Asianet Suvarna News Asianet Suvarna News

ಲಂಚದ ವಿರುದ್ಧ ಸಮರ : ಮೈಸೂರಿನಲ್ಲಿ ಅ.10 ರಿಂದ ಎಸಿಬಿಯಿಂದ ದೂರು ಸ್ವೀಕಾರ

ಮೈಸೂರು ತಾಲೂಕಿನಲ್ಲಿ ಅ.10 ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ಜಯಪುರ, ನಾಡ ಕಚೇರಿ, ಅ.12ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ಇಲವಾಲ ನಾಡ ಕಚೇರಿ, ಅ.25ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ವರುಣ ನಾಡ ಕಚೇರಿಯಲ್ಲಿ ನಡೆಯಲಿದೆ.

Mysore ACB Invites anti-corruption Helpline From Oct 10
Author
Bengaluru, First Published Oct 6, 2018, 8:07 PM IST
  • Facebook
  • Twitter
  • Whatsapp

ಮೈಸೂರು[ಅ.06]: ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ಅಧಿಕೃತ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರ ರೀತಿಯಲ್ಲಿ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ದ ಭ್ರಷ್ಟಾಚಾರ ನಿಗ್ರಹ ದಳದಿಂದ ಅ.10ರಿಂದ 27ರವರೆಗೆ ದೂರು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ಅ.10ರಂದು ಬೆಳಗ್ಗೆ 11ರಿಂದ 12 ಗಂಟೆಯವರೆಗೆ ಎಚ್.ಡಿ. ಕೋಟೆ, ಪರಿವೀಕ್ಷಣಾ ಮಂದಿರ, ಮಧ್ಯಾಹ್ನ 12.30ರಿಂದ 1.30 ಗಂಟೆಯವರೆಗೆ ಸರಗೂರು, ಪರಿವಿಕ್ಷಣಾ ಮಂದಿರ, ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಹಂಪಾಪುರ ನಾಡ ಕಚೇರಿಯಲ್ಲಿ ನಡೆಯಲಿದೆ. ಮೈಸೂರು ತಾಲೂಕಿನಲ್ಲಿ ಅ.10 ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ಜಯಪುರ, ನಾಡ ಕಚೇರಿ, ಅ.12ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ಇಲವಾಲ ನಾಡ ಕಚೇರಿ, ಅ.25ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ವರುಣ ನಾಡ ಕಚೇರಿಯಲ್ಲಿ ನಡೆಯಲಿದೆ.

ಹುಣಸೂರು ತಾಲೂಕಿನಲ್ಲಿ ಅ.11ರಂದು ಬೆಳಗ್ಗೆ 11.30ರಿಂದ 1.30 ಗಂಟೆಯವರೆಗೆ ಹುಣಸೂರು ಪರಿವಿಕ್ಷಣಾ ಮಂದಿರ, ಮಧ್ಯಾಹ್ನ 3.30ರಿಂದ 4.30 ಗಂಟೆಯವರೆಗೆ ಬಿಳಿಕೆರೆ ನಾಡ ಕಚೇರಿಯಲ್ಲಿ ನಡೆಯಲಿದೆ. ಕೆ.ಆರ್. ನಗರ  ತಾಲೂಕಿನಲ್ಲಿ ಅ.12ರಂದು ಬೆಳಗ್ಗೆ 11.30ರಿಂದ 1.30 ಗಂಟೆಯವರೆಗೆ ಕೆ.ಆರ್. ನಗರ, ಪರಿವೀಕ್ಷಣಾ ಮಂದಿರ, ಮಧ್ಯಾಹ್ನ 2.30ರಿಂದ 3.30 ಗಂಟೆಯವರೆಗೆ ಸಾಲಿಗ್ರಾಮ ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ. ಟಿ. ನರಸೀಪುರ ತಾಲೂಕಿನಲ್ಲಿ ಅ.25ರಂದು ಬೆಳಗ್ಗೆ 10.30 ರಿಂದ 11.30 ಗಂಟೆಯವರೆಗೆ ಬನ್ನೂರು, ಪರಿವೀಕ್ಷಣಾ ಮಂದಿರ, ಮಧ್ಯಾಹ್ನ 12.30ರಿಂದ 1.30 ಗಂಟೆಯವರೆಗೆ ಟಿ. ನರಸೀಪುರ ಪರಿವೀಕ್ಷಣಾ ಮಂದಿರ, ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ತಲಕಾಡು ಪರಿವಿಕ್ಷಣಾ ಮಂದಿರದಲ್ಲಿ ನಡೆಯಲಿದೆ.

ಪಿರಿಯಾ ಪಟ್ಟಣ ತಾಲೂಕಿನಲ್ಲಿ ಅ.26ರಂದು ಬೆಳಗ್ಗೆ 11.30ರಿಂದ 1 ಗಂಟೆಯವರೆಗೆ ಪಿರಿಯಾಪಟ್ಟಣ, ಪರಿವೀಕ್ಷಣಾ ಮಂದಿರ, ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಬೆಟ್ಟದಪುರ, ಪರಿವೀಕ್ಷಣಾ ಮಂದಿರ, ಸಂಜೆ 4.30ರಿಂದ 5.30 ಗಂಟೆಯವರೆಗೆ ಬೈಲಕುಪ್ಪೆ, ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿದೆ. ನಂಜನಗೂಡು: ತಾಲೂಕಿನಲ್ಲಿ ಅ.27 ರಂದು ಬೆಳಿಗ್ಗೆ 10.30ರಿಂದ 11.30 ಗಂಟೆವರೆಗೆ ನಂಜನಗೂಡು ಪರಿವಿಕ್ಷಣಾ ಮಂದಿರ, ಬೆಳಗ್ಗೆ 12ರಿಂದ 1.30 ಗಂಟೆವರೆಗೆ ಹುಲ್ಲಹಳ್ಳಿ ನಾಡ ಕಚೇರಿ, ಮ. 2.30ರಿಂದ 3.30 ಗಂಟೆಯವರೆಗೆ ಕವಲಂದೆ ನಾಡ ಕಚೇರಿ, ಸಂಜೆ 4.30 ರಿಂದ 5.30 ಗಂಟೆಯವರೆಗೆ ಕಡಕೊಳ ನಾಡ ಕಚೇರಿಯಲ್ಲಿ ನಡೆಯಲಿದೆ.
 

Follow Us:
Download App:
  • android
  • ios