Asianet Suvarna News Asianet Suvarna News

ಮಾರ್ಚ್ 30ಕ್ಕೆ 15 ನಿಮಿಷ ಕೆಲಸ ಮಾಡಿದ್ದೇ ಕೊನೆ, ಮೈಗಳ್ಳ ಅಧಿಕಾರಿಗೆ ಜಿಲ್ಲಾಧಿಕಾರಿ ನೋಟಿಸ್

ಕೊರೋನಾ ವೈರಸ್ ವಿರುದ್ಧ ವೈದ್ಯರೂ, ಪೊಲೀಸ್ ಅಧಿಕಾರಿಗಳೂ ಇತರ ಸಿಬ್ಬಂದಿ ಸತತ ಪ್ರಯತ್ನ ನಡೆಸುತ್ತಿರುವಾಗ ಮೈಸೂರಿನ ಬೇಜವಾಬ್ದಾರಿ ಅಧಿಕಾರಿಯೊಬ್ಬರು ಕೆಲಸದಿಂದ ನುಣುಚಿಕೊಂಡಿದ್ದಾರೆ.

 

dc issued notice to lazy officer who fails to do covid19 duty in mysore
Author
Bangalore, First Published Apr 28, 2020, 11:48 AM IST

ಮೈಸೂರು(ಏ.28): ಕೊರೋನಾ ವೈರಸ್ ವಿರುದ್ಧ ವೈದ್ಯರೂ, ಪೊಲೀಸ್ ಅಧಿಕಾರಿಗಳೂ ಇತರ ಸಿಬ್ಬಂದಿ ಸತತ ಪ್ರಯತ್ನ ನಡೆಸುತ್ತಿರುವಾಗ ಮೈಸೂರಿನ ಬೇಜವಾಬ್ದಾರಿ ಅಧಿಕಾರಿಯೊಬ್ಬರು ಕೆಲಸದಿಂದ ನುಣುಚಿಕೊಂಡಿದ್ದಾರೆ.

ಕೋವಿಡ್ ಕೆಲಸಕ್ಕೂ ಕಳ್ಳಾಟ ತೋರಿಸಿರುವ ಅಧಿಕಾರಿ ತಮಗೆ ವಹಿಸಿದ್ದ ಮಹತ್ವ ಜವಾಬ್ದಾರಿಯಲ್ಲೇ ಸೋಮಾರಿತನ ತೋರಿಸಿದ್ದಾರೆ. ಮೈಗಳ್ಳ ಅಧಿಕಾರಿಗೆ ಜಿಲ್ಲಾಧಿಕಾರಿ ನೋಟಿಸ್ ಕಳುಹಿಸಿದ್ದಾರೆ.

ಮಾಸ್ಕ್ ಧರಿಸದಿದ್ರೆ 100 ರೂ. ದಂಡ, ಏ.30ರಿಂದಲೇ ಜಾರಿ..!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದ್ಯಾಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ಮೈಸೂರಿನ ಕೋವಿಡ್ ಆಸ್ಪತ್ರೆ ರೋಗಿಗಳು, ವೈದ್ಯಕೀಯ ಸಿಬ್ಬಂದಿಗೆ ಆಹಾರ ಪೂರೈಕೆ, ಆಹಾರ ಪದಾರ್ಥಗಳ ಮೂಲಕ ರೋಗ ಹರಡದಂತೆ ವಿಲೇವಾರಿ ಮಾಡುವುದು, ಹೌಸ್ ಕೀಪಿಂಗ್ ಕರ್ತವ್ಯಕ್ಕೆ ಬಿಂದ್ಯಾ ನಿಯೋಜನೆಗೊಂಡಿದ್ದರು.

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!

ಆದರೆ ಆಸ್ಪತ್ರಯತ್ತ ತಿರುಗಿಯೂ ನೋಡದ ಅಧಿಕಾರಿ ಬಗ್ಗೆ ತೀವ್ರ ಅಸಮಾಧಾನ ಕೇಳಿ ಬಂದಿದೆ. ಮಾರ್ಚ್ 30ರಂದು ಒಮ್ಮೆ ಭೇಟಿ ಕೊಟ್ಟು 15 ನಿಮಿಷ ಕೆಲಸ ಮಾಡಿದ್ದೇ ಕೊನೆ. ವಹಿಸಿದ್ದ ಕೆಲಸ ಮಾಡದೆ ಕರ್ತವ್ಯ ಲೋಪ ತೋರಿಸಿದ್ದು, ನೋಡಲ್ ಅಧಿಕಾರಿ ಈ ಬಗ್ಗೆ ವರದಿ ಸಲ್ಲಿಸಿದ್ದರು.

ಸಬ್‌ ರಿಜಿಸ್ಟ್ರಾರ್‌ ಕಚೇರಿ, ಆಸ್ತಿ ನೊಂದಣಿ ಆರಂಭಕ್ಕೆ ನಿರ್ಧಾರ

ಬಿಂದ್ಯಾಗೆ ಡಿಸಿ ಅಭಿರಾಮ್ ಜಿ.ಶಂಕರ್ ನೋಟಿಸ್ ಕಳುಹಿಸಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್- 19  ರೆಗ್ಯುಲೇಷನ್- 2020, ವಿಪತ್ತು ನಿರ್ವಹಣಾ ಕಾಯ್ದೆ- 2005 ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

Follow Us:
Download App:
  • android
  • ios