Asianet Suvarna News Asianet Suvarna News

ಮೈಸೂರು : ಕೇಂದ್ರ ಸರ್ಕಾರದ ಬಳಿ ಪ್ರತಾಪ ಸಿಂಹ ಮನವಿ

  • ಮೈಸೂರು ನಗರವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಸೇರಿಸುವಂತೆ ಪ್ರಸ್ತಾಪ
  • ಸಂಸದ ಪ್ರತಾಪ ಸಿಂಹ ಕೇಂದ್ರ ಸರ್ಕಾರಕ್ಕೆ ಮನವಿ
MP prathap simha  recommended for  Mysuru   Smart City scheme
Author
Bengaluru, First Published Jul 30, 2021, 8:58 AM IST

 ಮೈಸೂರು (ಜು.30):  ಮೈಸೂರು ನಗರವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಸೇರಿಸುವಂತೆ ಸಂಸದ ಪ್ರತಾಪ ಸಿಂಹ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಸಂಸತ್‌ ಅಧಿವೇಶನದ ವೇಳೆ ಮಾತನಾಡಿದ ಅವರು, ಮೈಸೂರು ನಗರ ಪಾಲಿಕೆಯಿಂದ 2011 ರಿಂದ ಆಡಿಟ್‌ ಆಗಿರಲಿಲ್ಲ. ಅಲ್ಲದೆ ಅಂದಿನ ಸರ್ಕಾರವು ಮೈಸೂರು ಹೆಸರನ್ನು ಪುರಸ್ಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯ್ಕೆಯಾದ ಕರ್ನಾಟಕದ 7 ನಗರಗಳ ಪೈಕಿ ಮೈಸೂರಿನ ಹೆಸರು ಕೈಬಿಟ್ಟು ಹೋಗಿದೆ. 2ನೇ ಪಟ್ಟಿಯಲ್ಲಾದರೂ ಮೈಸೂರನ್ನು ಪರಿಗಣಿಸಬೇಕು ಎಂದರು.

ಜು.25 ರಿಂದ ಮೈಸೂರು ಅರಮನೆಯಲ್ಲಿ ಬೆಳಗಲಿವೆ ದೀಪ

ಏಕೆಂದರೆ 1 ಮಿಲಿಯನ್‌ ಜನಸಂಖ್ಯೆಗಿಂತ ಕಡಿಮೆ ಇದೆ. ಅಲ್ಲದೆ ಸ್ವಚ್ಚ ಭಾರತದಲ್ಲಿ ಮೈಸೂರು ನಗರ ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದೆ. ಆದ್ದರಿಂದ 2ನೇ ಪಟ್ಟಿಯಲ್ಲಾದರೂ ಮೈಸೂರು ನಗರವನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.

ಈ ಕುರಿತು ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ಸಿಂಗ್‌ ಪುರಿ, ಮೈಸೂರು ನಗರಕ್ಕೆ ಸ್ಮಾರ್ಟ್‌ ಸಿಟಿ ಯೋಜನೆ ನೀಡಬೇಕು ಎಂಬ ಇಚ್ಛೆ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ ಕೆಲವು ತಾಂತ್ರಿಕ ತೊಂದರೆಗಳಿವೆ. ಒಂದು ನಗರವನ್ನು ತಂತ್ರಜ್ಞಾನ ಬಳಸಿಕೊಂಡು ಸುಸ್ಥಿರವಾಗಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬ ಅನುಭವ ಈ ಯೋಜನೆ ಮೂಲಕ ದೊರಕಿದೆ. ಒಟ್ಟಾರೆ 100 ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ 7 ನಗರ ಕರ್ನಾಟಕದ್ದು. ಇದಕ್ಕಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ. 91ರಷ್ಟುಅನುದಾನ ನೀಡಿದೆ. ಅಂತೆಯೇ ಅಮೃತ್‌ ಯೋಜನೆಯಡಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. 

Follow Us:
Download App:
  • android
  • ios