ಮಂಗಳೂರು(ಡಿ.20): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಬಹಿರಂಗವಾಗಿ ಕಾಂಗ್ರೆಸ್‌ ಸಮಾವೇಶದಲ್ಲಿ ಶಾಸಕ ಯು.ಟಿ.ಖಾದರ್‌ ನೀಡಿರುವ ಹೇಳಿಕೆ ವಿರುದ್ಧ ದ.ಕ. ಬಿಜೆಪಿ ಯುವ ಮೋರ್ಚಾ ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದೆ.

ಖಾದರ್‌ ಹೇಳಿರುವ ಮಾತಿನ ದಾಖಲೆ ಸಮೇತ ಕಮಿಷನರ್‌ ಅವರಿಗೆ ದೂರು ನೀಡಿದ್ದು, ಶಾಂತಿ ಕದಡುವ ರೀತಿಯ ಹೇಳಿಕೆ ನೀಡಿರುವ ಖಾದರ್‌ ವಿರುದ್ಧ ಕೇಸು ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ ಎಂದು ಯುವ ಮೋರ್ಚಾ ಮುಖಂಡ ಸಂದೇಶ್‌ ಶೆಟ್ಟಿತಿಳಿಸಿದ್ದಾರೆ.

'ಮುಂದಿನ ಚುನಾವಣೆ ಗೆಲ್ಲಲು ಪೌರತ್ವ ತಿದ್ದುಪಡಿ ತಂತ್ರ'..!

ಕಾಂಗ್ರೆಸ್‌ ವತಿಯಿಂದ ಮಂಗಳವಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಖಾದರ್‌, ‘ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯುತ್ತದೆ’ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಮಂಗಳೂರಲ್ಲಿ 48 ತಾಸು ಇಂಟರ್ನೆಟ್‌ ಬಂದ್‌