Asianet Suvarna News Asianet Suvarna News

Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುತ್ತಿದ್ದಾರೆ. ಕಾಕತಾಳೀಯ ಎಂಬಂತೆ ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನದ ಪ್ರತಿರೂಪ ನಿರ್ಮಿಸಲಾಗುತ್ತಿದೆ!. 

mysuru dasara 2022 flower show is starting from september 26 in mysuru palace premises gvd
Author
First Published Sep 22, 2022, 10:27 PM IST

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಸೆ.22): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸುತ್ತಿದ್ದಾರೆ. ಕಾಕತಾಳೀಯ ಎಂಬಂತೆ ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನದ ಪ್ರತಿರೂಪ ನಿರ್ಮಿಸಲಾಗುತ್ತಿದೆ!. ದಸರೆ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನವು ಹಾರ್ಡಿಂಜ್‌ ವೃತ್ತ ಬಳಿ ಇರುವ ನಿಶಾದ್‌ ಭಾಗ್‌- ಕುಪ್ಪಣ್ಣ ಪಾರ್ಕ್ನಲ್ಲಿ ಸೆ.26 ರಿಂದ ಅ.5 ರವರೆಗೆ ನಡೆಯಲಿದೆ.

ಮೊದಲೆಲ್ಲಾ ದಸರೆ ಎಂದರೇ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ, ಅರಮನೆ ದರ್ಬಾರ್‌ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮ, ಕುಸ್ತಿ ಪಂದ್ಯಾವಳಿ, ಚಾಮುಂಡಿ ವಿಹಾರದಲ್ಲಿ ಕ್ರೀಡಾಕೂಟ, ಅರಮನೆ ಉತ್ತರ ದ್ವಾರದಲ್ಲಿರುವ ಕರ್ಜನ್‌ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ದೊಡ್ಡಕೆರೆ ಮೈದಾನದಲ್ಲಿ ವಸ್ತು ಪ್ರದರ್ಶನ, ಜಗನ್ಮೋಹನ ಅರಮನೆಯಲ್ಲಿ ಕವಿಗೋಷ್ಠಿ, ಕೊನೆಯ ದಿನ ಜಂಬೂಸವಾರಿ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಎಂಬಂತೆ ಆಗಿತ್ತು.

ಬದಲಾದ ಕಾಲಕ್ಕೆ ತಕ್ಕಂತೆ ಯುವ ಸಂಭ್ರಮ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಗ್ರಾಮೀಣ ದಸರಾ, ರೈತ ದಸರಾ, ಆಹಾರ ಮೇಳ, ಪುಸ್ತಕ ಮೇಳ, ನವರಾತ್ರಿ ರಂಗೋತ್ಸವ, ಪುರಭವನ, ಜಗನ್ಮೋಹನ ಅರಮನೆ, ವೀಣೆ ಶೇಷಣ್ಣ ಭವನ, ಕಲಾಮಂದಿರ, ಚಿಕ್ಕಗಡಿಯಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾರಂಪರಿಕ ನಡಿಗೆ, ಮನೆ ಮನೆ ದಸರಾ, ಸಾಕು ಪ್ರಾಣಿಗಳ ಪ್ರದರ್ಶನ, ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ, ಏರ್‌ ಶೋ, ವೈಮಾನಿಕ ಹಾರಾಟ, ಗಾಳಿಪಟ ಸ್ಪರ್ಧೆ, ವಿಂಟೇಜ್‌ ಕಾರುಗಳ ರಾರ‍ಯಲಿ, ಕರಕುಶಲ ವತ್ತುಗಳ ಪ್ರದರ್ಶನ- ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ಬರಲಾಗುತ್ತಿದೆ. ಇಷ್ಟಾದರೂ ಜಂಬೂಸವಾರಿಯ ನಂತರ ಅತಿ ಹೆಚ್ಚು ಜನರು ಭೇಟಿ ನೀಡುವ ಕಾರ್ಯಕ್ರಮ ಎಂದರೇ ದಸರಾ ಫಲಪುಷ್ಪ ಪ್ರದರ್ಶನ.

Mysuru Dasara 2022: ಈ ಬಾರಿ 124 ಕಿ.ಮೀ. ದಸರಾ ದೀಪಾಲಂಕಾರ

ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ದಸರೆಯನ್ನು ಅರಮನೆ ಆವರಣಕ್ಕೆ ಸೀಮಿತವಾಗಿ ಸರಳವಾಗಿ ಆಚರಿಸಲಾಗಿತ್ತು. ಹೀಗಾಗಿ ಫಲಪುಷ್ಪ ಪ್ರದರ್ಶನ ಇರಲಿಲ್ಲ. 2018-19 ರಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಅಂದಾಜು 4 ರಿಂದ 5 ಲಕ್ಷ ಜನ ಭೇಟಿ ನೀಡಿದ್ದರು. ಈ ಬಾರಿ ಅದ್ಧೂರಿಯಾಗಿ ದಸರೆ ಆಚರಿಸುತ್ತಿರುವುದರಿಂದ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ತೋಟಗಾರಿಕೆ ಸಂಘದಿಂದ ಫಲಪುಷ್ಪ ಪ್ರದರ್ಶನವನ್ನು ಮತ್ತಷ್ಟುಆಕರ್ಷಕವಾಗಿ ಏರ್ಪಡಿಸಲಾಗುತ್ತಿದೆ. ಇದಕ್ಕಾಗಿ ಸಂಘದ ಅಧ್ಯಕ್ಷರೂ ಆದ ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ಅವರಿಂದ ಅನುಮೋದನೆ ಪಡೆಯಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುವೇದಾ ತಿಳಿಸಿದ್ದಾರೆ.

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅಂಗವಾಗಿ ಈ ಬಾರಿ ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿಕೆಗಳಿಂದ ಸುಮಾರು 20 ಅಡಿ ಎತ್ತರದಲ್ಲಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗುತ್ತದೆ. ಕಳೆದ ವರ್ಷ ನಮ್ಮ ನ್ನು ಅಗಲಿದ ’ಪವರ್‌ಸ್ಟಾರ್‌’ ಪುನಿತ್‌ ರಾಜ್‌ ಕುಮಾರ್‌ ಅವರ ಸ್ಮರಾಣಾರ್ಥ ಅವರ ಸಾಧನೆಯ ವಿವರದೊಂದಿಗೆ ಪುತ್ಥಳಿಗಗಳನ್ನು ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಲಾಗುತ್ತದೆ

ಮೈಸೂರು ರಾಜರು ತಮ್ಮ ಆಳ್ವಿಕೆ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ಥಂಡೀ ಸಡಕ್‌ (ತಂಪಾದ ನೆರಳಿನ ವಾತಾವರಣ) ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆ ಮುಂದೆ ನಿರ್ಮಿಸಲಾಗುತ್ತದೆ. ಏಳು ಅಡಿ ಜೇನು ಹುಳು, 12 ಅಡಿ ಜಿರಾಫೆ ಹಾಗೂ ಹಲವು ಮಕ್ಕಳಿಗೆ ಸಂಬಂದಿಸಿದ ಗೊಂಬೆಗಳನ್ನು ಹೂವಿನಿಂದ ಅಲಂಕರಿಸಲಾಗುವುದು. ಏಳು ಅಡಿ ದಪ್ಪ ಮೆಣಸಿನಕಾಯಿಯಿಂದ ಒಂದು ಮನೆಯನ್ನು ನಿರ್ಮಿಸಲಾಗುವುದು. ವೈವಿಧ್ಯಮಯ ಪರಿಕಲ್ಪನೆಗಳ ನಿರ್ಮಾಣದ ಜೊತೆಗೆ ಡೈರಿ ಡೇ, ಉಲ್ಲಾಸ್‌ ಅಗಬತ್ತಿ, ಸುವರ್ಣ ಚಾನಲ್‌ ಸಹಯೋಗದಲ್ಲಿ ಸಂಜೆಯ ವೇಳೆ ಅನೇಕ ಮನರಂಜನೆ ಕಾರ್ಯಮಗಳನ್ನು ಏರ್ಪಡಿಸಲಾಗುವುದು. ತೋಟಗಾರಿಕೆ ಇಲಾಖೆ ಬೆಳೆಸಿರುವ ಸುಮಾರು 50 ಸಾವಿರ ಗಿಡಗಳಿಂದ ಇಡೀ ಕುಪ್ಪಣ್ಣ ಉದ್ಯಾನವನ್ನು ಅಲಂಕರಿಸಲಾಗುತ್ತಿದೆ.

Mysuru Dasara 2022: ಕುಶಾಲತೋಪು ಶಬ್ದಕ್ಕೆ ಹೊಂದಿಕೊಳ್ಳುತ್ತಿರುವ ಗಜಪಡೆ

ಕೆಲವೊಂದು ಗಿಡಗಳನ್ನು ಪೂನಾದಿಂದಲೂ ತರಿಸಲಾಗುತ್ತಿದೆ.ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಇರಲಿವೆ. ರೈತರಿಗೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ದೊರೆಯುವ ಸೌಲಭ್ಯಗಳನ್ನು ಪ್ರಚುರಪಡಿಸುವ ಮಳಿಗೆಗಳನ್ನು ತೆರೆಯಲು ಐಎಎಚ್‌ಆರ್‌, ಸಿಎಫ್‌ಟಿಆರ್‌ಐ, ಎಚ್‌ಎಚ್‌ಬಿ ಮೊದಲಾದವರ ಜೊತೆ ಪತ್ರ ವ್ಯವಹಾರ ಮಾಡಲಾಗಿದೆ.
- ಸುವೇದಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು

Follow Us:
Download App:
  • android
  • ios