* ಅಮೆರಿಕದ ಗ್ಲೋಬಲ್ ಪೀಪಲ್ಸ್‌ ಚಾಯ್ಸ್‌ ಸ್ಪರ್ಧೆ * ವಿಶ್ವವಿಖ್ಯಾತ ಮುರುಡೇಶ್ವರದ ಶಿವನಮೂರ್ತಿಗೆ ಪ್ರಶಸ್ತಿ * ಈ ಸ್ಪರ್ಧೆಯಲ್ಲಿ ವಿಶ್ವದ 25 ತಾಣಗಳ ಆಯ್ಕೆ  

ಭಟ್ಕಳ(ಜೂ.18): ಅಮೆರಿಕದ ಗ್ಲೋಬಲ್‌ ಪೀಪಲ್ಸ್‌ ಚಾಯ್ಸ್‌ ಸ್ಪರ್ಧೆಯಲ್ಲಿ ಕರ್ನಾಟಕದ ವಿಶ್ವವಿಖ್ಯಾತ ಮುರುಡೇಶ್ವರದ ಶಿವನಮೂರ್ತಿ ಪ್ರಶಸ್ತಿ ಪಡೆದಿದೆ. 

ಈ ಸ್ಪರ್ಧೆಯಲ್ಲಿ ವಿಶ್ವದ 25 ತಾಣಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರ ಶಿವನಮೂರ್ತಿ ಆಯ್ಕೆಯಾಗಿದೆ.

ಮಲೆನಾಡಿನಲ್ಲಿ ಎಲ್ಲೆಲ್ಲೂ ಈಗ ಹಳದಿ ಕಪ್ಪೆಗಳು!

ವಿಶ್ವಾದ್ಯಂತ ನಡೆದ ಆನ್‌ಲೈನ್‌ ವೋಟಿಂಗ್‌ನಲ್ಲಿ ಕರ್ನಾಟಕ ಹೆಮ್ಮೆಯ ಈ ಮೂರ್ತಿ ಅತಿ ಹೆಚ್ಚು ವೋಟ್‌ ಪಡೆಯುವ ಮೂಲಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುರ್ಡೇಶ್ವರ ಶಿವನಮೂರ್ತಿ ಈ ಪ್ರಶಸ್ತಿ ಪಡೆದಿರುವುದು ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ.