* ರೆಬೆಲ್ ಶಾಸಕರನ್ನ ಪಕ್ಷದಿಂದ  ಉಚ್ಛಾಟಿಸಿದ ಜೆಡಿಎಸ್* ಉಚ್ಛಾಟಣೆ ಮಾಡಿ ಆದೇಶ ಹೊರಡಿಸಿದ ಜೆಡಿಎಸ್* ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ

ಬೆಂಗಳೂರು, (ಜೂನ್.22): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಅದಕ್ಕೂ ಮೊದಲು ಜೆಡಿಎಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಹೌದು...ಇಬ್ಬರು ರೆಬೆಲ್ ಶಾಸಕರನ್ನು ಜೆಡಿಎಸ್‌ನಿಂದ ಉಚ್ಛಾಟಿಸಲಾಗಿದೆ. ಗುಬ್ಬಿ ಶಾಸಕರಾದ ಶ್ರೀನಿವಾಸ್ ಹಾಗೂ ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರನ್ನ ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ ಇಂದು(ಬುಧವಾರ) ನಡೆದ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದಳಪತಿಗಳ ವಿರುದ್ಧ ಜೆಡಿಎಸ್‌ ಶಾಸಕರ ದಂಗಲ್, ಎಚ್‌ಡಿಕೆ ವಿರುದ್ಧ ಹೊಸ ಬಾಂಬ್

Scroll to load tweet…

ಬೆಳಗ್ಗೆ ಅಷ್ಟೇ ಗುಬ್ಬಿ ಶ್ರೀನಿವಾಸ್ ಅವರು ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದರು. ನಾನು ಸಚಿವ ಆಗಿದ್ದು ನನ್ನ ಜೀವನದಲ್ಲಿ ಅದೊಂದು ಕೆಟ್ಟ ಕನಸು. ಅದನ್ನು ಮರೆಯಲು ಪ್ರಯತ್ನ ಮಾಡುತ್ತಿದ್ದೇನೆ . ನನ್ನ ಜೀವನದಲ್ಲಿ ಕೆಟ್ಟ ಕನಸು ಮರೆಯುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ. ಇಂತವರ ಸಂಪುಟದಲ್ಲಿ ಇದ್ದೇ ಎಂಬುದೇ ದೊಡ್ಡ ಅಪಮಾನ ಎಂದುಕೊಳ್ಳುತ್ತೇನೆ. ಅದನ್ನು ಜ್ಞಾಪಿಸಿಕೊಳ್ಳಲು ಇಷ್ಟ ಪಡಲ್ಲ ಎಂದು ಜೆಡಿಎಸ್​ ಶಾಸಕ ಎಸ್​.ಆರ್​ ಶ್ರೀನಿವಾಸ್​ ಜೆಡಿಎಸ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಡಿಸೆಂಬರ್​ವರೆಗೂ ಕಾಯುತ್ತೇನೆ, ಡಿಸೆಂಬರ್​ನಲ್ಲಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಟ್ಟು ಬಳಿಕ ಕಾರ್ಯಕರ್ತರ ಬಳಿ ಹೋಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇದ್ಯಾ. ಸ್ವಲ್ಪ ಅವರಿಗೆ ಮನಸಾಕ್ಷಿ ಇದ್ದರೆ ನನ್ನವೋಟ್‌ ಕೇಳಬಾರದು. ನನ್ನ ಬಳಿ ವಿಚಲಿರಾಗುವ ಕಾರ್ಯಕರ್ತರು ಇಲ್ಲ. ನಾನು ಸ್ವತಂತ್ರವಾಗಿ ಸ್ಪರ್ಧಿಸಿದಾಗ ಯಾವ ಕಾರ್ಯಕರ್ತರು ಇದ್ದರೂ ಅವರು ಇಂದು ಕೂಡ ನನ್ನ ಜೊತೆಗಿದ್ದಾರೆ. ಕಾರ್ಯಕರ್ತರು ನನ್ನ ಬಿಟ್ಟು ಹೋಗಲ್ಲ ಎನ್ನುವ ನಂಬಿಕೆ ಇದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.


ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರು. ಅಲ್ಲದೇ ಜೆಡಿಎಸ್ ವರಿಷ್ಠ ವಿರುದ್ಧವೇ ತೊಡೆತಟ್ಟಿದ್ದರು. ಅಲ್ಲದೇ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಹಾಕಿದ್ದೇನೆ ಎಂದು ಬಹಿರಂಗವಾಗಿಯೇ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ ಶ್ರೀನಿವಾಸ ಗೌಡ ಹೇಳಿದ್ದರು. ನಾನು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಸಚಿವನಾಗಿದ್ದೆ. ಕುಮಾರಸ್ವಾಮಿ ಸಿಟ್ಟಾದ್ರೆ ಆಗಲಿ ಬಿಡಿ, ರಾಜಕೀಯದಲ್ಲಿ ಇವೆಲ್ಲಾ ಕಾಮನ್, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದಿದ್ದರು.