ಕೊರೋನಾ ಭೀತಿ: ಮನೆಯಿಂದ ಹೊರ ಬಂದಿದ್ದರೆ ಸಾಯುತ್ತಿದ್ದೆ ಎಂದ ಬಿಜೆಪಿ ಸಂಸದ
ಜನರ ಕೊರೋನಾ ಸಂಕಷ್ಟದ ಕುರಿತು ಹಾರಿಕೆ ಉತ್ತರ ನೀಡಿದ ಸಂಸದ ರಮೇಶ ಜಿಗಜಿಣಗಿ| ಅನಾರೋಗ್ಯ ಇತ್ತು ವೈದ್ಯರು ಹೊರಗೆ ಹೋದ್ರೆ ಬದುಕಲ್ಲಾ ಎಂದಿದ್ದರು, ಅದಕ್ಕೆ ಹೊರಗೆ ಬಂದಿರಲಿಲ್ಲ: ಜಿಗಜಿಣಗಿ| ಯಾರಿಗೂ ಯಾವುದೇ ಸಹಾಯ ಮಾಡಿಲ್ಲ, ಮಾಡೋದು ಇಲ್ಲ|
ವಿಜಯಪುರ(ಜೂ.04): ಮನೆಯಿಂದ ಹೊರಹೋದರೆ ಸಾಯುತ್ತಿದ್ದೆ, ಹಾಗಾಗಿಯೇ ನಾನು ಕೋವಿಡ್-19 ದಾಂಗುಡಿ ಇಟ್ಟ ವೇಳೆ ಮನೆಯಿಂದ ಹೊರಗಡೆ ಬಂದಿಲ್ಲ ಎಂದು ಮಾಜಿ ಸಚಿವ, ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಅರೋಗ್ಯದಿಂದ ಇದ್ದೆ, ಮನೆಯಿಂದ ಹೊರಗಡೆ ಹೋಗಬಾರದು, ಹೊರಗಡೆ ಹೋದರೆ ಸಾಯುತ್ತೀರಿ ಎಂದು ವೈದ್ಯರು ಹೇಳಿದ್ದರಯ. ಹೀಗಾಗಿ ನಾನು ಮನೆ ಬಿಟ್ಟು ಹೊರಗಡೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಕೊರೋನಾ ಕಾಟ: 'ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಮತ್ತಷ್ಟು ಬಿಗಿ'
ಕೊರೋನಾ ಸಂದರ್ಭದಲ್ಲಿ ಯಾರಿಗೂ ಯಾವುದೇ ಸಹಾಯ ಮಾಡಿಲ್ಲ, ಮಾಡುವುದು ಇಲ್ಲ. ಏಕೆಂದರೆ ನಾನು ಸಣ್ಣ ದಲಿತ ಸಮುದಾಯದಲ್ಲಿ ಹುಟ್ಟಿದ್ದೇನೆ, 15 ಲಕ್ಷ ಜನರಿಗೆ ಸಹಾಯ ಮಾಡ ಬೇಕೆಂದರೆ, ನನ್ನ ಜಮೀನು, ಮನೆ ಆಸ್ತಿ ಮಾರಬೇಕಾಗುತ್ತದೆ ಎಂದು ನೇರವಾಗಿ ಹೇಳಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ತಂದಿವೆ. ಎಲ್ಲ ವರ್ಗದವರ ಕಲ್ಯಾಣಕ್ಕೆ ಹಲವಾರು ಯೋಜನೆ ಜಾರಿಗೆ ತಂದಿವೆ ಎಂದು ತಿಳಿಸಿದ್ದಾರೆ.
News In 100 Seconds: ಈ ಕ್ಷಣದ ಪ್ರಮುಖ ಸುದ್ದಿಗಳು
"