ಆನೇಕಲ್‌(ಮೇ.08): ಕೆಲಸ ಮಾಡುತ್ತಿದ್ದ ಜಾಗದಲ್ಲಿಯೇ ಕುಸಿದು ಬಿದ್ದು ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಇಂಡ್ಲವಾಡಿ ಕ್ರಾಸ್‌ನಲ್ಲಿರುವ ಆರ್ಕೋಲ್ಯಾಬ್‌ ಸ್ಟೈರೈಡ್ಸ್‌ ಕಂಪನಿಯಲ್ಲಿ ನಡೆದಿದೆ.

ಆನೇಕಲ್‌ ಠಾಣಾ ವ್ಯಾಪ್ತಿಯ ಇಂಡ್ಲವಾಡಿ ನಿವಾಸಿ ಮಂಜುಳಾ(26) ಮೃತಪಟ್ಟವರು. ಲಾಕ್‌ಡೌನ್‌ ನಂತರ ಕೆಲಸಕ್ಕೆ ಹಾಜರಾದ ಆಕೆ 2ನೇ ಲೆವೆಲ್‌ ಪ್ಯಾಕಿಂಗ್‌ ಸೆಕ್ಷನ್‌ಗೆ ತೆರಳಿದರು. ಇತರ ಕಾರ್ಮಿಕರು ಕ್ಯಾಂಟೀನ್‌ಗೆ ಬಂದರೂ ಮಂಜುಳಾ ಬರಲಿಲ್ಲ. ಸಹೋದ್ಯೋಗಿಗಳು ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. 

ಆನೇಕಲ್‌: ಪಡಿತರ ಗೋಧಿಯಲ್ಲಿ ಬರೀ ಧೂಳು, ಹುಳ; ಇದೆಂಥಾ ಅವ್ಯವಸ್ಥೆ?

ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಿದಾಗ ವೈದ್ಯರು ಆಕೆಯ ಸಾವನ್ನು ದೃಢಪಡಿಸಿದರು. ಸ್ಟೈರೈಡ್ಸ್‌ ಸಂಸ್ಥೆಯಿಂದ 4 ಲಕ್ಷ, ಗುತ್ತಿಗೆದಾರ ಕಂಪನಿಯಿಂದ 2 ಲಕ್ಷ ಪರಿಹಾರ ನೀಡಲಾಯಿತು.