Asianet Suvarna News Asianet Suvarna News

ಆಗ ವರುಣ, ಈಗ ಕೊರೋನಾ: ಬಡ ಕುಂಬಾರರ ಕಣ್ಣೀರ ಕಥೆ

ಬೇಸಿಗೆ ಬಂತೆಂದರೆ ಕುಂಬಾರರ ಕೊಡದ ತುಂಬ ತಣ್ಣೀರು. ಮನೆಯ ಆರ್ಥಿಕತೆಗೂ ಸ್ವಲ್ಪ ಸಮೃದ್ಧತೆ..! ಆದರೆ, ಕೊರೋನಾ ಈ ಬೇಸಿಗೆಯಲ್ಲಿ ಕುಂಬಾರರ ಮಡಿಕೆಯಲ್ಲಿ ಇರಬೇಕಾದ ತಣ್ಣೀರಿನ ಬದಲಿಗೆ ಹೊಟ್ಟೆಮೇಲೆ ತಣ್ಣೀರು ಬಟ್ಟೆಹಾಕಿದೆ.

 

mud pots left unslod in shivamogga due to lockdown
Author
Bangalore, First Published Apr 28, 2020, 1:26 PM IST

ಶಿವಮೊಗ್ಗ(ಏ.28): ಬೇಸಿಗೆ ಬಂತೆಂದರೆ ಕುಂಬಾರರ ಕೊಡದ ತುಂಬ ತಣ್ಣೀರು. ಮನೆಯ ಆರ್ಥಿಕತೆಗೂ ಸ್ವಲ್ಪ ಸಮೃದ್ಧತೆ..! ಆದರೆ, ಕೊರೋನಾ ಈ ಬೇಸಿಗೆಯಲ್ಲಿ ಕುಂಬಾರರ ಮಡಿಕೆಯಲ್ಲಿ ಇರಬೇಕಾದ ತಣ್ಣೀರಿನ ಬದಲಿಗೆ ಹೊಟ್ಟೆಮೇಲೆ ತಣ್ಣೀರು ಬಟ್ಟೆಹಾಕಿದೆ.

ಆರು ತಿಂಗಳ ಹಿಂದೆ ವರುಣ, ಈಗ ಕೊರೋನಾ. ಇದು ಬಡ ಕುಂಬಾರರ ಕಣ್ಣೀರ ಕತೆ. ಲಾಕ್‌ಡೌನ್‌ ಪರಿಣಾಮದಿಂದ ಕುಂಬಾರರು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ.

ಮಾರ್ಚ್ 30ಕ್ಕೆ 15 ನಿಮಿಷ ಕೆಲಸ ಮಾಡಿದ್ದೇ ಕೊನೆ, ಮೈಗಳ್ಳ ಅಧಿಕಾರಿಗೆ ಜಿಲ್ಲಾಧಿಕಾರಿ ನೋಟಿಸ್

ಬೇಸಿಗೆ ಆರಂಭವಾಗುತ್ತಿದ್ದಂತೆ ಕುಂಬಾರರ ಕೈಯಲ್ಲಿ ಬಡವರ ಫ್ರಿಜ್‌ ಮಡಕೆ, ಹೂಜಿ, ಹೂದಾನಿಗಳು ಸೇರಿ ಅಲಂಕಾರಿಕ ವಸ್ತುಗಳು ತಯಾರಾಗುತ್ತಿದ್ದವು. ಆಧುನಿಕ ಯುಗದಲ್ಲೂ ಮಣ್ಣಿನ ಮಡಕೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಸಿಗೆಯಲ್ಲಿ ಮಡಕೆಗಳನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ಮಡಕೆಗಳ ಮಾರಾಟ ಬೇಸಿಗೆಯಲ್ಲಿ ಜೋರು, ಕುಂಬಾರರ ಕೈಗೂ ಬಿಡುವಿರುವುದಿಲ್ಲ.

ಬೇಸಿಗೆ ಉಳಿದವರ ಪಾಲಿಗೆ ಕಠೋರವಾದರೆ, ಕುಂಬಾರರ ಪಾಲಿಗೆ ತಂಪಾದ ಸಂದರ್ಭ. ಬೇಸಿಗೆಯಲ್ಲಿ ತಮ್ಮ ಮಡಕೆಗಳನ್ನು ಮಾರಾಟ ಮಾಡಿ ಇಡೀ ವರ್ಷದ ಆದಾಯ ಗಳಿಸಿಕೊಳ್ಳುತ್ತಾರೆ. ತಮ್ಮ ಕೌಶಲ್ಯಕ್ಕೂ ಸಿಕ್ಕ ಮೆಚ್ಚುಗೆಯನ್ನು ಗಮನಿಸಿ ಮನಸ್ಸಿನಲ್ಲಿ ಸಂತೋಷ ಕೂಡಾ ಅನುಭವಿಸುತ್ತಾರೆ. ಪ್ರತಿ ವರ್ಷವೂ ಅವರ ಕೌಶಲ್ಯ ಹೊಸ ದಾರಿಯತ್ತ ಸಾಗುತ್ತದೆ. ಹೊಸ ಮಾದರಿಗಳನ್ನು ಸಿದ್ಧಪಡಿಸುತ್ತಾರೆ.

ಮಾಸ್ಕ್ ಧರಿಸದಿದ್ರೆ 100 ರೂ. ದಂಡ, ಏ.30ರಿಂದಲೇ ಜಾರಿ..!

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ, ಇಲ್ಲಿನ ಕುಂಬಾರರು ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡಲು 2-3 ತಿಂಗಳ ಹಿಂದೆಯೇ ಮಣ್ಣನ್ನು ತಂದು ಸಂಗ್ರಹಿಸಿ ಮಡಿಕೆಗಳನ್ನು ತಯಾರಿಸಿದ್ದಾರೆ. ಅದರಂತೆ ಈ ಬಾರಿಯೂ ಕುಂಬಾರರು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಸಾಕಷ್ಟುಸಂಖ್ಯೆಯ ಮಡಕೆ ತಯಾರಿಸಿ ಇಟ್ಟಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಆದ್ಯಾವುದೂ ವ್ಯಾಪಾರವಾಗದೆ ಮನೆಯಲ್ಲೇ ಇಟ್ಟುಕೊಂಡು ನಷ್ಟಅನುಭವಿಸುತ್ತಿದ್ದಾರೆ. ಇದರಿಂದಾಗಿ ಈ ಬಾರಿಯ ಬೇಸಿಗೆ ತಣ್ಣೀರ ಮಡಿಕೆ ಮಾಡುವ ಕುಂಬಾರರ ಪಾಲಿಗೆ ಬಿಸಿನೀರ ಬುಗ್ಗೆಯಾಗಿ ಪರಿಣಮಿಸಿದೆ. ಒಂದೆಡೆ ಲಾಕ್‌ಡೌನ್‌ನಿಂದಾಗಿ ತಯಾರಿಸಿದ ಮಡಿಕೆಗಳೊಂದಿಗೆ ಮನೆಯಲ್ಲೇ ಕೂರುವಂತಾಗಿದ್ದರೆ, ಮತ್ತೊಂದೆಡೆ ವರ್ಷದ ದುಡಿಮೆಗೂ ಕತ್ತರಿ ಬಿದ್ದಿದೆ.

ಮಡಿಕೆ ಮಾರಾಟಕ್ಕೆ ಕೊರೋನಾ ಕಂಟಕ

ಸಾಮಾನ್ಯವಾಗಿ ಕುಂಬಾರರಿಗೆ ಬೇಸಿಗೆ ಹಾಗೂ ಗಣಪತಿ ಹಬ್ಬದ ಸಮಯದಲ್ಲಿ ಹೆಚ್ಚಿನ ಆದಾಯ ಸಿಗುತ್ತದೆ. ಆದರೆ, ಕಳೆದ ಬಾರಿ ಮಳೆಯಿಂದಾಗಿ ಕುಂಬಾರರು ತಯಾರಿಸಿದ ಗಣಪತಿ ಮೂರ್ತಿಗಳು ನೀರಿನ ಪಾಲಾಗಿ ನಷ್ಟಅನುಭವಿಸುವಂತಾಗಿತ್ತು. ಬೇಸಿಗೆಯಲ್ಲಾದರೂ ಹೆಚ್ಚಿನ ಆದಾಯವನ್ನುಗಳಿಸುವ ನಿರೀಕ್ಷೆಯಲ್ಲಿದ್ದ ಕುಂಬಾರರಿಗೆ ಕೊರೋನಾ ಲಾಕ್‌ಡೌನ್‌ನಿಂದಾಗಿ ತಯಾರಿಸಿದ ಮಡಕೆಗಳು ಮಾರಾಟವಾಗದೆ ಬದುಕು ಅತಂತ್ರವಾಗಿದೆ.

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!

ಬೇಸಿಗೆಯಲ್ಲಿ ಹೆಚ್ಚು ವ್ಯಾಪಾರ ಆಗುತ್ತದೆ ಎಂದು ಸಾಲ ಮಾಡಿ ಮಡಕೆಗಳನ್ನು ತಯಾರಿಸಲಾಗಿದೆ. ಮಡಕೆಗಳು ವ್ಯಾಪಾರ ಆದ ನಂತರ ಸಾಲ ತೀರಿಸಲು ಸಹಾಯವಾಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದ ವ್ಯಾಪಾರ ಇಲ್ಲದಂತಾಗಿದ್ದು, ಜೀವನ ನಡೆಸೋದು ಕಷ್ಟವಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿದಂತಾಗಿದೆ ಎಂದು ಶಿವಮೊಗ್ಗ ಕುಂಬಾರರು ರೇಣುಕಪ್ಪ ತಿಳಿಸಿದ್ದಾರೆ.

-ವಿದ್ಯಾ ಶಿವಮೊಗ್ಗ

Follow Us:
Download App:
  • android
  • ios