ಮಂಗಳೂರು(ಡಿ.20): ಉಪ್ಪಿನಂಗಡಿ ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಹಾಕಿದ ಕಾಣಿಕೆ ಹಣವನ್ನು ಸಕಾಲದಲ್ಲಿ ಎಣಿಕೆ ಮಾಡದೆ ವಿಳಂಬವಾಗಿ ಡಿ.13ರಂದು ಎಣಿಕೆ ಮಾಡಿದಾಗ ಅದರಲ್ಲಿ ಸುಮಾರು 40 ಸಾವಿರ ರು. ಮೌಲ್ಯದ ನೋಟುಗಳು ಸಂಪೂರ್ಣ ಹಾಳಾಗಿದ್ದು, ಎಣಿಕೆ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಕಂಡು ಬಂದಿದೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದಲ್ಲಿ ಕಳೆದ ಎಪ್ರಿಲ್‌ ತನಕ ವ್ಯವಸ್ಥಾಪನಾ ಸಮಿತಿ ಆಸ್ತಿತ್ವದಲ್ಲಿತ್ತು. ಅವರ ಅವಧಿ ಮುಗಿದ ನಂತರ ಇಲ್ಲಿಗೆ ಆಡಳಿತಾಧಿಕಾರಿಗಳ ನೇಮಕವಾಗಲಿಲ್ಲ.

ರಾಜ್ಯ ಹೊತ್ತಿ ಉರಿಯುತ್ತೆ ಎಂದಿದ್ದ ಶಾಸಕ ಖಾದರ್ ವಿರುದ್ಧ ದೂರು

ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಗೆ ಊರವರು ಹಲವು ಬಾರಿ ಫೋನ್‌ ಮಾಡಿದ ಬಳಿಕ ಡಿ.4ರಂದು ಗ್ರಾ.ಪಂ. ಪಿಡಿಒ ಜಯರಾಜ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಯಿತು. ಅವರ ಉಪಸ್ಥಿತಿಯಲ್ಲಿ ಅದುವರೆಗೆ ಸಂಗ್ರಹವಾದ ಕಾಣಿಕೆ ಹುಂಡಿಗಳ ಎಣಿಕೆಯನ್ನು ಮಾಡಿದಾಗ ಹುಂಡಿಯಲ್ಲಿ 1,52,400 ರು. ದೊರಕಿತ್ತು.

ಆದರೆ, ಸುಮಾರು 40 ಸಾವಿರ ರು.ಗಳಷ್ಟುನೋಟುಗಳು ಎಣಿಕೆ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿತ್ತು. ಮಳೆಯಿಂದಾಗಿ ಸುಮಾರು ಎಂಟು ತಿಂಗಳಲ್ಲಿ ಹುಂಡಿಯೊಳಗಿದ್ದ ನೋಟುಗಳು ಸಂಪೂರ್ಣ ಹಾಳಾಗಿ ಹೋಗಿತ್ತು.

ಮಂಗಳೂರಲ್ಲಿ 48 ತಾಸು ಇಂಟರ್ನೆಟ್‌ ಬಂದ್‌