ಮೈಸೂರು,[ಫೆ.07]: ಮೈಸೂರಿನ ಜಿಲ್ಲಾ ನ್ಯಾಯಾಧೀಶೆಯನ್ನು ವರ್ಗಾಯಿಸುವಂತೆ ಇಲ್ಲಿನ ಸ್ಥಳೀಯ ವಕೀಲ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ. 

ಮೈಸೂರಿನ ಒಂದನೇ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಶಾಂತಿ ಅವರು ವಕೀಲರನ್ನ ಗೌರವಿಸುವುದಿಲ್ಲ, ಕಕ್ಷಿದಾರರೇ ವಾದ ಮಾಡಿ ಎಂದು ಮೈಸೂರು ವಕೀಲರ ಸಂಘ ಈ ಹಿಂದೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ದೂರು ನೀಡಿಲಾಗಿತ್ತು. 

ಬಳಿಕ ಕೆಲ ದಿನಗಳು ಮಾತ್ರ ಸುಗಮ ಕಲಾಪ ನಡೆದಿತ್ತು.ಇದೀಗ ಮತ್ತೆ ವಕೀಲರು ಕೆಲಸ ನಿರ್ವಹಿಸಲು ತೊಂದರೆ ಕೊಡುತ್ತಿದ್ದಾರೆಂದು ದೂರು ಉಚ್ಛ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ.

ನ್ಯಾಯಾಧೀಶೆಯನ್ನ ವರ್ಗಾವಣೆ ಮಾಡಬೇಕು. ಜತೆಗೆ ಮೈಸೂರಿನಲ್ಲಿರೋ 5 ಕೌಟುಂಬಿಕ ನ್ಯಾಯಾಲಯ ಅಗತ್ಯವಿಲ್ಲ. ಕೇವಲ 2 ನ್ಯಾಯಾಲಯ ಸಾಕು ಎಂದು ಮನವಿ ಮಾಡಿದ್ದಾರೆ.