ದೇಶದಲ್ಲಿ ಜನಸಂಖ್ಯೆ ಸ್ಪೋಟ ಮುಂದುವರಿದಿದೆ: ಥಾವರ್ ಚಂದ್ ಗೆಹ್ಲೋಟ್

ಭಾರತ ವಿಶ್ವಗುರುವಾಗಿದ್ದು, ಈ ದೇಶದ ಜ್ವಲಂತ ಸಮಸ್ಯೆಗಳಿಗೆ ಯುವ ಪೀಳಿಗೆ ಸ್ಪಂದಿಸಬೇಕಿದೆ. ಯುವ ಪೀಳಿಗೆಯ ದೇಶದ ಶಕ್ತಿ, ಇಲ್ಲಿ ಸಾಕಷ್ಟು ಸವಾಲುಗಳಿವೆ. ಸಮಾಜದ ಜತೆ‌‌ ಮೌಲ್ಯಗಳ ಪಾಲನೆ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.

Population Explosion in the Country Continues Says Governor Thawar Chand Gehlot gvd

ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ

ದಾವಣಗೆರೆ (ಮಾ.24): ಭಾರತ (India) ವಿಶ್ವಗುರುವಾಗಿದ್ದು, ಈ ದೇಶದ ಜ್ವಲಂತ ಸಮಸ್ಯೆಗಳಿಗೆ ಯುವ ಪೀಳಿಗೆ ಸ್ಪಂದಿಸಬೇಕಿದೆ. ಯುವ ಪೀಳಿಗೆಯ ದೇಶದ ಶಕ್ತಿ, ಇಲ್ಲಿ ಸಾಕಷ್ಟು ಸವಾಲುಗಳಿವೆ. ಸಮಾಜದ ಜತೆ‌‌ ಮೌಲ್ಯಗಳ ಪಾಲನೆ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅಭಿಪ್ರಾಯಪಟ್ಟರು. ದಾವಣಗೆರೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನಸಂಖ್ಯೆ ಸ್ಪೋಟಗೊಳ್ಳುತ್ತಿರುವ (Population Explosion) ಹಿನ್ನೆಲೆಯಲ್ಲಿ ದೇಶದಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ‌ ಇದೆ. 

ಇವುಗಳಿಗೆ ಸೂಕ್ತ ಪರಿಹಾರ ರೂಪಿಸುವ ಜವಾಬ್ದಾರಿ ಇಂದಿನ ಯುವಸಮೂಹದ ಮೇಲಿದೆ.ಯುವಪೀಳಿಗೆಯಿಂದ ದೇಶಕ್ಕೆ ಸಾಕಷ್ಟು ನಿರೀಕ್ಷೆ ಇದೆ. ಅನೇಕ ಸಮಸ್ಯೆಗಳು ನಮ್ಮ‌ಮುಂದೆ ಇವೆ.ನೀವೆಲ್ಲರೂ ದೇಶದ‌ಮುಂದಿನ ಪ್ರಜೆಗಳು. ನಮ್ಮ ದೇಶ ವಿಶ್ವದ ದೊಡ್ಡ ಪ್ರಜಾತಂತ್ರದ ದೇಶ. ಸರ್ಕಾರ ನಮ್ಮಿಂದ ರಚನೆಯಾಗುತ್ತದೆ. ದೇಶದಲ್ಲಿ ದೊಡ್ಡ ಸಂವಿಧಾನ ಇದೆ ಅಂತಹ ಸಂವಿಧಾನದಲ್ಲಿ ನಮ್ಮ ಕರ್ತವ್ಯಗಳು ಇವೆ .ನಮ್ಮ ಸಂವಿಧಾನದಲ್ಲಿ ಹಕ್ಕುಗಳ ಜೊತೆ ಕರ್ತವ್ಯ ಅರಿತು ನಡೆಯಬೇಕು ಸಮಾಜ ಹಾಗೂ ದೇಶಕ್ಕಾಗಿ ನಮ್ಮ ಕರ್ತವ್ಯ ಪಾಲಿಸುವುದು ಮುಖ್ಯ. 

BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

ಇಂದು ದೇಶದ ಹಾಗೂ‌ ಪರಿಸರ ಬಿಗಡಾಯಿಸಿದೆ ಇದು ಮುಂದಿನ ದಿನಕ್ಕೆ ಕಷ್ಟ. ನಾನು ನನ್ನ ಕುಟುಂಬದೊಂದಿದೆ ದೇಶದ ಅಭಿಮಾನ ಮುಖ್ಯ. ‌ದೇಶದ ಏಕತೆ ಅಖಂಡತೆಗೆ ಶ್ರಮಿಸಬೇಕು. ವಸುದೈವ ಕುಟುಂಬಕಂ ಕಲ್ಪನೆಯ ದೇಶ ನಮ್ಮದು. ಸರ್ವಜನರ ಒಳಿತು ನಮ್ಮ ಧ್ಯೆಯ.ಇಂತಹ ವಿಚಾರದಿಂದ‌ ನಾವು ವಿಶ್ವ ಶಾಂತಿಗಾಗಿ ಶ್ರಮಿಸುತ್ತೇವೆ. ವಿಶ್ವ ಶಾಂತಿಗಾಗಿ ನಾವು ಸದಾ ಸಿದ್ದರಾಗೋಣ ಸಂಕಷ್ಟದ ಇರುತ್ತದೆ ಆದರೂ ದೇಶದ ಏಕತೆ ಪಾಲಿಸೋಣ. ಮುಂದಿನ ದಿನಗಳಲ್ಲಿ ದೇಶ ವಿಶ್ವಗುರುವಾಗಲಿದೆ ಭಾರತ ವಿಶ್ವದ ಮುಕುಟವಾಗಲಿ ಎಂದು ಆಶಿಸಿದರು. 

ಈ ಘಟಿಕೋತ್ಸವ ವಿದ್ಯಾರ್ಥಿಗಳು ಹಾಗೂ  ಶಿಕ್ಷಕರಿಗೆ ಮುಖ್ಯಘಟ್ಟ. ವಿಶಿಷ್ಠ ಸಾಧನೆ ಮಾಡಿದವರಿಗೆ ಪದಕ ನೀಡಲಾಗಿದೆ ಹಾಗೂ ಡಾಕ್ಟರೇಟ್ ಪದವಿಯನ್ನು ಸಹ ನೀಡಲಾಗಿದೆ. ಪದವಿ ಪಡೆದ ಮೇಲೆ ತಾವೆಲ್ಲರೂ ತಮ್ಮ ಕಾರ್ಯವನ್ನು ಮುಂದುವರೆಸಬೇಕು ಅದೇ ರೀತಿ ಮುಂದಿನ ಜನರಿಗೆ ಮಾದರಿಯಾಗಬೇಕು. ಬಹಳಷ್ಟು ಜನರಿಗೆ ಚಿನ್ನದ ಪದಕ ಲಭಿಸಿದೆ. ಅವರಿಗೆ ಅಭಿನಂದನೆಗಳು. ಪದವಿ ಹಾಗೂ ಚಿನ್ನದ ಪದಕ ಪಡೆದವರಿಂದ ಪ್ರೇರಣೆ ಒಡೆದು ಏಕಾಗ್ರತೆ ಹಾಗೂ ಕರ್ತವ್ಯ ನಿಷ್ಠೆಯಿಂದ  ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಘಟಿಕೋತ್ಸವದಲ್ಲಿ ಒರಿಸ್ಸಾದ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ.ಪಿ.ವಿ.ಕೃಷ್ಣ ಭಟ್‌ ಘಟಿಕೋತ್ಸವ ಭಾಷಣ ಮಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಿವಿಯ ಎಲ್ಲಾ ಪ್ರಾಧ್ಯಾಪಕ ವೃಂದದವರು ಶ್ರಮಿಸಿದ್ದು, ಪಠ್ಯ ಮತ್ತು ಪ್ರಾಯೋಗಿಕ ತರಗತಿ ಮುಗಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜು ಮಾಡಿರುವುದು ವಿಶೇಷ. ಕೊರೋನಾ ಭಯದ ಮಧ್ಯೆಯೂ ದಾವಿವಿಯಲ್ಲಿ ಉತ್ತಮ ಕೆಲಸ ಆಗಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಿವಿಯಲ್ಲಿ ಇಂಗ್ಲೀಷ್‌ ಭಾಷೆ ಮತ್ತು ಕಂಪ್ಯೂಟರ್‌ ಲ್ಯಾಬ್‌ ಆರಂಭಿಸಲಾಗಿದೆ. ಇದರಿಂದ ಸಾಕಷ್ಟುಅನುಕೂಲವಾಗಿದೆ. ನಾನೂ ಹಳ್ಳಿಗಾಡಿನಿಂದ ಬಂದಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳ ಕಷ್ಟತಿಳಿದು, ಈ ಲ್ಯಾಬ್‌ ಸ್ಥಾಪಿಸಲು ಒತ್ತು ನೀಡಿದ್ದೆವು ಎಂದು ಡಾ.ಶರಣಪ್ಪ ಹಲಸೆ ತಿಳಿಸಿದರು.

Karnataka Assembly Session: 20 ವರ್ಷ ಬಳಿಕ ಮೆಟ್ಟಿಲು ಬಳಸಿ ವಿಧಾನಸೌಧಕ್ಕೆ ಬಂದ ರಾಜ್ಯಪಾಲ

ವಿವಿ ಮೌಲ್ಯ ಮಾಪನ ಕುಲ ಸಚಿವರಾದ ಎಚ್‌.ಎಸ್‌.ಅನಿತಾ, ಕುಲ ಸಚಿವರಾದ ಪ್ರೊ.ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಡಿ.ಪ್ರಿಯಾಂಕ, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾದ ಎಚ್‌.ಜಿ.ವೀರಣ್ಣ ಗೌಡ, ಎಂ.ಇ.ಶಿವಕುಮಾರ, ಜಯಲಿಂಗಪ್ಪ, ಸಿಂಡಿಕೇಟ್‌ ಸದಸ್ಯರಾದ ಟಿ.ಇನಾಯತ್ತುಲ್ಲಾ, ವಿಜಯಲಕ್ಷ್ಮಿ ಹಿರೇಮಠ, ಮೈಸೂರು ಗೀತಾ, ಆಶೀಶ್‌ ರೆಡ್ಡಿ, ವಿವಿಧ ವಿಭಾಗ ಮುಖ್ಯಸ್ಥರಾದ ಡಾ.ಲಕ್ಷ್ಮಣ್‌, ಡಾ.ಶಿವಕುಮಾರ ಕಣಸೋಗಿ, ವಿದ್ಯಾ ವಿಷಯಕ್‌ ಪರಿಷತ್‌ ಸದಸ್ಯರು ಇದ್ದರು.

Latest Videos
Follow Us:
Download App:
  • android
  • ios