chikkaballapura : ಹೆಣ್ಣಾಗಿ ಬದಲಾಗಿದ್ದ ದೇಗುಲದ ಧರ್ಮದರ್ಶಿ, ಅರ್ಚಕ ನಿಗೂಢ ಸಾವು

  • ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿಯ ಆದಿಶಕ್ತಿ ಕೋಳಾಲಮ್ಮ ದೇವಿಯ ದೇಗುಲದ ಧರ್ಮದರ್ಶಿ ಹಾಗೂ ಅರ್ಚಕ ಗುರುವಾರ ನಿಗೂಢ ಸಾವು
  •   ದೇವಾಲಯದ ಧರ್ಮದರ್ಶಿ ಮತೃ ಸ್ವರೂಪಿಣಿ ದೇವಿ ಆಲಿಯಾಸ್‌ ಶ್ರೀಧರ್‌ ಹಾಗೂ  ಅರ್ಚಕ  ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ
mysterious death of  Temple Trustee  And  priest in Chikkaballapura snr

ಚಿಕ್ಕಬಳ್ಳಾಪುರ (ನ.13): ಜಿಲ್ಲೆಯ ಚಿಂತಾಮಣಿ (chintamani) ತಾಲೂಕಿನ ಗುಟ್ಟಹಳ್ಳಿಯ ಆದಿಶಕ್ತಿ ಕೋಳಾಲಮ್ಮ ದೇವಿಯ ದೇಗುಲದ ಧರ್ಮದರ್ಶಿ (trustee) ಹಾಗೂ ಅರ್ಚಕ (Priest) ಗುರುವಾರ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಕೊಲೆ (Murder) ಶಂಕೆ ವ್ಯಕ್ತವಾಗಿದೆ.

ಮೃತರನ್ನು ದೇವಾಲಯದ ಧರ್ಮದರ್ಶಿ ಮತೃ ಸ್ವರೂಪಿಣಿ ದೇವಿ ಆಲಿಯಾಸ್‌ ಶ್ರೀಧರ್‌ ಹಾಗೂ ದೇವಾಲಯದ ಅರ್ಚಕ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ನಿವಾಸಿ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ.

ಹೆಣ್ಣಾಗಿ ಬದಲಾಗಿದ್ದ ಶ್ರೀಧರ್‌

ಶ್ರೀಧರ್‌ ಹೆಣ್ಣಿನ (lady) ಭಾವನೆಗಳಿಗೆ ಪರಿವರ್ತನೆ ಆದ ಬಳಿಕ ಗುಟ್ಟ ಹಳ್ಳಿಯಲ್ಲಿ 15 ವರ್ಷಗಳ ಹಿಂದೆ ಕೋಳಾಲಮ್ಮ ದೇವಿಯನ್ನು (kolalamma Temple) ಸ್ಥಾಪಿಸಿ ಭಕ್ತರಿಗೆ ಉಪದೇಶ ನೀಡುತ್ತಿದ್ದಳು. ದೇವಾಲಯಕ್ಕೆ ಬರುವರ ಭಕ್ತರ (Devotees) ಸಂಖ್ಯೆ ಹೆಚ್ಚಾದಾಗ ತನ್ನ ಶಿಷ್ಯ ಲಕ್ಷ್ಮೀಪತಿಯನ್ನು ಪೂಜಾರಿಯಾಗಿ ನೇಮಿಸಿಕೊಂಡಿದ್ದಳು. ಆದರೆ ಶುಕ್ರವಾರ ಬೆಳಗ್ಗೆ ಇವರಿಬ್ಬರ ಮೃತದೇಹಗಳು ದೇವಾಲಯದ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ಸಂಶಯ ವ್ಯಕ್ತವಾಗಿದ್ದು, ಚಿಂತಾಮಣಿ ಠಾಣೆಯಲ್ಲಿ (Chintamani Police Station) ಪ್ರಕರಣ ದಾಖಲಾಗಿದೆ.

ಧರ್ಮದರ್ಶಿ ದೇವಿ ಅಲಿಯಾಸ್‌ ಶ್ರೀಧರ ವಿವಿಧ ಸಮಾಜ ಸೇವಾ ಕಾರ್ಯಗಳ ಮೂಲಕವೂ ಸ್ಥಳೀಯ ಸುತ್ತಮುತ್ತಲಿನ ಜನರಲ್ಲಿ ಹೆಚ್ಚು ಪ್ರೀತಿ, ಭಕ್ತಿಗೆ ಪಾತ್ರವಾಗಿದ್ದರು. ಅವರ ನಿಗೂಢ ಸಾವಿನ ಪ್ರಕರಣ ಅಕ್ಕಪಕ್ಕದ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?

ಚಿಂತಾಮಣಿಯ ಗುಟ್ಟಹಳ್ಳಿ ಗ್ರಾಮದ ದೇವಾಲಯದ ಧರ್ಮದರ್ಶಿ ಹಾಗೂ ಅರ್ಚಕ ಅನುಮಾನಸ್ಪದ ಸಾವಿನ ಬಗ್ಗೆ ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌ರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಇಷ್ಟು, ಸದ್ಯಕ್ಕೆ ಇಬ್ಬರ ಕೊಲೆ ಅನುಮಾನಸ್ಪವಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಇಬ್ಬರು ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿವೆ. ಜೊತೆಗೆ ಸ್ಥಳದಲ್ಲಿ ಡೆತ್‌ ನೋಟ್‌ (Death Note) ಸಹ ಪತ್ತೆಯಾಗಿದೆ. ಅವರೇ ಅದು ಅವರುಗಳೇ ಬರೆದಿರುವುದು ಹೌದೋ, ಅಲ್ಲವೋ ಸ್ಪಷ್ಟವಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವೈದ್ಯಕೀಯ ವರದಿ ನಂತರವೇ ಸಾವಿನ ಬಗ್ಗೆ ಸ್ಪಷ್ಟತೆ ತಿಳಿಯಲಿದೆ ಎಂದು ಕನ್ನಡಪ್ರಭಗೆ ತಿಳಿಸಿದರು.

ಭಿಕ್ಷುಕಿ ಅತ್ಯಾಚಾರ ಕೊಲೆ : 

 ಮಲಗಿದ್ದ ಭಿಕ್ಷುಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ (Rape) ನಡೆಸಿ ಬಳಿಕ ಕೊಲೆ ಮಾಡಿರುವ ಘಟನೆ ಜಿಲ್ಲಾ ಕೇಂದ್ರದ ಸಂತೆ ಮಾರುಕಟ್ಟೆ(market) ಸಮೀಪದ ಮೀನು (Fish) ಹಾಗೂ ಮಾಂಸ ಮಾರಾಟದ ಮಳಿಗೆಗಳ ಮುಂದೆ ಗುರುವಾರ ರಾತ್ರಿ ನಡೆದಿದೆ.

ವಿಷಯ ಬೆಳಕಿಗೆ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು (Chikkaballapura City Police) ಸಿಸಿಟಿವಿ (CCTV) ದೃಶ್ಯಾವಳಿಗಳನ್ನು  ಗಮನಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅದೇ ಸ್ಥಳದಲ್ಲಿ ತಳ್ಳುವಗಾಡಿಯಲ್ಲಿ ಸಾಂಬಾರು ಪದಾರ್ಥ ಮಾರಾಟ ಮಾಡುವ ಅಬ್ದುಲ್‌ ಎಂದು ಗುರುತಿಸಲಾಗಿದೆ.

ಸುಮಾರು 40ರ್ಷ ವಯಸ್ಸಿನ ಭಿಕ್ಷುಕಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಈ ಕೃತ್ಯವೆಸಗಿದ್ದಾನೆ. ಕಾಮುಕ ಅಬ್ದುಲ್‌ ನಡೆಸಿದ ನೀಚ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಿದ್ರೆಯ ಮಂಪರಿನಲ್ಲಿದ್ದ ಭಿಕ್ಷುಕಿ ಮೇಲೆ ಎರಗಿದ್ದಾನೆ. ಮಹಿಳೆ (woman) ಎಚ್ಚರಗೊಂಡು ಜೋರಾಗಿ ಚೀರಾಡಿದಾಗ ಕಾಮುಕ ಮಹಿಳೆಯ ತಲೆ, ಮುಖಕ್ಕೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಆಕೆ, ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಕೊನೆಯುಸಿರೆಳೆದಿದ್ದಾಳೆ.

ಶುಕ್ರವಾರ ಬೆಳಗ್ಗೆ ಅಂಗಡಿ (shop) ತೆರೆಯಲು ಬಂದ ಮಾಲೀಕ ಮೃತ ಭಿಕ್ಷುಕಿ ಮೃತದೇಹ ಗಮಿನಿಸಿ ಪೊಲೀಸರಿಗೆ (Police) ವಿಷಯ ತಿಳಿಸಿದ್ದಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿ ತನಗೇನೂ ಗೊತ್ತಿಲ್ಲದಂತೆ ಆರೋಪಿ ಅಬ್ದುಲ್ಲಾ ಅದೇ ಮಾರುಕಟ್ಟೆ (Market) ಸಂಕರ್ಣದ ಎದುರು ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಎಂಬ ಮಾಹಿತಿ ದೊರಕಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ದೃಶ್ಯಾವಳಿ ಸೆರೆಯಾಗಿದ್ದ ಸಿಸಿ ಟಿವಿಯ ಹಾರ್ಡ್‌ ಡಿಸ್ಕ್ ಹಾಗೂ ಅಬ್ದುಲ್ಲಾನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡು ಪರಿಶೀಲಿಸಿದಾಗ ಅಬ್ದುಲ್‌ ಕೃತ್ಯ ನಡೆಸಿರುವುದು ಬಯಲಾಗಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

Latest Videos
Follow Us:
Download App:
  • android
  • ios