Kolar: ಶತಶೃಂಗ ಬೆಟ್ಟವನ್ನು ಕಬಳಿಕೆ ಮಾಡಲು ಬಿಡಲ್ಲ: ಸಂಸದ ಮುನಿಸ್ವಾಮಿ

ಅದು ಬೆಟ್ಟದ ಮೇಲಿನ ನಯನ ಮನೋಹರವಾದ ಪ್ರದೇಶ ಎಂಥಹವರಿಗೂ ಆ ಪ್ರದೇಶವನ್ನು ನೋಡಿದ್ರೆ ಒಂದು ಕ್ಷಣ ಆ ಪ್ರಕೃತಿಯ ಮಡಿಲಲ್ಲಿ ಇದ್ದು ಹೋಗಬೇಕೆನಿಸುವ ಜಾಗ. ಅಂಥ ಜಾಗದಲ್ಲಿ ಯೋಗ ಮಾಡಿ ದಾಖಲೆ ಮಾಡಿದ ಮೇಲೆ ಸದ್ಯ ಆ ಜಾಗವನ್ನು ಖಾಸಗಿ ಭೂಗಳ್ಳರ ಪಾಲಾಗದಂತೆ ಕಾಪಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

MP S Muniswamy Says Shatashrunga Mountain Place Is Belongs To Government Will Not Leave For Anyone Else gvd

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜೂ.27): ಅದು ಬೆಟ್ಟದ ಮೇಲಿನ ನಯನ ಮನೋಹರವಾದ ಪ್ರದೇಶ ಎಂಥಹವರಿಗೂ ಆ ಪ್ರದೇಶವನ್ನು ನೋಡಿದ್ರೆ ಒಂದು ಕ್ಷಣ ಆ ಪ್ರಕೃತಿಯ ಮಡಿಲಲ್ಲಿ ಇದ್ದು ಹೋಗಬೇಕೆನಿಸುವ ಜಾಗ. ಅಂಥ ಜಾಗದಲ್ಲಿ ಯೋಗ ಮಾಡಿ ದಾಖಲೆ ಮಾಡಿದ ಮೇಲೆ ಸದ್ಯ ಆ ಜಾಗವನ್ನು ಖಾಸಗಿ ಭೂಗಳ್ಳರ ಪಾಲಾಗದಂತೆ ಕಾಪಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವುದು ಆ ಜಾಗ ಹೇಗಿದೆ ಇಲ್ಲಿದೆ ವರದಿ. ಸುತ್ತಲೂ ಬೆಟ್ಟ ಗುಡ್ಡಗಳು ಮದ್ಯದಲ್ಲಿ ಸುಮಾರು 60 ಎಕರೆಯಷ್ಟು ವಿಶಾಲವಾದ ಪ್ರದೇಶ, ಬೆಟ್ಟದ ಮೇಲೊಂದು ಮನೆಯ ಮಾಡಿದರೆ ಅನ್ನೋ ಮಾತಿಗೆ ಸೂಕ್ತವಾದ ಜಾಗವಿದು.

ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಶತಶೃಂಗ ಬೆಟ್ಟಗಳ ಸಾಲಿನಲ್ಲಿನ ತೇರಹಳ್ಳಿ ಬೆಟ್ಟದ ಮೇಲಿರುವ ಈ ಪ್ರದೇಶ ಸದ್ಯ ಕೋಲಾರ ಹಾಟ್​ ಸ್ಪಾಟ್​ ಯಾಕಂದ್ರೆ ಇದೇ ಜೂನ್​-21 ರಂದು ಈ ಬೆಟ್ಟದ ಮೇಲೆ 20 ಸಾವಿರಕ್ಕೂ ಹೆಚ್ಚು ಜನರು ಯೋಗ ಮಾಡುವ ಮೂಲಕ ಕೋಲಾರದಲ್ಲಿ ದಾಖಲೆ ಮಾಡಿದ್ದಾರೆ.ವಿಶೇಷವಾದ ಸ್ಥಳದಲ್ಲಿ ಯೋಗ ಮಾಡಬೇಕು ಅನ್ನೋ ನಿಟ್ಟಿನಲ್ಲ ಜಿಲ್ಲಾಡಳಿತ ಹಾಗೂ ಸಂಸದ ಮುನಿಸ್ವಾಮಿ ಈ ಜಾಗವನ್ನು ಗುರುತಿಸಿ ಇಲ್ಲಿ ಯೋಗ ಮಾಡಿ ದಾಖಲೆ ಮಾಡಿದರು. ಇದಕ್ಕೂ ಮೊದಲು ಈ ಜಾಗದಲ್ಲಿ ಜನರು ಓಡಾಡೋದು ಕಷ್ಟಕರವಾದ ಪ್ರದೇಶವಾಗಿತ್ತು.

ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ: ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು!

ಅದನ್ನು ಸುಮಾರು ಹದಿನೈದು ದಿನಗಳ ಕಾಲ ಸಂಸದ ಮುನಿಸ್ವಾಮಿ ಜೆಸಿಬಿಗಳು ಹಾಗೂ ಹತ್ತಾರು ಕೆಲಸಗಾರರನ್ನು ಬಳಸಿಕೊಂಡು ಕ್ಲೀನ್​ ಮಾಡಿಸಿದ್ದರು. ಈಗ ಆ ಜಾಗ ಕ್ಲೀನ್​ ಮಾಡಿ ಅಲ್ಲಿಗೆ ರಸ್ತೆ ಮಾಡಿದ ಮೇಲೆ ಉದ್ಬವವಾಗಿರುವ ಪ್ರಶ್ನೆ ಬೆಟ್ಟದ ಮೇಲಿನ ಈ ವಿಶೇಷವಾದ ಪ್ರದೇಶವನ್ನು ಪರರ ಪಾಲಾಗದಂತೆ ಸರ್ಕಾರಕ್ಕೆ ಉಳಿಸಬೇಕು ಅನ್ನೋದು. ಈ ನಿಟ್ಟಿನಲ್ಲಿ ಸಂಸದ ಮುನಿಸ್ವಾಮಿ ಈ ಸ್ಥಳ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಾಗ ಈ ಜಾಗದಲ್ಲಿ ಪುರಾತನ ಮಂಟಪವಿದೆ, ಹಾಗಾಗಿ ಇದು ದೇವಸ್ಥಾನಕ್ಕೆ ಸಂಬಂಧಿಸಿದ ಜಾಗ ಅಂದರೆ ಇದು ಸರ್ಕಾರಕ್ಕೆ ಸೇರಿದ ಜಾಗ ಇದನ್ನು ಬೇರೆ ಯಾರೋ ಖಾಸಗಿ ವ್ಯಕ್ತಿಗಳು ಕಬಳಿಕೆ ಮಾಡೋದಕ್ಕೆ ಬಿಡೋದಿಲ್ಲ ಸರ್ಕಾರಕ್ಕೆ ಉಳಿಸುತ್ತೇವೆ ಅನ್ನೋದು ಸಂಸದ ಮುನಿಸ್ವಾಮಿ ಅವರ ಮಾತು.

ಯೋಗ ದಿನ ಮಾಡಿದ ನಂತರ ಇದೇ ಸ್ಥಳ ಸದ್ಯ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಈ ಜಾಗವನ್ನು ಯಾರೋ ಖಾಸಗಿ ವ್ಯಕ್ತಿಗಳು ಕಬಳಿಕೆ ಮಾಡಲು ಯತ್ನಿಸುತ್ತಿದ್ದಾರೆ, ಈಗಾಗಲೇ ಸುಮಾರು 20 ಎಕರೆಯಷ್ಟು ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಮಾಡಿ ಭೂಮಿ ಕಬಳಿಕೆ ಮಾಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಹಾಗಾಗಿ ಜಿಲ್ಲಾಡಳಿತ ಆ ಜಾಗಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಹುಡುಕಾಡಲು ಶುರುಮಾಡಿದೆ. ಈ ಮೊದಲು ಡಿ.ಕೆ.ರವಿ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಇಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ ಮಾಡಬೇಕು ಅನ್ನೋ ಪ್ರಸ್ತಾಪ ಮಾಡಿದ್ದರು. ಆದರೆ ಅದು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ, ಆದರೆ ಅದೇ ಸ್ಥಳದಲ್ಲಿ ಈಗ ಯೋಗದಿನದಂದು ಯೋಗದಿನಾಚರಣೆ ಮಾಡಿ ದಾಖಲೆ ಮಾಡಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ, ರೆಬೆಲ್ ಶಾಸಕರನ್ನ ಪಕ್ಷದಿಂದ ಉಚ್ಛಾಟಿಸಿದ ಜೆಡಿಎಸ್

ಸದ್ಯ ಈ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು ಇಲ್ಲಿರುವ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸುವ ಯತ್ನ ನಡೆಯುತ್ತಿದೆ ಹಾಗಾಗಿ ಜಿಲ್ಲಾಡಳಿತ ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಉಳಿಸುತ್ತೇವೆ ಎನ್ನುತ್ತಿದ್ದಾರೆ ಜಿಲ್ಲಾಧಿಕಾರಿಗಳು. ಒಟ್ಟಾರೆ ಬೆಟ್ಟದ ಮೇಲೆ ಯೋಗ ದಿನದಂದು ಯೋಗ ಮಾಡಿ ದಾಖಲೆ ಮಾಡಿದರೆ, ಸದ್ಯ ಸುಂದರ ಜಾಗವನ್ನು ಹುಡುಕಿಕೊಟ್ಟ ಸ್ಥಳವನ್ನು ಕಬಳಿಕೆ ಮಾಡಿ ನಮಗೆ ಯೋಗ ಬಂತು ಅನ್ನೋದಕ್ಕೆ ಹಲವಾರು ಜನ ಭೂಗಳ್ಳರು ಸಿದ್ದವಾಗಿದ್ದಾರೆ. ಸದ್ಯ ಜಿಲ್ಲಾಡಳಿತ ಈ ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಉಳಿಸಿ ಈ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕೆ ಮೀಸಲಿಡಬೇಕು ಅನ್ನೋದು ಜಿಲ್ಲೆಯ ಜನರ ಆಶಯ.

Latest Videos
Follow Us:
Download App:
  • android
  • ios