Mysuru : ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಬಿಸಿಎ ಕೋರ್ಸ್‌

ಮೈಸೂರಿನ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಬಿ.ಕಾಂ, ಬಿಬಿಎ ಜೊತೆಗೆ ಬಿಸಿಎ ಕೋರ್ಸ್‌ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

Mysuru : BCA Course at Maharani Women's College of Commerce snr

  ಮೈಸೂರು :  ಮೈಸೂರಿನ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಬಿ.ಕಾಂ, ಬಿಬಿಎ ಜೊತೆಗೆ ಬಿಸಿಎ ಕೋರ್ಸ್‌ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

10 ವರ್ಷಗಳ ಹಿಂದೆ (2013-14) ಕಾಲೇಜಿನಲ್ಲಿ ಬಿಕಾಂ ಮತ್ತು ಬಿಬಿಎ ಹಾಗೂ ಎಂಕಾಂ, ಎಂಬಿಎ ನಡೆಸಲು ಅನುಮತಿ ನೀಡಲಾಗಿತ್ತು. ಇದೀಗ 2023- 24ನೇ ಶೈಕ್ಷಣಿಕ ಸಾಲಿನಿಂದ ಬಿಸಿಎ (ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌) ಕೋರ್ಸ್‌ ತೆರೆಯಲು ಸರ್ಕಾರ ಅನುಮತಿ ನೀಡಿ, ಪ್ರಥಮ ವರ್ಷಕ್ಕೆ 120 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಕಾಲೇಜಿನ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ಈಗಾಗಲೇ ಕಾಲೇಜಿನಲ್ಲಿ ಬಿಕಾಂ, ಬಿಬಿಎ, ಎಂಕಾಂ, ಎಂಬಿಎ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ 4000 ಹೆಚ್ಚಿದೆ. ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟಜಾತಿ ಮತ್ತು ಪಂಡಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ವಿಶೇಷ. ಇದಕ್ಕೆ ಪ್ರಮುಖ ಕಾರಣ ಶುಲ್ಕ ತುಂಬಾ ಕಡಿಮೆ. ಹೆಣ್ಣು ಮಕ್ಕಳಿಗಂತೂ ಉಚಿತ ಶಿಕ್ಷಣವೇ ಸಿಗುತ್ತದೆ. ಇನ್ನು ಬಡ, ಹಿಂದುಳಿದ ಹಾಗೂ ಎಸ್ಸಿ, ಎಸ್ಟಿಮಕ್ಕಳು ಖಾಸಗಿ ಕಾಲೇಜುಗಳಲ್ಲಿ ಬಿಸಿಎ ಕೋರ್ಸ್‌ಗೆ ಸೇರಿ ವ್ಯಾಸಂಗ ಮಾಡಬೇಕಾದರೆ . 40 ರಿಂದ 50 ಸಾವಿರ ಶುಲ್ಕ ಪಾವತಿಸಬೇಕಿದೆ. ಇಷ್ಟೊಂದು ಹಣ ಪಾವತಿಸಿ ಓದುವುದು ತುಂಬಾ ಕಷ್ಟ. ಪೋಷಕರು ಸಾಲ ಮಾಡಬೇಕಾದ ಪ್ರಸಂಗವೂ ಎದುರಾದ ಸನ್ನಿವೇಶಗಳಿವೆ. ದುಬಾರಿ ಶುಲ್ಕ ಪಾವತಿಸಲಾಗಿದೆ ಎಷ್ಟೋ ಮಂದಿ ವಿದ್ಯಾರ್ಥಿಗಳು ಬಿಸಿಎ ಓದುವುದನ್ನೇ ಬಿಟ್ಟು, ಕಡಿಮೆ ಶುಲ್ಕದ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ನಿದರ್ಶನಗಳೂ ಇವೆ.

ಇಂತಹ ಸನ್ನಿವೇಶದಲ್ಲಿ ಸರ್ಕಾರಿ ಸ್ವಾಮ್ಯದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 120 ಮಕ್ಕಳನ್ನು ಪ್ರಥಮ ವರ್ಷದ ಬಿಸಿಎಗೆ ಪ್ರವೇಶಾತಿ ಮಾಡಿಕೊಳ್ಳಲು ಅನುಮತಿ ನೀಡಿರುವುದು ಹೆಮ್ಮೆಯ ಸಂಗತಿ. ಜು.14 ರಿಂದಲೇ ಬಿಸಿಎಗೆ ನೇರ ಪ್ರವೇಶಾತಿ ನೀಡಲಾಗುವುದು. ಈ ಅವಕಾಶವನ್ನು ಮೈಸೂರು ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳ ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಮಣ್ಣ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios