ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಅನುಮತಿ
ನೈಟ್ ಲ್ಯಾಂಡಿಂಗ್ ಸಾಮರ್ಥ್ಯವು ಹೆಚ್ಚಿನ ವಿಮಾನಯಾನ ನಿರ್ವಾಹಕರಿಗೆ ತಮ್ಮ ವಿಮಾನಗಳನ್ನು ಕಲಬುರಗಿ ವಿಮಾನ ನಿಲ್ದಾಣದಿಂದ ನಿರ್ವಹಿಸಲು ಅನುವು ಮಾಡಿಕೊಡಲಿದೆ.
ಕಲಬುರಗಿ(ಮೇ.19): ಕಲಬುರಗಿ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದಿಂದ ಬಹುನಿರೀಕ್ಷಿತ ರಾತ್ರಿ ಲ್ಯಾಂಡಿಂಗ್ ಅನುಮತಿ ಪಡೆದಿದೆ. ಸದ್ಯಕ್ಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಮಾತ್ರ ವಿಮಾನ ಹಾರಾಟ ನಡೆಸುತ್ತಿದೆ. ಇನ್ನು ರಾತ್ರಿ ಇಳಿಯುವಿಕೆಯ ಅನುಮತಿಯೊಂದಿಗೆ ಸೂರ್ಯಾಸ್ತದ ನಂತರವೂ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು. ನೈಟ್ ಲ್ಯಾಂಡಿಂಗ್ ಸಾಮರ್ಥ್ಯವು ಹೆಚ್ಚಿನ ವಿಮಾನಯಾನ ನಿರ್ವಾಹಕರಿಗೆ ತಮ್ಮ ವಿಮಾನಗಳನ್ನು ಕಲಬುರಗಿ ವಿಮಾನ ನಿಲ್ದಾಣದಿಂದ ನಿರ್ವಹಿಸಲು ಅನುವು ಮಾಡಿಕೊಡಲಿದೆ.
ರನ್ ವೇ 27ರ ಸಮೀಪದಲ್ಲಿ ಯಾವುದೇ ಸಂಭಾವ್ಯ ಎತ್ತರದ ನಿರ್ಬಂಧಗಳಿಲ್ಲದ ಕಾರಣ ಡಿಜಿಸಿಎ ರನ್ವೇ 27ಕ್ಕೆ ರಾತ್ರಿ ಲ್ಯಾಂಡಿಂಗ್ ಅನುಮತಿಯನ್ನು ನೀಡಿದೆ. ರನ್ವೇ 9ರಲ್ಲಿ ರನ್ವೇ ಥ್ರೆಶೋಲ್ಡ್‌ಶೀಟ್ ಅನ್ನು ಕೈಗೊಳ್ಳಲು ಡಿಜಿಸಿಎ ಕೇಳಿದೆ. ಹೆಚ್ಚಿನ ಕಾರ್ಯಾಚರಣೆಗಳು ರನ್ ವೇ 27ರಲ್ಲಿ ಇರುವುದರಿಂದ, ಇದು ಆಗದೇ ಇರಬಹುದು. ರಾತ್ರಿ ಲ್ಯಾಂಡಿಂಗ್‌ಗಾಗಿ ಶ್ರಮಿಸಿದ ಎಲ್ಲಾ ಇಲಾಖೆಗಳ ಅವಿರತ ಪ್ರಯತ್ನಗಳಿಗಾಗಿ ಧನ್ಯವಾದಗಳು ಎಂದು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಡಾ. ಚಿಲಕ ಮಹೇಶ್ ಅವರು ತಿಳಿಸಿದ್ದಾರೆ.
ಕಲಬುರಗಿ: ಶೀಘ್ರ ಫ್ಲೈಟ್ ಸಿಮುಲೇಷನ್ ಟ್ರಯಲ್
ಈಚೆಗಷ್ಟೆ ಕಲಬುರಗಿಗೆ ಡಿಜಿಸಿಎ ತಂಡದವರು ಬಂದು ಇಲ್ಲಿನ ವ್ಯವಸ್ಥೆಗಳನ್ನೆಲ್ಲ ಪರಿಶೀಲಿಸಿದ್ದರು. ರಾತ್ರಿ ವಿಮಾನ ಇಳಿಯುವ ಸಲುವಾಗಿ ಬೇಡಿಕೆ ಇಲ್ಲಿಂದ ಬಂದಿದ್ದರಿಂದ ಇಲ್ಲಿ ಲಭ್ಯವಿರುವಂತಹ ಸೌವಲತ್ತುಗಳು, ಅಗತ್ಯ ಬಗ್ಗೆಯೂ ಸಂಪೂರ್ಣ ಪರಿಶೀಲನೆ ನಡೆದಿತ್ತು.