ಕಲಬುರಗಿ ಏರ್‌ಪೋರ್ಟ್‌ಗೆ ಪ್ರಯಾಣಿಕರ ಸಂಖ್ಯೆ ಕುಸಿತ: ವಿಮಾನ ಸೇವೆ ವಿಸ್ತರಣೆಗೆ ಸಂಸದ ಜಾಧವ್ ಮನವಿ
ಕಲ್ಬುರ್ಗಿಯಿಂದ ದೇಶದ ವಿವಿಧಡೆ ವಿಮಾನ ಸಂಚಾರವನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯದ ಭಾರತ ಸರ್ಕಾರದ ಕಾರ್ಯದರ್ಶಿ ರಾಜೀವ್ ಬನ್ಸಲ್
ಕಲಬುರಗಿ(ಮೇ.31): ನವದೆಹಲಿಯಲ್ಲಿ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯದ ಭಾರತ ಸರ್ಕಾರದ ಕಾರ್ಯದರ್ಶಿ ರಾಜೀವ್ ಬನ್ಸಲ್ ಅವರನ್ನು ಕಲ್ಬುರ್ಗಿ ಸಂಸದ ಡಾ. ಉಮೇಶ್ ಜಾದವ್ ಭೇಟಿ ನೀಡಿ ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ಸೌಲಭ್ಯ ಪೂರ್ಣಗೊಂಡಿದ್ದರಿಂದ ವಿವಿಧಡೆ ವಿಮಾನಯಾನ ಮಾರ್ಗವನ್ನು ಪ್ರಾರಂಭಿಸಲು ಮನವಿ ಮಾಡಿದರು.
ಹಾಗೆಯೇ ಕಳೆದ ಒಂದು ವರ್ಷದಿಂದ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಕೂಡ ವಿಸ್ತೃತವಾಗಿ ಚರ್ಚಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಅನುಮತಿ
ಕಲ್ಬುರ್ಗಿಯಿಂದ ಹಿಂಡನ್ (ದೆಹಲಿ) ವಿಮಾನ ಸೇವೆ ಸಂಪೂರ್ಣ ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಬನ್ಸಲ್ ಅವರು ಜೂ.15ರ ಒಳಗಡೆ ವಿವಿಧ ವಿಮಾನ ಕಂಪನಿಗಳನ್ನು ಕರೆದು ಒಂದು ಸಭೆ ನಡೆಸುವ ಮೂಲಕ ಕಲ್ಬುರ್ಗಿಯಿಂದ ದೇಶದ ವಿವಿಧಡೆ ವಿಮಾನ ಸಂಚಾರವನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಕಲ್ಬುರ್ಗಿ ನಗರದ ಕಿರಣ್ ಕುಮಾರ್ ಶೇಟಕಾರ್ ಸಂಸದರ ಜೊತೆಗಿದ್ದರು.