ರಂಜಾನ್: ಉಪವಾಸ ಮುಗಿಸುವಾಗ ಇಂಥ ತಪ್ಪುಗಳನ್ನೆಲ್ಲಾ ಮಾಡಬೇಡಿ
ರಂಜಾನ್-ಉಲ್-ಮುಬಾರಕ್ ತಿಂಗಳು ನಡೆಯುತ್ತಿದೆ ಮತ್ತು ಮುಸ್ಲಿಮರು ಈ ತಿಂಗಳಲ್ಲಿ ಉಪವಾಸ (ರೋಜಾ) ದೊಂದಿಗೆ ಅಲ್ಲಾನ ಆರಾಧನೆಯಲ್ಲಿ ತೊಡಗಿದ್ದಾರೆ. ಸಹರಿ ಮತ್ತು ಇಫ್ತಾರ್ನೊಂದಿಗೆ ಪೂರ್ಣ ತಿಂಗಳವರೆಗೆ ಉಪವಾಸ ಮಾಡುವ ಅಭ್ಯಾಸವಾಗಿ ಮುಂದುವರಿಯುತ್ತದೆ. ಈ ಮಧ್ಯೆ, ಒಂದು ಕಡೆ ತಿನ್ನುವುದು ಮತ್ತು ಕುಡಿಯುವ ಸಮಯವು ಬದಲಾಗುವುದರಿಂದ, ಕೆಲವೊಮ್ಮೆ ನಿದ್ರೆಯೂ ಪೂರ್ಣವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಮುಖ್ಯ.

ರಂಜಾನ್ ಮಾಸದಲ್ಲಿ ಆಹಾರದ ಸಮಯ ಮತ್ತು ನಿದ್ದೆ ಬದಲಾವಣೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಈ ತಿಂಗಳು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಆರೋಗ್ಯವಾಗಿರುತ್ತೀರಿ ಮತ್ತು ಉಪವಾಸ ಚೆನ್ನಾಗಿ ನೆರವೇರುತ್ತದೆ. ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಅರಿಯಿರಿ..

ಜಿಡ್ಡಿನ ಆಹಾರ ಬೇಡ
ರಂಜಾನ್‌ನಲ್ಲಿ ಹೆಚ್ಚಾಗಿ, ಜನರು ಇಫ್ತಾರ್‌ನಲ್ಲಿ ಹುರಿದ ಆಹಾರವನ್ನು ತಿನ್ನಲು ಬಯಸುತ್ತಾರೆ. ಸಮೋಸಾ, ಸ್ಪ್ರಿಂಗ್ ರೋಲ್ಸ್, ಫ್ರೈಸ್ ಮತ್ತು ಇತರ ಹುರಿದ ವಸ್ತುಗಳನ್ನು ಸೇವಿಸುವುದು ಬಾಯಿಗೆ ರುಚಿ ಎನಿಸಬಹುದು, ಆದರೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು.

ಕರಿದ ಆಹಾರ ಸೇವಿಸಿದರೆ ಅಜೀರ್ಣ ಉಂಟಾಗಬಹುದು. ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಖರ್ಜೂರ ಅಥವಾ ನೀರಿನೊಂದಿಗೆ ಉಪವಾಸ ನಿಲ್ಲಿಸಬೇಕು. ನಂತರ ಹಣ್ಣು ಇತ್ಯಾದಿಗಳನ್ನು ಸೇವಿಸಿ. .ಇದು ದೇಹದ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.

ಕಡಿಮೆ ನೀರು ಕುಡಿಯಬೇಡಿ
ನೀರನ್ನೂ ಸಹ ಕುಡಿಯದೇ ಉಪವಾಸ ಮಾಡುತ್ತಾರೆ ಹಲವರು. ಆದರೆ, ಉಪವಾಸ ಮುರಿಯುವ ಸಂದರ್ಭದಲ್ಲಿ ಯಥೇಚ್ಛವಾಗಿ ನೀರು ಕುಡಿಯಿರಿ.

ಹೆಚ್ಚು ನೀರು ಕುಡಿಯದಿದ್ದರೆ, ಹೆಚ್ಚು ನೀರನ್ನು ಹೊಂದಿರುವ ಹಣ್ಣುಗಳನ್ನು ಬಳಸಿ. ತಂಪು ಪಾನೀಯಗಳು ಮತ್ತು ಚಹಾ ಮತ್ತು ಕಾಫಿಯಂತಹ ಕೆಫೀನ್ ಯುಕ್ತ ವಸ್ತುಗಳನ್ನು ಸಹ ತಪ್ಪಿಸಿ. ಬದಲಾಗಿ ಜ್ಯೂಸ್ ಸೇವಿಸಬಹುದು.

ಅವಸರದಲ್ಲಿ ತಿನ್ನಬೇಡಿ
ಇಫ್ತಾರ್ ನಲ್ಲಿ ತಕ್ಷಣ ಮತ್ತು ವೇಗವಾಗಿ ತಿನ್ನುವ ಬದಲು ನಿಧಾನವಾಗಿ ಮತ್ತು ಚೆನ್ನಾಗಿ ಅಗೆದು ತಿನ್ನಿ. ಸಣ್ಣ ಸಣ್ಣ ತುತ್ತನ್ನು ತಿನ್ನಿ. ತಿನ್ನಲು ಸಮಯ ತೆಗೆದುಕೊಂಡರೆ, ಪ್ರಾರ್ಥನೆ ಸಲ್ಲಿಸಿದ ನಂತರ ಉಳಿದ ಆಹಾರವನ್ನು ತಿನ್ನಿ.

ಸಹ್ರಿಯನ್ನು ಬಿಡಬೇಡಿ
ಸಹ್ರಿ ಎಂದರೆ ರಂಜಾನ್ ತಿಂಗಳಲ್ಲಿ ರಾತ್ರಿಯಲ್ಲಿ ಉಪವಾಸ ಆರಂಭಿಸುವ ಮುನ್ನ ಸೇವಿಸುವ ಉಪಹಾರ. ಕೊನೆಯದಾಗಿ ಸೇವಿಸುವ ಉಪಹಾರಕ್ಕೆ ಸಹರಿ ಎನ್ನಲಾಗುತ್ತದೆ.

ಕೆಲವರು ಕೆಲವೊಮ್ಮೆ ಪೂರ್ಣ ನಿದ್ರೆ ಮಾಡಲು ಸಹ್ರಿಯನ್ನು ಬಿಡುತ್ತಾರೆ. ಆದರೆ ಸಹ್ರಿ ದಿನವಿಡೀ ಸಕ್ರಿಯವಾಗಿರಿಸುತ್ತದೆ, ಆದರೆ ಸಹ್ರಿಯನ್ನು ಬಿಟ್ಟಾಗ, ಇಡೀ ದಿನ ದೌರ್ಬಲ್ಯ ಮತ್ತು ಆಲಸ್ಯಕ್ಕೆ ಒಳಗಾಗುತ್ತೀರಿ.

ಸಹ್ರಿ ಸೇವಿಸುವುದು ಕಡ್ಡಾಯ ಅಲ್ಲ. ಆದರೆ ಸೇವಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ದಿನವಿಡೀ ಕ್ರಿಯಾಶೀಲರಾಗಿರಲು ಸಹ್ರಿ ಮಾಡಬೇಕು.

ಸಹ್ರಿಯಲ್ಲಿ ಉಳಿದದ್ದನ್ನು ತಿನ್ನುವ ಬದಲು ತಾಜಾ ಬೇಯಿಸಿದ ಆಹಾರ ಸೇವಿಸಿ. ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಸೇವಿಸಿ. ಹಾಲು ಮತ್ತು ಮೊಸರಿನಂತಹ ಪ್ರೋಟೀನ್ ಸಮೃದ್ಧ ವಸ್ತುಗಳನ್ನು ಸೇವಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.