ಮೈಸೂರು(ಮಾ.06): ಶಾಸಕ ತನ್ವೀರ್ ಸೇಠ್‌ ಮೇಲೆ ಕೊಲೆ ಪ್ರಯತ್ನ ನಡೆದಿದೆ. ಶಾಸಕ ತನ್ವೀರ್ ಸೇಠ್ ಆಪ್ತ, ಮಾಜಿ‌ ಪಾಲಿಕೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮೈಸೂರಿನ ಯರಗನಹಳ್ಳಿಯಲ್ಲಿ ಘಟನೆ ನಡೆದಿದೆ.

ಶಾಸಕ ತನ್ವೀರ್ ಸೇಠ್ ಆಪ್ತನ ಕೊಲೆ ಯತ್ನ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಮಾಜಿ‌ ಪಾಲಿಕೆ ಸದಸ್ಯರಾಗಿದ್ದರು. ಮೈಸೂರಿನ ಯರಗನಹಳ್ಳಿಯಲ್ಲಿ ಘಟನೆ ನಡೆದಿದ್ದು ತನ್ವೀರ್ ಸೇಠ್ ಆಪ್ತರಾಗಿದ್ದ ರಜನಿಅಣ್ಣಯ್ಯ ಮೇಲೆ ಹಲ್ಲೆ ನಡೆದಿದೆ.

ಬರ್ತ್ ಡೇ ದಿನವೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ

ಗ್ರಾಮದೇವತೆ ಹಬ್ಬದ ವೇಳೆ ಲಾಂಗು ಝಳಪಿಸಿರುವ ಪುಡಾರಿಗಳು ಕಾಂಗ್ರೆಸ್ ಮುಖಂಡರಾಗಿರುವ ರಜನಿ ಅಣ್ಣಯ್ಯ ಮೇಲೆ ಹಲ್ಲೆ ಮಾಡಿದ್ದಾರೆ. ರಾಜಕೀಯ ವೈಷಮ್ಯದಿಂದ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಯರಗನಹಳ್ಳಿಯ ಮಹದೇವು, ಚಿದಂಬರಂ ಎಂಬುವವರಿಂದ ಕೃತ್ಯ ನಡೆದಿದೆ. ರಜನಿ ಅಣ್ಣಯ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ಆರೋಪಿ ಮಹದೇವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿ ಚಿದಂಬರಂ ಪರಾರಿಯಾಗಿದ್ದಾನೆ.

ಆಲನಹಳ್ಳಿ ಪೊಲೀಸ್ ಠಾಣೆ ಮುಂದೆ ತಡರಾತ್ರಿವರೆಗೂ ಜನ ಜಮಾಯಿಸಿದ್ದರು. ಯರಗನಹಳ್ಳಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.