ಜಾತ್ರೆ, ದೇವಸ್ಥಾನಗಳಿಗೆ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಫ್ಲೆಕ್ಸ್!

ಕರಾವಳಿಯಲ್ಲಿ ಆರಂಭವಾದ ಮುಸಲ್ಮಾನರೊಂದಿಗಿನ ವ್ಯಾಪಾರ ವಹಿವಾಟುಗಳ ನಿಷೇಧದ ಕುರಿತ ಹೋರಾಟದ ಅಭಿಯಾನ ಮಲೆನಾಡಿನಲ್ಲೂ ದಿನದಿಂದ ದಿನಕ್ಕೆ‌‌ ಕಾವು ಪಡೆಯುತ್ತಿದೆ. 

Muslim Traders Barred at Hindu Temple Jatra Continues in Chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.24): ಕರಾವಳಿಯಲ್ಲಿ ಆರಂಭವಾದ ಮುಸಲ್ಮಾನರೊಂದಿಗಿನ ವ್ಯಾಪಾರ ವಹಿವಾಟುಗಳ ನಿಷೇಧದ ಕುರಿತ ಹೋರಾಟದ ಅಭಿಯಾನ ಮಲೆನಾಡಿನಲ್ಲೂ ದಿನದಿಂದ ದಿನಕ್ಕೆ‌‌ ಕಾವು ಪಡೆಯುತ್ತಿದೆ. ರಾಜ್ಯದಲ್ಲಿ ಮುಸಲ್ಮಾನರು ಹಿಜಾಬ್ ತೀರ್ಪನ್ನು ವಿರೋಧಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸುವ ಮೂಲಕ ಸಂವಿಧಾನವನ್ನು ವಿರೋಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಹಿಂದೂ ಸಂಪ್ರದಾಯ, ಆಚರಣೆಗಳಂತೆ ನಡೆಯುವ ಜಾತ್ರೆಯಲ್ಲಿ ಅಂಗಡಿ ಮಳಿಗೆಗೆ ಅವಕಾಶ ನೀಡಬಾರದೆಂದು ಫ್ಲೆಕ್ಸ್, ಬ್ಯಾನರ್ ಹಾಕುವ  ಮೂಲಕ ಮಲೆನಾಡಿನಲ್ಲೂ ಹೋರಾಟದ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂರಿಗೆ ಅವಕಾಶವಿಲ್ಲ ದೇವಸ್ಥಾನದ ಮುಂಭಾಗದಲ್ಲಿ ಫ್ಲೆಕ್ಸ್: ದಿನದಿಂದ ದಿನಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳಲ್ಲಿ  ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರುವ ಕೂಗು ಜೋರಾಗುತ್ತಿದೆ.ಶೃಂಗೇರಿಯಿಂದ ಈಗ ಮೂಡಿಗೆರೆ ತಾಲ್ಲೂಕಿನ ನಿಷೇಧ ಕೂಗು ಕೇಳಿಬಂದಿದೆ. ಮೂಡಿಗೆರೆ ತಾಲ್ಲೂಕಿನ ಗೋಣೀಬೀಡು ಗ್ರಾಮದ  ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬ್ಯಾನರ್ ಹಾಕಿ ಮುಸ್ಲಿಂ ವ್ಯಾಪಾರಗಳಿಗೆ ಅವಕಾಶವಿಲ್ಲವೆಂದು ಬ್ಯಾನರ್ ಹಾಕಿದ್ದಾರೆ. ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿಭಾನುವಾರ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ನಡೆಯಲಿದೆ. 

ಪೋಷಕರೇ ಎಚ್ಚರ: ಮಕ್ಕಳಲ್ಲಿ ಹೆಚ್ಚಾಗ್ತಿದೆ ಹೃದಯ ಸಂಬಂಧಿ ಸಮಸ್ಯೆ!

ಮಲೆನಾಡಿನ ಪ್ರಸಿದ್ಧ ದೇವಾಲಯ ಗಳಲ್ಲಿ ಒಂದಾಗಿರುವ ಹಿನ್ನಲೆಯಲ್ಲಿ ಸಾವಿರಾರು ಜನರಿ ಸೇರಿರುವ ನಿರೀಕ್ಷೆಯದ್ದು ಇಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಈಗಾಗಲೇ‌ ಸ್ಥಳೀಯರು ಆಡಳಿತ ಮಂಡಳಿಗೆ ಮನವಿ ನೀಡಿದ್ದರು.ಇದರ ಬೆನ್ನಲ್ಲೇ ಈಗ ಹಿಂದೂ ಪರ ಬಾಂಧವರ ಹೆಸರಿನಲ್ಲಿ ದೇವಸ್ಥಾನ ಮುಂಭಾಗದಲ್ಲಿ ಬ್ಯಾನರ್ ಹಾಕಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಸಾರಿದ್ದಾರೆ.ಒಟ್ಟಾರೆ ದಿನದಿಂದ ದಿನಕ್ಕೆ ಮಲೆನಾಡಿನಲ್ಲೂ ಕೂಡ ಜಾತ್ರೆ, ರಥೋತ್ಸವ ಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ  ನಿಷೇಧ ಹೇರುವ ಕೂಗು ಜೋರಾಗಿ ಕೇಳಿಬರುತ್ತಿದೆ.

ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಒತ್ತಾಯ: ಕೆಲ ದಿನಗಳ ಹಿಂದಷ್ಟೇ ರಾಜ್ಯಾದ್ಯಂತ ಆರಂಭವಾದ ಮುಸಲ್ಮಾನರೊಂದಿಗಿನ ವ್ಯಾಪಾರ ವಹಿವಾಟುಗಳ ನಿಷೇಧದ ಕುರಿತ ಹೋರಾಟದ ಅಭಿಯಾನ ಮಲೆನಾಡಿನಲ್ಲೂ ಆರಂಭವಾಗಿದೆ. ರಾಜ್ಯದಲ್ಲಿ ಮುಸಲ್ಮಾನರು ಹಿಜಾಬ್ (Hijab) ತೀರ್ಪನ್ನು ವಿರೋಧಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸುವ ಮೂಲಕ ಸಂವಿಧಾನವನ್ನು ವಿರೋಧಿಸಿದ್ದಾರೆ. ಈ ನಿಟ್ಟಿನಲ್ಲಿ ಹಿಂದೂ ಸಂಪ್ರದಾಯ, ಆಚರಣೆಗಳಂತೆ ನಡೆಯುವ ಜಾತ್ರೆಯಲ್ಲಿ ಅಂಗಡಿ ಮಳಿಗೆಗೆ ಅವಕಾಶ ನೀಡಬಾರದೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸುವ ಮೂಲಕ ಮಲೆನಾಡಿನಲ್ಲೂ ಹೋರಾಟದ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ.

ದೇಶದಲ್ಲಿ ಜನಸಂಖ್ಯೆ ಸ್ಪೋಟ ಮುಂದುವರಿದಿದೆ: ಥಾವರ್ ಚಂದ್ ಗೆಹ್ಲೋಟ್

ಚಿತ್ರವಳ್ಳಿ ಜಾತ್ರೆಯಲ್ಲಿ‌ ನಿಷೇಧಿಸುವಂತೆ ಒತ್ತಾಯ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ  ಅಧ್ಯಕ್ಷರಿಗೆ ಚಿತ್ರವಳ್ಳಿ ಶ್ರೀ ವನ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಮುಸಲ್ಮಾನರಿಗೆ ಅಂಗಡಿ, ಮುಂಗಟ್ಟುಗಳಿಗೆ ಅವಕಾಶ ನೀಡಬಾರದೆಂದು ಅಡ್ಡಗದ್ದೆ ಗ್ರಾಮಸ್ಥರು ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ. ಇನ್ನು ಜಾತ್ರೆಯಲ್ಲಿ ಹಿಂದೂ ಕುಟುಂಬಗಳು ಹರಿಕೆ ಕಾಣಿಕೆ ರೂಪದಲ್ಲಿ ಸೇವೆಸಲ್ಲಿಸುತ್ತಾ ಸಹಕಾರ ನೀಡುತ್ತಾರೆ, ಆದರೆ ಬೇರೆಡೆಗಳಿಂದ ಆಗಮಿಸುವ ಅನ್ಯಮತೀಯರು ಕಳ್ಳತನ ಸೇರಿದಂತೆ ಇನ್ನಿತರ ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಕೆಡುಕುಂಟು ಮಾಡುತ್ತಾರೆ ಈ ಕಾರಣಕ್ಕಾಗಿ ಅವರಿಗೆ ಅವಕಾಶ ನೀಡಬಾರದು ಎಂದು ಅಡ್ಡಗದ್ದೆ ಸ್ಥಳೀಯರು ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios