Asianet Suvarna News Asianet Suvarna News

ಮುರುಘಾ ಮಠದಲ್ಲಿ ಸರಳ ಶರಣ‌‌ ಸಂಸ್ಕ್ರತಿ ಉತ್ಸವ, ಆಹ್ವಾನ ಪತ್ರಿಕೆಯಲ್ಲಿ ಶ್ರೀಗಳ ಹೆಸರು ಡಿಲೀಟ್

ಮುರುಘಾ ಮಠದಲ್ಲಿ ಸರಳ ಶರಣ‌‌ ಸಂಸ್ಕ್ರತಿ ಉತ್ಸವ ನಡೆಸಲು ನಿರ್ಧಾರ.  ಆಹ್ವಾನ ಪತ್ರಿಕೆಯಲ್ಲಿ ಮುರುಘಾ ಶ್ರೀ ಹೆಸರು, ಭಾವಚಿತ್ರ ಕೈ ಬಿಟ್ಟ ಸಮಿತಿ.
 

Murugha mutt seer name deleted in Sharana Samskruthi Utsav invitation gow
Author
First Published Oct 1, 2022, 8:59 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.1): ಮೈಸೂರಿನಲ್ಲಿ ನಾಡಹಬ್ಬ ದಸರಾ ಹೇಗೋ ಅದೇ ರೀತಿ ಮಧ್ಯ ಕರ್ನಾಟಕದಲ್ಲಿ ಮೊದಲಿನಿಂದಲೂ ಶರಣ ಸಂಸ್ಕೃತಿ ಉತ್ಸವ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮಿನಿ ದಸರಾ ಹಬ್ಬ ಎಂದೇ ಜನರು ಭಾವಿಸಿ ಶರಣ ಸಂಸ್ಕೃತಿ ಉತ್ಸವದಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಚಿತ್ರದುರ್ಗ ಮುರುಘಾ ಮಠದ ಪರಂಪರೆಯಲ್ಲಿ ಹಲವು ವರ್ಷಗಳಿಂದ ಮಾಡಿಕೊಂಡ ಬರ್ತಿದ್ದ ಉತ್ಸವಕ್ಕೆ ಈ ಬಾರಿ ವಿಘ್ನ ಎದುರಾಗಿದೆ. ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಮುರುಘಾ ಶ್ರೀಗಳು ಜೈಲು ಪಾಲಾಗಿದ್ದು, ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಚರಿಸಲು ಮುರುಘಾ ಮಠದ ಸಮಿತಿ ನಿರ್ಧರಿಸಿದೆ. ಇಂದು ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶರಣ ‌ಸಂಸ್ಕೃತಿ ಉತ್ವವ ಸಮಿತಿ ಕಾರ್ಯಾಧ್ಯಕ್ಷ ಎಸ್. ಲಿಂಗಮೂರ್ತಿ ‌ಮಾತನಾಡಿ, ಪ್ರತೀ ವರ್ಷವೂ ನಡೆಯುವಂತೆ ಶರಣ ಸಂಸ್ಕೃತಿ ಉತ್ಸವ ಮುರುಘಾ ಪೀಠದ ಪರಂಪರೆಯಂತೆ ಈ ಬಾರಿ ಸರಳವಾಗಿ ನಡೆಯಲಿದೆ. ದಸರಾ ಮಹೋತ್ಸವದ ಅಂಗವಾಗಿ ಪ್ರತೀ ವರ್ಷ 9 ದಿನಗಳ ಕಾಲ ನಡೆಸಲಾಗ್ತಿತ್ತು. ಶೂನ್ಯ ಪೀಠದ ಅಧ್ಯಕ್ಷರಾದ ಅಲ್ಲಮಪ್ರಭು, ಹಾಗೂ ಬಸವೇಶ್ವರರ ತತ್ವ ಸಿದ್ದಾಂತದ ಆಧಾರದ ಮೇಲೆ ಮುರುಘಾ ಮಠದಲ್ಲಿ ಪ್ರತೀ ವರ್ಷ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಬಾರಿ ಸಂದಿಗ್ಧ ಸ್ಥಿತಿ ಬಂದಿರೋ ಕಾರಣ 9 ದಿನಗಳ ಕಾರ್ಯಕ್ರಮವನ್ನು 3 ದಿನ ನಡೆಸಲು ನಿರ್ಧರಿಸಿದ್ದೀವಿ. ಈಗಾಗಲೇ ಮುರುಘಾ ಮಠದ ಶೂನ್ಯ ಪೀಠ ಸರ್ವರಿಗೂ ಸಮಪಾಲು, ಸಮಬಾಳು ಎಂಬುದ ಸಂದೇಶವನ್ನು ಸಾರುತ್ತಾ ಬಂದಿದೆ. ಅದೇ ರೀತಿ ಮುಂದೆಯೂ ನಡೆಸಿಕೊಂಡು ಹೋಗಲಿದೆ ಎಂದರು.

ಇನ್ನೂ ಈ ವೇಳೆ ಮಾತನಾಡಿದ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷರಾದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ದಸರಾ ಸಂದರ್ಭದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಉತ್ಸವ ಮುರುಘಾಮಠ ಆಯೋಜಿಸುತ್ತಿದ್ದ ಶರಣ ಸಂಸ್ಕೃತಿ ಉತ್ಸವ ಒಂಭತ್ತು ದಿನ ನಡೆಯುತ್ತಿದ್ದ ಉತ್ಸವ ಈವರ್ಷ 3ದಿನಕ್ಕೆ ಸೀಮಿತ ಮಾಡಲಾಗಿದೆ. ಅಕ್ಟೋಬರ್ 4ರಿಂದ‌ 6ರವರೆಗೆ ಶರಣ ಸಂಸ್ಕೃತಿ ಉತ್ಸವ ವಿವಿಧ ಶ್ರೀಗಳ ಸಮ್ಮುಖದಲ್ಲಿ ಮೂರು ದಿನದ ಕಾರ್ಯಕ್ರಮ ನಡೆಸಲಾಗುವುದು. ಅ.4ರಂದು ಬಸವತತ್ವ ಧ್ವಜಾರೋಹಣ, ಉತ್ಸವ ಉದ್ಘಾಟನೆ ನಡೆಯಲಿದೆ. ಅ.5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ ಜರುಗಲಿದೆ. ಕೋಟೆಯೊಳಗಿನ ಮಠದಲ್ಲಿ ರಾಜವಂಶಸ್ಥರಿಂದ ಭಕ್ತಿ ಸಮರ್ಪಣೆ ಮಾಡಲಾಗುವುದು. 

ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರೀಗೆ ಷರತ್ತುಬದ್ಧ ಅನುಮತಿ

ಅ.5ರಂದು ಮುರುಘಾ ಶಾಂತವೀರಶ್ರೀ ಭಾವಚಿತ್ರ ದೊಂದಿಗೆ ಪೀಠಾರೋಹಣ ಮುರುಘಾಮಠದಲ್ಲಿ ನಡೆಯಲಿದೆ ಎಂದರು. ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷರಾದ ಮಹಾಂತ ರುದ್ರೇಶ್ವರ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಜೊತೆಗೆ ವಿವಿಧ ಮಠಾಧೀಶರು ಭಾಗಿಯಾಗಲಿದ್ದಾರೆ ಎಂದು ನುಡಿದರು. 

ಶೂನ್ಯಪೀಠ ಮುರುಘಾ ಮಠಕ್ಕೆ ಅನ್ಯ ಸಮುದಾಯದವರು ಪೀಠಾಧ್ಯಕ್ಷರು ಯಾಕಾಗಬಾರದು? - ಬಿ.ಕಾಂತರಾಜ್

ಪತ್ರಕರ್ತರಿಗೆ ಕೊಟ್ಟ ಆಹ್ವಾನ ಪತ್ರಿಕೆಯಲ್ಲಿ ಮುರುಘಾ ಶ್ರೀ ಹೆಸರು ಭಾವಚಿತ್ರ ಮಾಯ:
ಇನ್ನೂ ಪತ್ರಿಕಾಗೋಷ್ಟಿ ನಡೆಯುವ ವೇಳೆ ಪತ್ರಕರ್ತರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ ಮುರುಘಾಶ್ರೀ ಹೆಸರು, ಭಾವಚಿತ್ರ ವನ್ನು ಉತ್ಸವ ಸಮಿತಿ ಕೈ ಬಿಟ್ಟಿದ್ದು ಬೆಳಕಿಗೆ ಬಂದಿತು. ಶಿವಮೂರ್ತಿ ಮುರುಘಾ ಶರಣರ ಹೆಸರು, ಭಾವಚಿತ್ರ ಕೈಬಿಟ್ಟ ಸಮಿತಿ. ಹೆಸರು ಮಾಯಕ್ಕೆ‌‌ ಕಾರಣ, 
ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಂಧನ ಹಿನ್ನೆಲೆ ಮುರುಘಾಶ್ರೀ ಹೆಸರು, ಭಾವ ಚಿತ್ರವನ್ನು ಉತ್ಸವ ಸಮಿತಿ ಕೈ ಬಿಟ್ಟಿದೆ ಎಂಬ ಮಾಹಿತಿ ನೀಡಿದರು.

Follow Us:
Download App:
  • android
  • ios