Asianet Suvarna News Asianet Suvarna News

Mysuru : ಶಿಕ್ಷಣ ಇಲಾಖೆ ಕಟ್ಟಡಗಳ ನಿರ್ಮಾಣಕ್ಕೆ 166 ಕೋಟಿ ರು. ಅನುದಾನ

ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಯ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಸುಮಾರು 166 ಕೋಟಿ ರು. ಗಳ ಅನುದಾನ ನೀಡಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

Mysuru  166 crores for construction of education department buildings snr
Author
First Published Dec 15, 2022, 4:54 AM IST

  ಕೆ.ಆರ್‌. ನಗರ (ಡಿ. 15):  ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಯ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಸುಮಾರು 166 ಕೋಟಿ ರು. ಗಳ ಅನುದಾನ ನೀಡಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದಲ್ಲಿ 20.46 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ಡಾ. ಅಂಬೇಡ್ಕರ್‌ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

ಬಡ ಮಕ್ಕಳು ಕೂಡ ಇಂಗ್ಲೀಷ್‌ (English)  ಮಾಧ್ಯಮದಲ್ಲಿ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಈ ಹಿಂದೆ ಹೆಚ್‌.ಡಿ ಕುಮಾರಸ್ವಾಮಿಯವರು (HD Kumaraswamy)  ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕ್ಷೇತ್ರದ 8 ಕಡೆಗಳಲ್ಲಿ ವಸತಿ ಶಾಲೆಗಳನ್ನು ಆರಂಭಿಸಿದ್ದು, ಇದರಿಂದ 2 ಸಾವಿರ ಮಕ್ಕಳು ಪ್ರತಿವರ್ಷ ಉತ್ತಮ ಶಿಕ್ಷಣ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.

ಕಾಮಗಾರಿಗಳನ್ನು ಮಾಡುವ ಸಂಧರ್ಭದಲ್ಲಿ ಗುಣಮಟ್ಟಕಾಪಾಡುವಂತೆ ಎಲ್ಲರಿಗೂ ಹೇಳುತ್ತೇನೆ ಕೆಲವರು ಹಣದ ಆಸೆಗೆ ಬಿದ್ದು ಕಳಪೆ ಕಾಮಗಾರಿಗಳನ್ನು ಮಾಡುತ್ತಾರೆ ಆದರೆ ಈ ವಸತಿ ನಿಲಯದ ಕಟ್ಟಡವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿರುವ ಗುತ್ತಿಗೆದಾರರಾದ ಕೃಷ್ಣಾರೆಡ್ಡಿ ಮತ್ತು ರಘುರಾಮರೆಡ್ಡಿ ಅವರುಗಳನ್ನು ಅಭಿನಂದಿಸುವುದಾಗಿ ನುಡಿದರು.

Karnataka : 17ಕ್ಕೆ ರಾಜ್ಯಾದ್ಯಂತ ಶಾಲಾ ಕಾಲೇಜ್‌ ಬಂದ್‌

ವಸತಿಶಾಲೆಯ ಮಕ್ಕಳಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು, ಈ ಸಂದರ್ಭದಲ್ಲಿ ವಸತಿ ಶಾಲೆಯ ಸಿಬ್ಬಂದಿಗಳ ಪರವಾಗಿ ಪ್ರಾಂಶುಪಾಲ ಸುರೇಶ್‌ ಶಾಸಕರನ್ನು ಸನ್ಮಾನಿಸಿದರು.

ಹಳಿಯೂರು ಗ್ರಾಪಂ ಅಧ್ಯಕ್ಷ ದಿನೇಶ್‌, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಎಚ್‌.ಆರ್‌. ಮಹೇಶ್‌, ಮಾಜಿ ನಿರ್ದೇಶಕ ಎಸ್‌.ಟಿ ಕೀರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಬಿ.ಆರ್‌. ಕುಚೇಲ್‌, ಜಿಲ್ಲಾ ಯುವ ಜೆಡಿಎಸ್‌ ಮುಖಂಡ ಎಚ್‌.ಕೆ. ಮಧುಚಂದ್ರ, ಮುಖಂಡರಾದ ಬಿ.ರಮೇಶ್‌, ನಾಗರಾಜು, ತಹಸೀಲ್ದಾರ್‌ ಮೋಹನ್‌ಕುಮಾರ್‌, ಇಒ ಎಚ್‌.ಕೆ. ಸತೀಶ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್‌, ಪಿಎಸ್‌ಐ ಕುಮುದ, ಪಿಡಿಒ ಧನಂಜಯ ಇದ್ದರು.

5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ

ಬೆಂಗಳೂರು (ಡಿ.13): 2023ರಿಂದಲೇ ರಾಜ್ಯ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ. ಮಾತ್ರವಲ್ಲ  ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. ಮುಂದಿನ ವರ್ಷದ ಮಾರ್ಚ್ ನಿಂದ ಪಠ್ಯಪುಸ್ತಕ ಆಧರಿಸಿ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಇದಕ್ಕೆ ರಾಜ್ಯ ಸರಕಾರ ಒಪ್ಪಿಗೆ ಕೂಡ ಸೂಚಿಸಿದೆ. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಂತಕ್ಕೆ ತಲುಪುವ ಮುನ್ನ ಅವರ ಕಲಿಕಾ ಮಟ್ಟಮೌಲ್ಯಮಾಪನ ಮಾಡುವ ದೃಷ್ಟಿಯಿಂದ 5 ಮತ್ತು 8ನೇ ತರಗತಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 10ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ಎದುರಿಸುವ ಮುನ್ನ 5 ಮತ್ತು 8ನೇ ತರಗತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದರು. ಅದರಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತರಿಂದ ಈ ಸಂಬಂಧ ಆದೇಶ ಪ್ರಕಟವಾಗಿದ್ದು, 2 ಗಂಟೆಯ ಅವಧಿ ಪರೀಕ್ಷೆ ನಡೆಯಲಿದೆ. 50 ಅಂಕಗಳ ನಿಗಧಿ ಪಡಿಸಲಾಗಿದೆ. ಅದರಲ್ಲಿ 40 ಅಂಕ ಲಿಖಿತ ಮತ್ತು 10 ಅಂಕ ಮೌಖಿಕ ಪರೀಕ್ಷೆ  ಆಗಿರಲಿದೆ.

ಉನ್ನತ ಶಿಕ್ಷಣ ಇಲಾಖೆ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್‌, ಡಿ.25ರಂದು

ಶಿಕ್ಷಣ ಗುಣಮಟ್ಟಕುಸಿದಿರುವ ಕಾರಣ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಬಾರಿ ಮಾರ್ಚ್ 9 2023 ರಿಂದ 17 ಮಾರ್ಚ್ 2023ರವರೆಗೆ 10 ನೇ ತರಗತಿ ವಾರ್ಷಿಕ ಪರೀಕ್ಷೆ ಜರುಗಲಿದೆ. ಏಪ್ರಿಲ್ 08 ಮತ್ತು ಏಪ್ರಿಲ್ 10 ರಂದು ಫಲಿತಾಂಶ ಪ್ರಕಟಿಸಲು ಉದ್ದೇಶಿಸಲಾಗಿದೆ. ಈ ನಡುವೆ  5 ಮತ್ತು 8ನೇ ತರಗತಿಗೆ  ಕೂಡ  ಪಬ್ಲಿಕ್‌ ಪರೀಕ್ಷೆ  ನಡೆಯಲಿದೆ

Follow Us:
Download App:
  • android
  • ios