Asianet Suvarna News Asianet Suvarna News

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

ಉಡಪಿ ಪೇಜಾವರ ಶ್ರೀ ಅಸ್ತಂಗತ|ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಯವರೆಗೆ ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನ| ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ| 

Pejawara Vishwesha Teertha Swamiji Last Rituals Will be at Vidyapeetha Bengaluru
Author
Bengaluru, First Published Dec 29, 2019, 10:06 AM IST
  • Facebook
  • Twitter
  • Whatsapp

ಉಡುಪಿ(ಡಿ.29): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಶ್ರೀಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇಂದು(ಭಾನುವಾರ) ಅಸ್ತಂಗತರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಇಂದು ಬೆಳಗ್ಗೆ ಮಠಕ್ಕೆ ಶ್ರೀಗಳನ್ನು ಕರೆತರಲಾಗಿತ್ತು. 

"

ಪೇಜಾವರ ಶ್ರೀಗಳ ದೇಹಾಂತ್ಯದ ನಂತರದ ಕ್ರಿಯೆಗಳು

ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಯವರೆಗೆ ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯೆವಸ್ಥೆ ಮಾಡಲಾಗಿದೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಕರೆತರಲಾಗುವುದು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಶ್ರೀಗಳ ಪಾರ್ಥೀವ ಶರೀರವನ್ನು ಇಡಲಾಗುವುದು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. 

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ಮಧ್ವ ಸರೋವರದಲ್ಲೇ ಶ್ರೀಗಳಿಗೆ ಪುಣ್ಯಸ್ನಾನ ಮಾಡಿಸಲಾಗುವುದು. ಪುಣ್ಯಸ್ನಾನದ ನಂತರ ಶ್ರೀಗಳಿಗೆ ಹೊಸ ಖಾವಿ ಬಟ್ಟೆ ತೊಡಿಸಲಾಗುತ್ತದೆ. ಬಳಿಕ ಪೇಜಾವರ ಶ್ರೀಗಳಿಗೆ ಶ್ರೀಕೃಷ್ಣ ದರ್ಶನ ಮಾಡಿಸಿದ ನಂತರ ಆರತಿ ಬೆಳಗಲಾಗುವುದು. ಬಳಿಕ ಪುಷ್ಪಾಲಂಕೃತ ಬುಟ್ಟಿಯಲ್ಲಿ ಶ್ರೀಗಳ ಪಾರ್ಥೀವ ಶರೀರವನ್ನು ಹೊತ್ತೊಯ್ಯುವ ಪ್ರಕ್ರಿಯೆ ನಡೆಯಲಿದೆ. 

"

ಉಡುಪಿ ರಥಬೀದಿ ಮೂಲಕವೇ ಶ್ರೀಗಳ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಪಾರ್ಥೀವ ಶರೀರ ಸಾಗುವ ಮಾರ್ಗದಲ್ಲಿ ಸಕಲ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ರಥಬೀದಿಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಅಜ್ಜರ ಕಾಡು ಮೈದಾನಕ್ಕೆ ತೆಗೆದುಕೊಂಡು ಹೋಗಲಾಗುವುದು. 

"

Follow Us:
Download App:
  • android
  • ios