ಪೇಜಾವರ ಶ್ರೀ ಅಸ್ತಂಗತ: ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ

ಪೇಜಾವರ ಶ್ರೀಗಳ‌ ನಿಧನಕ್ಕೆ‌ ಸಂತಾಪ ಸೂಚಿಸಿದ ಹಂಸಲೇಖ| ಉಡುಪಿ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರ| ಪೇಜಾವರದ ಪೀಠ ನನಗೆ ಬಹಳ ಇಷ್ಟವಾದ ಸ್ಥಳ| ಶ್ರೀಗಳದ್ದು ಸಂಪೂರ್ಣ ಜೀವನ, ಅಪೂರ್ಣವಾದ ಕನಸು| ಪೇಜಾವರ ಶ್ರೀಗಳು ಸಂತರ ಗ್ರಂಥದಲ್ಲಿ ಅದ್ಭುತವಾದ ಪೇಜ್|

Music Director Hamsalekha Condoles Dead of Pejawar Shri

ಕೊಪ್ಪಳ(ಡಿ.29): ಉಡುಪಿಯ ಪೇಜಾವರ ಶ್ರೀಗಳ‌ ನಿಧನಕ್ಕೆ‌ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂತಾಪ ಸೂಚಿಸಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮವರ ಜತೆ ಮಾತನಾಡಿದ ಅವರು, ಪ್ರತಿಯೊಂದು ಜೀವಕ್ಕೂ ಒಂದು ಕೊನೆ ಇದೆ. ಉಡುಪಿ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದೆ. ಪೇಜಾವರದ ಪೀಠ ನನಗೆ ಬಹಳ ಇಷ್ಟವಾದ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ. 

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ಶ್ರೀಗಳದ್ದು ಸಂಪೂರ್ಣ ಜೀವನ, ಅಪೂರ್ಣವಾದ ಕನಸು, ಭಾರತೀಯ ಸಂಸ್ಕೃತಿಯನ್ನು ರಾಜಕೀಯ ಗದ್ದುಗೆ ಬಳಿ ನಿಲ್ಲಿಸಿ ಮಾನವೀಯತೆಯ ಏಕತೆಯನ್ನ ವಿದ್ಯೆ ಶಿಕ್ಷಣವನ್ನು ಸರ್ವರಿಗೂ ಅರ್ಪಿಸಿದವರು ಶ್ರೀಗಳಾಗಿದ್ದಾರೆ. ಶ್ರೀಗಳಿಗೆ ದೊಡ್ಡದೊಂದು ಕನಸಿತ್ತು, ಅದು ಅವರ ಜೀವಿತಾವಧಿಯಲ್ಲಿ ಆ ಕನಸು ಪೂರ್ಣವಾಗಬೇಕಿತ್ತು, ಮುಂದೆ ಭವಿಷ್ಯದಲ್ಲಿ  ಕನಸು ಪೂರ್ಣವಾಗುತ್ತೆ ಎಂದು ತಿಳಿಸಿದ್ದಾರೆ. 

ಪೇಜಾವರ ಶ್ರೀಗಳು ಸಂತರ ಗ್ರಂಥದಲ್ಲಿ ಅದ್ಭುತವಾದ ಪೇಜ್ ಆಗಿದ್ದಾರೆ. ಅವರಿಗೆ ಎಷ್ಟು ಕೀರ್ತಿ ಸಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರ ಸ್ಥಾನಕ್ಕೆ ಅವರಷ್ಟೇ ಸಮರ್ಥರಾದ ಶ್ರೀಗಳು ಬರಲಿ ಎಂದು ಹೇಳಿದ್ದಾರೆ. 

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

ಸಂಗೀತ ನಿರ್ದೇಶಕನಾಗಿ ನಾನು ಹೆಸರು ಮಾಡಿದಾಗ ಉಡುಪಿಯಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ನೀಡಿದ್ದರು. ಈ ವೇಳೆಯಲ್ಲಿ ಅವರು ನನ್ನೊಂದಿಗೆ ಧರ್ಮ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡಿದ್ದರು. ಆ ಕಾರ್ಯಕ್ರಮದಲ್ಲಿ ಎಸ್ ಪಿ‌ಬಿ ಹಾಗೂ ಯೇಸುದಾಸ್ ಒಂದೇ ವೇದಿಕೆಯಲ್ಲಿ ಹಾಡಿದ್ದರು. ಪೇಜಾವರ ಶ್ರೀಗಳು ಸಾಂತ್ವಾನ ಮತ್ತು ನಮ್ರತೆಯಿಂದ ಸ್ವಾಗತಿಸುತ್ತಿದ್ದರು ಎಂದು ಶ್ರೀಗಳ ಜತೆ ಇದ್ದ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟಿದ್ದಾರೆ. 

ಡಿಸೆಂಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios