ಮೈಸೂರು (ಆ.24): ನಂಜ​ನ​ಗೂಡು ತಾಲೂಕು ಆರೋ​ಗ್ಯಾ​ಧಿ​ಕಾರಿ ಆತ್ಮ​ಹತ್ಯೆ ಪ್ರಕ​ರ​ಣಕ್ಕೆ ಸಂಬಂಧಿಸಿ ಮೈಸೂರು ಜಿಪಂ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾರನ್ನು ರಾಜ್ಯ ಸರ್ಕಾರ ಭಾನು​ವಾ​ರ ವರ್ಗಾವಣೆ ಮಾಡಿದ್ದು, ಯಾವುದೇ ಸ್ಥಳ ನಿಯುಕ್ತಿ ಮಾಡಿಲ್ಲ. ಹಾಗೆಯೇ, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಅವರಿಗೆ ಜಿಪಂ ಸಿಇಒ ಹೆಚ್ಚುವರಿ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ.

"

ಸಿಇಒ ವಿರುದ್ಧ ಎಫ್‌ಐಆರ್‌: ಜಿಪಂ ಸಿಇ​ಒ ಮಿಶ್ರಾ ಅವರ ಒತ್ತಒ, ಕಿರುಕುಳದಿಂದಲೇ ತಮ್ಮ ಪುತ್ರ ಡಾ.ಎಸ್‌.ಆರ್‌.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಡಾ. ನಾಗೇಂದ್ರ ಅವರ ತಂದೆ ಟಿ.ಎಸ್‌.ರಾಮಕೃಷ್ಣ ದೂರು ನೀಡಿದ್ದಾರೆ. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಜಿಪಂ ಸಿಇಒ ವಿರುದ್ಧ ಪ್ರಕರಣ ದಾಖಲಾಗಿದೆ.

ವೈದ್ಯರಿಗೆ ಟಾರ್ಗೆಟ್ ಫಿಕ್ಸ್‌ ಮಾಡುವುದು ಸರಿಯಲ್ಲ' ವೈದ್ಯರ ಆಗ್ರಹ.

ಇಂದಿ​ನಿಂದ ಕಪ್ಪು​ಪಟ್ಟಿ ಧರಿಸಿ ವೈದ್ಯ​ರಿಂದ ಸೇವೆ

ಮೈಸೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಹಿನ್ನೆ​ಲೆ​ಯ​ಲ್ಲಿ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ 4 ದಿನಗಳಿಂದ ನಡೆಯುತ್ತಿದ್ದ ಮುಷ್ಕ​ರ​ವನ್ನು ಕೈಬಿ​ಟ್ಟಿ​ರುವ ವೈದ್ಯ​ರು, ತಪ್ಪಿ​ತ​ಸ್ಥರ ವಿರುದ್ಧ ಕ್ರಮ ಕೈಗೊ​ಳ್ಳುವ ವರೆಗೆ ಸೋಮ​ವಾ​ರದಿಂದ ಕೈಗೆ ಕಪ್ಪು​ಪ​ಟ್ಟಿಧರಿಸಿ ಕರ್ತವ್ಯ ನಿರ್ವ​ಹಿ​ಸಲು ನಿರ್ಧ​ರಿ​ಸಿ​ದ್ದಾ​ರೆ.

ಈ ಮಧ್ಯೆ, ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಜಿಪಂ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾ ವರ್ಗಾ​ವ​ಣೆಗೆ ರಾಜ್ಯ ಪಂಚಾ​ಯತ್‌ ಅಭಿ​ವೃದ್ಧಿ ಅಧಿ​ಕಾ​ರಿ​ಗಳ ಕ್ಷೇಮಾ​ಭಿ​ವೃದ್ಧಿ ಸಂಘ​ದಿ​ಂದ ವಿರೋಧ ವ್ಯಕ್ತ​ವಾ​ಗಿದೆ. ಮಿಶ್ರಾರನ್ನು ವರ್ಗಾವಣೆ ಸರಿಯಲ್ಲ. ಕೂಡಲೇ ವರ್ಗಾವಣೆ ರದ್ದುಗೊಳಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಡಿ. ಮಾಯಪ್ಪ ಆಗ್ರಹಿಸಿದ್ದಾರೆ.

'IAS, KAS ಅಧಿಕಾರಿಗಳಿಗೆ ಮೆಡಿಕಲ್ ಗಾಳಿ ಗಂಧ ಗೊತ್ತಿಲ್ಲ, ಅವರ ಮಧ್ಯ ಪ್ರವೇಶ ಬೇಡ'..

ಡಾ. ನಾಗೇಂದ್ರ ಆತ್ಮಹತ್ಯೆ ವಿಚಾರದಲ್ಲಿ ಮಿಶ್ರಾರ ಹೆಸರು ಎಳೆದು ತಂದು, ನಿಂದಿಸುತ್ತಿರುವುದು ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಗೆ ನೋವುಂಟಾಗಿದೆ. ಡಾ. ನಾಗೇಂದ್ರರ ಆತ್ಮಹತ್ಯೆಗೆ ಕಾರಣವಾದವರ ವಿರು​ದ್ಧ ಕಾನೂನು ಕ್ರಮಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ತನಿಖೆ ಮಾಡಿ