ಜಿಗಿಯಲೆತ್ನಿಸಿದ ಕುದುರೆಗಳು. ಇದು ಇವತ್ತು ಮೈಸೂರಿನಲ್ಲಿ ಸಿಡಿಮದ್ದು ತಾಲೀಮಿನ‌ ಹೈಲೈಟ್ಸ್ ಇಲ್ಲಿದೆ.

Mysuru Dasara 2022 : Practices To Jumboo Savari Elephants rbj
Author
First Published Sep 12, 2022, 5:27 PM IST

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
 

ಮೈಸೂರು, (ಸೆಪ್ಟೆಂಬರ್.12): ವಿಶ್ವವಿಖ್ಯಾತ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತಾಲೀಮು ಚುರುಕು ಗೊಳಿಸಲಾಗಿದೆ. ಇಂದು(ಸೋಮವಾರ) ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಸಿಡಿ ಮದ್ದು ಸಿಡಿಸಿ ಅಭ್ಯಾಸ ನಡೆಸಲಾಯ್ತು. 

ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಜಂಬೂಸವಾರಿಯಂದು ಸಿಡಿ ಮದ್ದು ಗದ್ದಲಕ್ಕೆ ವಿಚಲಿತಗೊಂಡು ರಂಪಾಟ ಮಾಡುವುದನ್ನು ತಡೆಯಲು ಹೀಗೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಯ್ತು. ಬೆದರಿದ ಆನೆಗಳು, ನೆಗೆದು ಜಿಗಿಯಲೆತ್ನಿಸಿದ ಕುದುರೆಗಳು. ಇದು ಇವತ್ತು ಮೈಸೂರಿನಲ್ಲಿ ಸಿಡಿಮದ್ದು ತಾಲೀಮಿನ‌ ಹೈಲೈಟ್ಸ್ ಇಲ್ಲಿದೆ.

Draupadi Murmu: ದಸರಾ ಮಹೋತ್ಸವ ಉದ್ಘಾಟನೆಗೆ ರಾಷ್ಟ್ರಪತಿ ಇದೇ ಮೊದಲು ಆಗಮನ

ಹೌದು ...ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ  ಆನೆಗಳಿಗೆ ಇಂದು ವಿಶೇಷ ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯವರು ಫಿರಂಗಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಆನೆಗಳು ಹೊರಗಿನ ಭಾರೀ ಸದ್ದಿಗೆ ಹೊಂದಿಕೊಳ್ಳುವಂತೆ ತರಬೇತಿ ನೀಡಿದರು. ವಿಜಯದಶಮಿಯ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ  ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು.

ಅರಮನೆಗೆ ಹೊಂದಿಕೊಂಡಂತಿರುವ ಕೋಟೆ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಆನೆಗಳಿಗೆ ಈ ತರಬೇತಿ ನೀಡಲಾಯಿತು. ಒಟ್ಟು 14 ಆನೆಗಳು, 43 ಕುದುರೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು. ಸಿಡಿಮದ್ದು ಸಿಡಿಸಿದ ವೇಳೆ ಇದೆ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿದ್ದ  ಶ್ರೀರಾಮ, ಪಾರ್ಥಸಾರಥಿ, ಸುಗ್ರೀವ  ಆನೆಗಳು ಸ್ವಲ್ಪ ವಿಚಲಿತಗೊಂಡವು. ಉಳಿದ ಆನೆಗಳು ಸದ್ದಿಗೆ ಬೆದರದೆ ಆರಾಮಗಿ ನಿಂತಿದ್ವು. ಇನ್ನು ಸಿಡಿಮದ್ದು ಶಬ್ದಕ್ಕೆ ಕುದುರೆಗಳು ಸ್ವಲ್ಪ ಬೆದರಿ ಓಡಲು ಯತ್ನಿಸಿದ್ವು. 

ಕುದುರೆ ಮೇಲಿದ್ದವರು ಕುದುರೆಗಳನ್ನು ನಿಯಂತ್ರಿಸಿದರು. ಇನ್ನುಳಿದಂತೆ ಯಾವುದೇ ತೊಂದರೆಯಾಗಲಿಲ್ಲ‌ ದಸರೆಯವರೆಗೂ ಇನ್ನು 2 ಬಾರಿ ಈ ರೀತಿ ತಾಲೀಮು ನೀಡಲಾಗುತ್ತದೆ. ತಾಲೀಮಿಗೂ ಮುನ್ನವೆ ಅಶ್ವಾರೋಹಿದಳದ ಕುದುರೆ ಬೆದರಿದ್ದಕ್ಕೆ ಗಜಪಡೆ ವಿಚಲಿತರಾದವು, ಈ ವೇಳೆ ಅನೆಗಳನ್ನ ನಿಯಂತ್ರಿಸಲಾಯ್ತು‌.

ಇದೇ ಮೊದಲ ಬಾರಿಗೆ ದಸರಗೆ ಬಂದಿರುವ ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಶಬ್ದಕ್ಕೆ ಹೆದರುವ ರೀತಿ ವರ್ತಿಸುತ್ತಾರೋ ಅನ್ನೋ ಆತಂಕ ಅಧಿಕಾರಿಗಳಲ್ಲಿ ಇತ್ತು.ಆದ್ರೆ ಆ ಆನೆಗಳು ಸಹಾ ಇವತ್ತು ಎಲ್ಲಾ ಆನೆಗಳಂತೆ ಉತ್ಸಾಹದಿಂದಲೇ ತಾಲೀಮಿನಲ್ಲಿ ಪಾಲ್ಗೊಂಡಿದ್ವು. ಇದುಅಧಿಕಾರಿಗಳಿಗೆ ಸಂತಸ ತಂದಿದೆ. 

ಇನ್ನೂ ಎರಡನೇ ಹಂತದ ಸಿಡಿಮದ್ದು ಸಿಡಿಸುವ ತಾಲೀಮು 16 ಹಾಗೂ 23 ರಂದು ನಡೆಯಲಿದ್ದು, ದಸರಾಗೆ ಗಜಪಡೆಯನ್ನ ಭರ್ಜರಿಯಾಗಿ ಸಿದ್ದಗೊಳಿಸಲಾಗ್ತಿದೆ.

ಪ್ರತಿ ವರ್ಷ ಬರಲು ಆರಂಭಿಸಿದ್ದು ಯಡಿಯೂರಪ್ಪ: ಪ್ರತಿ ವರ್ಷ ಭಾಗವಹಿಸುವ ಪರಂಪರೆ ಆರಂಭಿಸಿದ್ದು ಬಿ.ಎಸ್‌. ಯಡಿಯೂರಪ್ಪ ಮೊದಲೆಲ್ಲಾ ದಸರೆ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬರುತ್ತಿರಲಿಲ್ಲ. ಆದರೆ 2008 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ದೇವೇಗೌಡರ ನಂತರ ಭಾಗವಹಿಸಿದ್ದಲ್ಲದೇ 2009, 2010- ಹೀಗೆ ಸತತ ಮೂರು ವರ್ಷ ಭಾಗವಹಿಸಿದ್ದರು. ನಂತರ ಸಿಎಂಗಳಾದ ಡಿ.ವಿ. ಸದಾನಂದಗೌಡ- 2011, ಜಗದೀಶ್‌ ಶೆಟ್ಟರ್‌- 2012 ಈ ಸಂಪ್ರದಾಯ ಪಾಲಿಸಿದರು. 

Follow Us:
Download App:
  • android
  • ios