ಪತಿಯ ಅಂತ್ಯಕ್ರಿಯೆಗೂ ಹೋಗಲಾಗದ ಪತ್ನಿ, ಮಕ್ಕಳಿಗೂ ಸೋಂಕು!
ಮುಂಬೈಯಿಂದ ಬಂದಿದ್ದ 53ರ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿತರಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು. ನೋವಿನ ಸಂಗತಿ ಎಂದರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಲಿ, ಕೊನೆಯ ಬಾರಿಗೆ ಮುಖ ನೋಡುವುದಕ್ಕಾಗಲಿ ಅವರ ಪತ್ನಿ ಮಕ್ಕಳಿಗೆ ಅವಕಾಶ ಇರಲಿಲ್ಲ.
ಉಡುಪಿ(ಮೇ 23): ಮುಂಬೈಯಿಂದ ಬಂದಿದ್ದ 53ರ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿತರಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು. ನೋವಿನ ಸಂಗತಿ ಎಂದರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಲಿ, ಕೊನೆಯ ಬಾರಿಗೆ ಮುಖ ನೋಡುವುದಕ್ಕಾಗಲಿ ಅವರ ಪತ್ನಿ ಮಕ್ಕಳಿಗೆ ಅವಕಾಶ ಇರಲಿಲ್ಲ. ಈಗ ಇನ್ನೂ ನೋವಿನ ಸಂಗತಿ ಎಂದರೆ, ಅವರೆಲ್ಲರೂ ಈಗ ಕೊರೋನಾ ಸೋಂಕು ಪೀಡಿತರಾಗಿದ್ದಾರೆ.
ಕುಂದಾಪುರ ಮೂಲದ ಆ ವ್ಯಕ್ತಿ, ಪತ್ನಿ ಮತ್ತು ಮೂವರ ಮಕ್ಕಳು ಮೇ 13ರಂದು ಮುಂಬೈಯಿಂದ ಊರಿಗೆ ಬಂದಿದ್ದರು. ಅದೇ ದಿನ ಕ್ವಾರಂಟೈನ್‌ನಲ್ಲಿ ಅವರಿಗೆ ಹೃದಯಾಘಾತವಾಗಿ, 4ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟರು. 16ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು.
ಕಳ್ಳ ದಾರೀಲಿ ರಾಜ್ಯಕ್ಕೆ ಬರುತ್ತಿರುವ ಜನರು: ಕೊರೋನಾ ಸೋಂಕು ಹರಡುವ ಆತಂಕ..!
ತಕ್ಷಣ ಅವರೊಂದಿಗೆ ಬಸ್ಸಿನಲ್ಲಿ ಬಂದಿದ್ದ ಮತ್ತು ಕ್ವಾರಂಟೈನ್‌ನಲ್ಲಿದ್ದ 57 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅವರಲ್ಲಿ ಮೃತರ 51 ವರ್ಷದ ಪತ್ನಿ, 26 ವರ್ಷದ ಮಗಳು, 24 ಮತ್ತು 21 ವರ್ಷದ ಇಬ್ಬರು ಪುತ್ರರು ಸೋಂಕಿತರಾಗಿರುವುದು ದೃಢವಾಗಿದ್ದು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಮೃತ ವ್ಯಕ್ತಿಗೆ ಉಡುಪಿಯ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಕೋವಿಡ್ ನಿಯಮಗಳಂತೆ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಪತ್ನಿ-ಮಕ್ಕಳಿಗೆ ಅವರ ಅಂತಿಮ ದರ್ಶನಕ್ಕೂ ಅವಕಾಶವಿರಲಿಲ್ಲ.
ಲಾಕ್‌ಡೌನ್ ನಂತರ ಕೆಲಸಕ್ಕೆ ಹಾಜರ್: ಕಂಪನಿಯಲ್ಲಿ ಕೆಲಸದ ವೇಳೆ ಕಾರ್ಮಿಕ ಮಹಿಳೆ ಸಾವು
ಅವರು ಮುಂಬೈಯಿಂದ ಬಂದ ಬಸ್ಸಿನಲ್ಲಿದ್ದ 4 ಮತ್ತು 15 ವರ್ಷದ ಬಾಲಕಿಯರಿಗೂ ಸೋಂಕು ಪತ್ತೆಯಾಗಿದೆ. ಈ ಬಾಲಕಿಯರಿಗೆ ನೇರ ಸಂಪರ್ಕದಲ್ಲಿದ್ದ ಅವರ ಮನೆಯವರೂ ಸೇರಿ 24 ಮಂದಿಯನ್ನು ಗುರುತಿಸಲಾಗಿದ್ದು, ಇದೀಗ ಇನ್ನಷ್ಟುಆತಂಕಕ್ಕೆ ಕಾರಣವಾಗಿದೆ