ಕಾರವಾರ (ಮೇ.13):  ಇಂದು   ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು,  ಸೆಮಿ ಲಾಕ್ ಡೌನ್‌ನಿಂದಾಗಿ ಹಬ್ಬದ ಸಂಭ್ರಮಾಚರಣೆ ಕಳೆಗುಂದಿದೆ. 

ಭಟ್ಕಳ ನಗರದಲ್ಲಿ ಬೆಳಗ್ಗೆಯಿಂದಲೇ ಜನರ ಓಡಾಟವಿರದ್ದರಿಂದ ಕಾಣದ  ರಂಜಾನ್ ಸಂಭ್ರಮ ಎಲ್ಲಿಯೂ ಕಾಣುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಇರುತ್ತಿದ್ದ ಹಬ್ಬದ ಭರಾಟೆ ಈ ಭಾರಿ ಕೊರೋನಾ ಮಹಾಮಾರಿ ಕಸಿದುಕೊಂಡಿದೆ. 

ರಂಜಾನ್: ಉಪವಾಸ ಮುಗಿಸುವಾಗ ಇಂಥ ತಪ್ಪುಗಳನ್ನೆಲ್ಲಾ ಮಾಡಬೇಡಿ

ಭಟ್ಕಳ ಜಾಮಿಯಾ ಮಸ್ಜಿದ್, ಖಾಲಿಫಾ ಜಾಮಿಯಾ ಮಸ್ಜಿದ್ ಮುಂತಾದವುಗಳಿಗೆ ಬೀಗ ಹಾಕಿದ್ದರಿಂದ ಮನೆಯಲ್ಲೇ  ನಮಾಜ್ ಸಲ್ಲಿಸಿದ ಮುಸ್ಲಿಂ ಬಾಂಧವರು, ಮನೆಯಲ್ಲಿಯೇ ಉಳಿದು ಹಬ್ಬ ಆಚರಿಸುತ್ತಿದ್ದಾರೆ.   ಸರಕಾರದ ನಿಯಮ‌ ಪಾಲಿಸಿ ಮನೆಯಲ್ಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. 

ಸೆಮಿ ಲಾಕ್‌ಡೌನ್  ಉಲ್ಲಂಘನೆ :  ಸೆಮಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ದಾಂಡೇಲಿಯಲ್ಲಿ ಮಾತ್ರ ಬಟ್ಟೆ ಅಂಗಡಿ, ಗೂಡಂಗಡಿ ವ್ಯಾಪಾರ ಮಾಡಲಾಗುತ್ತಿದೆ.  10 ಗಂಟೆಯ ಬಳಿಕವೂ ಇಲ್ಲಿ ಕೆಲ  ಬಟ್ಟೆ ಅಂಗಡಿಗಳಲ್ಲಿ ಶಟರ್ ಎಳೆದುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು. 

ರಂಜಾನ್ ತಿಂಗಳಲ್ಲಿ ಖರ್ಜೂರ ತಿಂದು ಉಪವಾಸ ಆರಂಭಿಸುವುದು ಯಾಕೆ ಗೊತ್ತಾ?

ದಾಂಡೇಲಿಯ ಲಿಂಕ್ ರಸ್ತೆಯ ಬಳಿಯಿರುವ ಬಟ್ಟೆ ಮಳಿಗೆಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಬಟ್ಟೆ ವ್ಯಾಪಾರ ಮಾಡಲಾಗುತಿತ್ತು. ಸೆಮಿ‌ಲಾಕ್ ಡೌನ್ ಇದ್ದರೂ ಉಲ್ಲಮಘಿಸಿ ರಂಝಾನ್ ಹಿನ್ನೆಲೆ ವ್ಯಾಪಾರ ನಡೆದಿತ್ತು. ಅಲ್ಲದೇ ನಿಯಮ ಉಲ್ಲಂಘಿಸಿ ಕೆಲ ಪಾನ್ ಶಾಪ್ಗಳು ತೆರೆದಿದ್ದು ಕಂಡು ಬಂತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona