Asianet Suvarna News Asianet Suvarna News

ಮೈಸೂರು ಎನ್ ಕೌಂಟರ್ ಹಿಂದೆ 500 ಕೋಟಿ  ನೋಟಿನ ಸತ್ಯ!

ಮೈಸೂರಿನ ಎನ್ ಕೌಂಟರ್ ನಿಂದ ಬೆಚ್ಚಿ ಬೀಳಿಸುವ ವಿಚಾರವೊಂದು ಬಹಿರಂಗವಾಗಿದೆ. 

Mysore Shoot out Linked To Demonetized Notes Exchange Racket
Author
Bengaluru, First Published May 16, 2019, 11:32 PM IST

ಮೈಸೂರು[ಮೇ. 16]  ಮೈಸೂರಿನಲ್ಲಿ ಪೊಲೀಸರ ಶೂಟ್ ಔಟ್ ಪ್ರಕರಣದ ಹಿಂದಿನ ಸತ್ಯ ಬಹಿರಂಗವಾಗಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದಲ್ಲಿ 500 ಕೋಟಿ ಹಣ ಬದಲಾವಣೆ ದಂಧೇ ನಡೆಯುತ್ತಿದ್ದ ವಿಷಯ ಬಹಿರಂಗವಾಗಿದೆ.

ಪ್ರಕರಣ ಸಂಭಂಧಿಸಿ ವಿಜಯನಗರ ಪೊಲೀಸ್ ಠಾಣೆಯಲ್ಲಿ  ಎನ್ ಕೌಂಟರ್ ನೇತೃತ್ವ ವಹಿಸಿದ್ದ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ದೂರು ದಾಖಲಿಸಿದ್ದಾರೆ.

ನಾನು ಪೋಲೀಸ್ ನಿರೀಕ್ಷಕನಾಗಿ ಮೈಸೂರು ನಗರ , ವಿಜಯನಗರ ಪೊಲೀಸ್ ಠಾಣೆಯಲ್ಲಿ 6 ತಿಂಗಳಿನಿಂದ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಮೂರು ವಾರಗಳಿಂದ ಮೈಸೂರು ನಗರದಲ್ಲಿ ಹೆಚ್ಚಿನ ಸರಗಳ್ಳತನಗಳು ವರದಿಯಾಗುತ್ತಿದ್ದ ಹಿನ್ನೆಲೆ. ಪ್ರತಿ ದಿನ ಬೆಳಗಿನ ಜಾವ ನಗರದ ಎಲ್ಲಾ ಅಧಿಕಾರಿ ವತ್ತು ಸಿಬ್ಬಂದಿಗಳ ಜೊತೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದೆ.  ಅಂದು ಬೆಳಗ್ಗೆ  8 ಗಂಟೆಗೆ ನನಗೆ ನಮ್ಮ ಬಾತ್ಮೀದಾರರೊಬ್ಬರು ದೂರವಾಣಿ ಕರೆ ಮಾಡಿ ಅಮಾನೀಕರಣಗೊಂಡು ರಟ್ಟಾಗಿರುವ ಹಳೆ ಹಣವನ್ನು ಪಡೆದುಕೊಂಡು ಹೊಸದಾಗಿ ಚಲಾವಣೆಯಲ್ಲಿರುವ ಹಣವನ್ನು ನೀಡುವುದಾಗಿ ಒಬ್ಬ ವ್ಯಕ್ತಿ ಹೇಳಿರುತ್ತಾನೆ.

ಕನ್ನಡ ಮಾಧ್ಯಮದಲ್ಲೇ ವಿಜ್ಞಾನ ಬೋಧಿಸುವ ರಾಜ್ಯದ ಮೊಟ್ಟ ಮೊದಲ ಕಾಲೇಜು ಮೈಸೂರಿನಲ್ಲಿ

ನನ್ನಿಂದ 10 ಲಕ್ಷ ಹಣವನ್ನು ಪಡೆದುಕೊಂಡು ವಾಪಸ್ ನೀಡದೆ ಮೋಸ ಮಾಡಿರುತ್ತಾನೆ.  ಅದರ ಜೊತೆಗೆ ಈ  500 ಕೋಟಿ ಅಮಾನೀಕರಣಗೊಂಡ ಹಣವನ್ನು ಬದಲಾಯಿಸಿ ಕೊಡುವುದಾಗಿ ತಿಳಿಸಿದ್ದ. ವ್ಯಕ್ತಿ ವಿಜಯನಗರದ ಎಸ್ . ವಿ ಅಪಾರ್ಟ್‌ಮೆಂಟ್ ಕಡೆ ಬರುವುದಾಗಿ ತಿಳಿಸಿರುತ್ತಾನೆ ಎಂದು ಹೇಳಿದ್ದರು.

ಮಾಹಿತಿ ಆಧರಿಸಿ ದಾಳಿ ಮಾಡಿದಾಗ ವ್ಯಕ್ತಿ ನಮ್ಮ ಮೇಲೆಯೇ ಪ್ರತಿದಾಳಿ ಮಾಡಲು ಮುಂದಾದಾಗ ಪ್ರಾಣರಕ್ಷಣೆ ಸಲುವಾಗಿ ಗುಂಡು ಹಾರಿಸಿದೆ ಎಂದು ಕುಮಾರ್ ವಿವರಣೆಯಲ್ಲಿ ತಿಳಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

Follow Us:
Download App:
  • android
  • ios