ಮೈಸೂರು(ಮಾ.06): ಹುಟ್ಟು ಹಬ್ಬದ ದಿನವೇ ಮೈಸೂರಿನ ಬಿಜೆಪಿ ಮುಖಂಡ ಬರ್ಬರವಾಗಿ ಕೊಲೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಿಜೆಪಿ ಮುಖಂಡನನ್ನು ಭೀಕರವಾಗಿ ಕೊಲೆ ಮಾಡಕಾಗಿದೆ.

"

ಮೃತ ಆನಂದ್ ಮೃತಪಟ್ಟವರು. ಘಟನಾ ಸ್ಥಳಕ್ಕೆ ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಡಾ.ಪ್ರಕಾಶ್ ಗೌಡ ಭೇಟಿ ನೀಡಿದ್ದಾರೆ. ದೇವರಾಜ‌ ಠಾಣೆ ಎಸಿಪಿ ಶಶಿಧರ್, ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್ ರಾಜ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.

ತುಮಕೂರಲ್ಲಿ ಭೀಕರ ಅಪಘಾತ: 13 ಜನ ದುರ್ಮರಣ

ಘಟನಾ ಸ್ಥಳದಲ್ಲಿ ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿಗಳಿಂದ ತಪಾಸಣೆ ನಡೆದಿದೆ. ಆನಂದ್‌ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಸರ್ವೀಸ್ ಅಪಾರ್ಟ್ಮೆಂಟ್ ಗೆ ತಡರಾತ್ರಿ ಬಂದಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗೆಳೆಯರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆಯಲ್ಲೇ ಆನಂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಅಪಾರ್ಟ್ಮೆಂಟ್ ನ ಎರೆಡನೇ ಮಹಡಿಯಲ್ಲಿ ಮಹಜರು ಕಾರ್ಯ ನಡೆದಿದೆ. ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಭೇಟಿ ಪರಿಶೀಲನೆ ನಡೆಸಿದ್ದು, ಮುಂಜಾನೆ 3 ರಿಂದ 4 ಗಂಟೆ ವೇಳೆಯಲ್ಲಿ ಆನಂದ್ ಕೊಲೆಯಾಗಿದೆ.

ಗೆಳೆಯನ ಮಂಚಕ್ಕೆ ದೂಡಿದ ಪತಿ, ಗೃಹಿಣಿ ಆತ್ಮಹತ್ಯೆ

ಬಾಟಲ್‌ಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಗುರುವಾರ ರಾತ್ರಿ ಆನಂದ್ ಬರ್ತ್‌ಡೇ ಇತ್ತು. ಅದಕ್ಕಾಗಿ ಆನಂದ್ ಹಾಗೂ ಗೆಳೆಯರು ಪಾರ್ಟಿ ಮಾಡಿದ್ದರು. ಮೊದಲು ಬೇರೆಡೆ ಪಾರ್ಟಿ ಮಾಡಿ ನಂತರ ಅಪಾರ್ಟ್ಮೆಂಟ್‌ಗೆ ಬಂದಿದ್ದಾರೆ. ಇಲ್ಲಿ 5 ರಿಂದ 6 ಮಂದಿ ಪಾರ್ಟಿ ಮುಂದುವರೆಸಿದ್ದಾರೆ. ಈ ವೇಳೆ ಅಲ್ಲಿದ್ದವರಲ್ಲೆ ಗಲಾಟೆ ಆರಂಭವಾಗಿದೆ. ಆಗ ಬಾಟಲ್‌ನಲ್ಲಿ ಚುಚ್ಚಿ ಕೊಲೆ ಮಾಡಿರೋದು ಕಂಡು ಬಂದಿದೆ.

ಯಾರ್ಯಾರು ಇದ್ದರು ಅಂತ ಮಾಹಿತಿ ಗೊತ್ತಾಗಿದೆ. ಅವರೆಲ್ಲರನ್ನ ಹಿಡಿದು ವಿಚಾರಣೆ ಮಾಡ್ತಿವಿ. ಕೊಲೆ ಯಾವ ಕಾರಣಕ್ಕಾಗಿ ಆಗಿದೆ, ಯಾರು ಮಾಡಿದ್ದಾರೆ ಅನ್ನೋದನ್ನ ಈಗಲೇ ಹೇಳೋಕಾಗೋಲ್ಲ. ಕೊಲೆಯಾದ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಿನ್ನೆ ಘಟನೆ ಸಂಧರ್ಭದಲ್ಲಿದ್ದ ಕೆಲವರು ಸದ್ಯ ಪರಾರಿಯಾಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಸಂಪೂರ್ಣ ತನಿಖೆ ಬಳಿಕ ಘಟನೆಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.