'ನಮ್ಮ ಕೋರಿಕೆ ಈಡೇರಿದೆ, ನಮಗೆ ಒಳ್ಳೆಯ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ'

  • ದೇವಾಲಯಗಳ ಸಂರಕ್ಷಣಾ ಕಾಯ್ದೆಗೆ ಅನುಮೋದನೆ ನೀಡುವ ಮೂಲಕ ನಮ್ಮ ಕೋರಿಕೆ ಈಡೇರಿದೆ
  • ನಮಗೆ ಒಳ್ಳೆಯ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ
MP Pratap simha praises CM basavaraj Bommai snr

ಮೈಸೂರು (ಸೆ.25):  ದೇವಾಲಯಗಳ (Temple) ಸಂರಕ್ಷಣಾ ಕಾಯ್ದೆಗೆ ಅನುಮೋದನೆ ನೀಡುವ ಮೂಲಕ ನಮ್ಮ ಕೋರಿಕೆ ಈಡೇರಿದೆ, ನಮಗೆ ಒಳ್ಳೆಯ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

 ನಗರದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ತಾಲೂಕು ಹುಚ್ಚಗಣಿಯಲ್ಲಿ ಇತ್ತೀಚೆಗೆ ತೆರವು ಗೊಳಿಸಲಾದ ದೇವಸ್ಥಾನವನ್ನು ಅಲ್ಲಿಂದ ಸ್ವಲ್ಪ ದೂರದಲ್ಲೇ ಮರು ನಿರ್ಮಿಸಲಾಗುವುದು. ದೇಗು ಲಕ್ಕೆ ಅಗತ್ಯವಿರುವ ಐದು ಗುಂಟೆ ಜಮೀನು ನೀಡಲು ದಾನಿಯೊಬ್ಬರು ಮುಂದೆ ಬಂದಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿದೆ ಮತಾಂತರ, ನನ್ನ ತಾಯಿಯನ್ನೂ ಬಿಟ್ಟಿಲ್ಲ! ಸದನದಲ್ಲಿ ಗೂಳಿಹಟ್ಟಿ ಗೋಳು!

 ಇದೆಲ್ಲವೂ ಸಾಧ್ಯವಾಗಿದ್ದು ಗಣಪತಿಯ ಕೃಪೆಯಿಂದ. ಹಾಗಾಗಿ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಶಾಸಕ (MLA) ಗೂಳಿಹಟ್ಟಿ ಶೇಖರ್ ಅವರಂತಹ ಜನಪ್ರತಿನಿಧಿಯೇ ಮತಾಂತರದ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ಅವರ ತಾಯಿಯೇ ಮತಾಂತರಕ್ಕೆ (comversion) ಒಳಗಾಗಿರುವುದಕ್ಕೆ ನೋವು ವ್ಯಕ್ತಪಡಿಸಿದ್ದಾರೆ. 

ನಾನು ಮೊದಲಿಂದಲೂ ಮತಾಂತರದ ವಿರುದ್ದ ಇದ್ದೇನೆ. ಮತಾಂತರ ನಿಷೇಧ ಮಸೂದೆ ತರುವ ಬಗ್ಗೆ ಬಿಷಪ್‌ಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಸೂದೆ ವಿಚಾರದಲ್ಲಿ ಬಾಲ ಸುಟ್ಟ ಬೆಕ್ಕಿನ ರೀತಿ ಯಾಕೆ ಬಿಷಪ್‌ಗಳು ಚಡಪಡಿಸುತ್ತಿದ್ದಾರೆ. ನೀವು ಮತಾಂತರ ಮಾಡದೆ ಇದ್ದರೆ ಮಸೂದೆ ಬಂದರೆ ನಿಮಗೆ ಯಾಕೆ ಭಯ. ಮತಾಂತರ ಮಾಡದೇ ಇದ್ದರೆ ನೀವು ಸುಮ್ಮನೆ ಇರಿ. ಮತಾಂತರ ಮಾಡುವವರಿಗೆ ಮಸೂದೆಯ ಬಿಸಿ ತಟ್ಟುತ್ತದೆ. 

'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'

ಕೇರಿ ಕಾಲೋನಿಗಳಿಗೆ ಹೋಗಿ ಕೆಲವರು ಮತಾಂತರ ಮಾಡುತ್ತಾರೆ ಎಂದು ಅವರು ತಿಳಿಸಿದರು. ಕೇರಿ ಕಾಲೋನಿಗಳಿಗೆ ಹೋಗುವ ಕೆಲವರು ಹೆಲ್ತ್ ಸೆಂಟರ್ ತೆರೆದು ಮತಾಂತರಕ್ಕೆ ಜನರನ್ನು ಸೆಳೆಯುತ್ತಾರೆ. ನಾವು ಹಿಂದೂ ಧರ್ಮದ ಶ್ರೇಷ್ಠತೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಇಸ್ಲಾಂ, ಕ್ರೈಸ್ತರ ಸಂಖ್ಯೆಯ ಹೆಚ್ಚಳಿಕೆಯನ್ನೇ ಶ್ರೇಷ್ಠ ತೆ ಎಂದು ಕೊಂಡಿದ್ದಾರೆ. ಜಿಲ್ಲೆಯ ಹುಣಸೂರು ಭಾಗದಲ್ಲಿ ಮತಾಂತರ ನಡೆಯುತ್ತಿದೆ. ಮೈಸೂರು ಭಾಗದಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮತಾಂತರ ನಡೆಯುತ್ತಿದೆ. ನಮ್ಮ ಧರ್ಮದ ಮಠಾಧೀಶರು ಈ ಬಗ್ಗೆ ಗಮನಹರಿಸಿ ಮತಾಂತರಕ್ಕೆ ಜನರು ಒಳಗಾಗದಂತೆ ತಡೆಯಬೇಕು. 

ಮದರ್ ತೆರೇಸಾ (mother teresa) ಅವರನ್ನು ಸಂತ ಪದವಿಗೆ ಹೋಗುವ ಮೊದಲು ಮ್ಯಾಜಿಕ್ ಮಾಡಲು ಹೇಳಲಾಗಿತ್ತು. ನಮ್ಮಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ನಾವು ಬೆಲೆ ಕೊಡುತ್ತೇವೆ. ಆದರೆ ಮದರ್ ತೆರೇಸಾ ಅವರಿಂದ ಮ್ಯಾಜಿಕ್ ಮಾಡಿ ಸಂತರನ್ನಾಗಿ ಮಾಡಲಾಯಿತು. ಇದು ಮಂದೀನಾ ಮಂಗ್ಯಾ ಮಾಡುವ ತಂತ್ರ. ಈಗಲೂ ಅದನ್ನೇ ಮತಾಂತರಕ್ಕೆ ಬಳಸಲಾಗುತ್ತಿದೆ. ನಾವು ಧರ್ಮದ ಶ್ರೇಷ್ಠತೆಯನ್ನು ನಂಬಿದವರು. ನಾವು ಆಕ್ರಮಣ ಪ್ರಹಾರ ಮಾಡುವುದಿಲ್ಲ. ಆದರೆ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮಗೆ ಇದೆ. ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟ ಮಾಡಬೇಕು. ಚಾಮುಂಡಿ ಬೆಟ್ಟದ (chamundi Hill) ತಪ್ಪಲಿನಲ್ಲಿ ಮತಾಂತರ ನಡೆದರೂ ನಾವು ಬಿಡಲ್ಲ. ಎಲ್ಲೆ ಮತಾಂತರ ನಡೆದರು ಅದನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. 

ಕಾಳ ಸಂತೆಯಲ್ಲಿ ಕಳ್ಳತನದ ವಸ್ತುಗಳು ಸೇಲ್ ಆಗುತ್ತದೆ. ನೀವು ಯಾಕೆ ಕೇರಿಗಳಿಗೆ ಹೋಗಿ ಕೊಡುತ್ತೀರಾ? ಜನರನ್ನು ಯಾಕೆ ಮರಳು ಮಾಡುತ್ತೀರಾ. ನೀವು ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ. ಚಿಕಿತ್ಸೆ ಕೊಡಬೇಕು ಅಂದ್ರೆ ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಅಂತಾರೆ. ಬಳಿಕ ಚಿಕಿತ್ಸೆ ಕೊಟ್ಟು ಏಸು ಸ್ವಾಮಿಯೇ ಕಾಪಾಡಿದ್ದು ಅಂತೀರಾ. ಹೀಗೆ ಮರಳು ಮಾಡಿ ಮತಾಂತರ ಮಾಡುವುದು ನಡೆದಿದೆ. ಇದು ಸರಿಯಾದ ಕ್ರಮವಲ್ಲ, ಇದೆಲ್ಲವನ್ನು ನಾವು ಕೂಡ ನೋಡಿದ್ದೇವೆ ಎಂದು ಅವರು ತಿಳಿಸಿದರು. 

ಮೈಸೂರಿನಲ್ಲಿ ವಿಷ್ಣುವರ್ಧನ್ ಪ್ರತಿಮೆ ನಿರ್ಮಿಸುವಂತೆ ವಿಷ್ಣು ಸೇನಾ ಸಮಿತಿ ಪದಾಧಿಕಾ ರಿಗಳು ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಪ್ರತಾಪ ಸಿಂಹ, ಮೈಸೂರು ಅಂದರೆ ವಿಷ್ಣವರ್ಧನ್ ಹಾಗೂ ಅಂಬರೀಶ್ ನೆನಪಾಗುತ್ತಾರೆ. ರಾಜ್‌ಕು ಮಾರ್ ಹಾಗೂ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿದ್ದಂತೆ. ನಾನೂ ಕೂಡಾ ಡಾ. ವಿಷ್ಣುವರ್ಧನ್ ಅಭಿಮಾನಿ. ಮೈಸೂರಿನಲ್ಲಿ ಡಾ. ರಾಜಕುಮಾರ್ ಪಾರ್ಕ್ ಇದೆ, ಪ್ರತಿಮೆ ಇದೆ. ಅದೇ ರೀತಿ ಅರಮನೆ ಮುಂದಿರುವ ಪಾರ್ಕ್‌ಗೆ ವಿಷ್ಣುವರ್ಧನ್ ಹೆಸರು ನಾಮಕರಣ ಮಾಡಬೇಕು. ಅವರ ಜನ್ಮ ದಿನಗಳಂದು ಪೂಜೆ ಮಾಡಿಕೊಳ್ಳಲು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಮೇಯರ್ ಹಾಗೂ ನಗರಪಾಲಿಕೆ ಸದಸ್ಯ ರಲ್ಲಿ ಮನವಿ ಮಾಡುವುದಾಗಿ ಅವರು ಹೇಳಿದರು.

Latest Videos
Follow Us:
Download App:
  • android
  • ios