Karwar: ಇಲಿ ಬಿದ್ದ ಸಾಂಬಾರನ್ನೇ ಬಡಿಸಿದ ಅಡುಗೆ ಸಹಾಯಕರು, ಶಾಲಾ ಬಿಸಿಯೂಟ ತಿಂದು ವಿದ್ಯಾರ್ಥಿಗಳು ಅಸ್ವಸ್ಥ
ಸಚಿವ ಶಿವರಾಮ್ ಹೆಬ್ಬಾರ್ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಶಾಲೆಯಲ್ಲಿ ಇಲಿ ಬಿದ್ದಿದ್ದ ಸಾಂಬಾರನ್ನೇ ಮಕ್ಕಳಿಗೆ ಬಡಿಸಿದ ಘಟನೆ ಬೆಳಕಿಗೆ ಬಂದಿದೆ. ಒಟ್ಟು 6 ಮಂದಿ ಅಡುಗೆ ಸಹಾಯಕರು ಈ ಕೃತ್ಯ ಎಸಗಿದ್ದು, ಶಾಲಾ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ.
ಕಾರವಾರ (ಡಿ.27): ಸಚಿವ ಶಿವರಾಮ್ ಹೆಬ್ಬಾರ್ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಶಾಲೆಯಲ್ಲಿ ಇಲಿ ಬಿದ್ದಿದ್ದ ಸಾಂಬಾರನ್ನೇ ಮಕ್ಕಳಿಗೆ ಬಡಿಸಿದ ಘಟನೆ ಬೆಳಕಿಗೆ ಬಂದಿದೆ. ಒಟ್ಟು 6 ಮಂದಿ ಅಡುಗೆ ಸಹಾಯಕರು ಈ ಕೃತ್ಯ ಎಸಗಿದ್ದು, ಶಾಲಾ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ. ಮುಂಡಗೋಡ ಪಟ್ಟಣದ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದು, ಶಾಲೆಯ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು, ಅಡುಗೆ ಸಹಾಯಕರನ್ನು ಮಕ್ಕಳ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಇಒ, ಅಕ್ಷರ ದಾಸೋಹ ಸಹಾಯಕ ಅಧಿಕಾರಿ, ಮುಂಡಗೋಡ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಿದ್ದ ಸಭೆಯಲ್ಲಿ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ಬಿಸಿಯೂಟ ಊಟ ತಯಾರಿಕೆ ವೇಳೆ ಸಾಂಬಾರಿಗೆ ಇಲಿ ಬಿದ್ದಿತ್ತು. ಸಾಂಬಾರಿಗೆ ಬಿದ್ದ ಇಲಿಯನ್ನು ವಿದ್ಯಾರ್ಥಿಗಳಿಂದ ತೆಗೆಯಿಸಿ ಅದೇ ಸಾಂಬಾರನ್ನು ಮಕ್ಕಳಿಗೆ ಅಡುಗೆ ಸಹಾಯಕರು ಬಡಿಸಿದ್ದಾರೆ. ಮಾತ್ರವಲ್ಲ ಯಾರಲ್ಲೂ ಹೇಳಬಾರದು ಎಂದು ವಿದ್ಯಾರ್ಥಿಗಳಲ್ಲಿ ಅಡುಗೆ ಸಹಾಯಕರು ಸೂಚಿಸಿದ್ದರು.
ಊಟದಲ್ಲಿ ಕೂದಲು ಸಿಕ್ಕಿತ್ತೆಂದು ಪತ್ನಿಯನ್ನು ಥಳಿಸಿ ತಲೆಬೋಳಿಸಿದ ಸೈಕೋ ಪತಿ!
ಇಲಿ ಬಿದ್ದಿದ್ದ ಸಾಂಬಾರು ಸೇವಿಸಿದ ಪರಿಣಾಮ ರಾತ್ರಿ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥರಾದರು. ಈ ವೇಳೆ ಶಾಲೆಯಲ್ಲಿ ಇಲಿ ಬಿದ್ದಿದ್ದ ಸಾಂಬಾರನ್ನೇ ಬಡಿಸಲಾಗಿತ್ತು ಎಂದು ವಿದ್ಯಾರ್ಥಿಗಳು ಪೋಷಕರಲ್ಲಿ ದೂರಿದ್ದರು. ಆಕ್ರೋಶಗೊಂಡ ಪೋಷಕರಿಂದ ಶಾಲಾ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ಅಡುಗೆ ಸಹಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PM-POSHAN Scheme: ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ
ಅಡುಗೆ ಸಹಾಯಕರು ಕ್ಷಮೆ ಕೇಳುವ ಮೂಲಕ ಪ್ರಕರಣ ಮುಚ್ಚುವಂತೆ ಶಾಲಾ ಆಡಳಿತ ವಿಭಾಗದಿಂದ ಕೋರಿಕೆ ಇತ್ತು. ಆದರೆ, ಅಡುಗೆ ಸಹಾಯಕರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಕೊನೆಗೆ ಪೋಷಕರ ಒತ್ತಾಯದ ಮೇರೆಗೆ ಅಡುಗೆ ಸಹಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಶಾಲಾ ಎಸ್‌ಡಿಎಂಸಿ ಭರವಸೆ ನೀಡಿದೆ.
ಬಿಸಿಯೂಟ ನೌಕರರಿಂದ ನಾಳೆ ಬೆಳಗಾವಿ ಚಲೋ
ಚಿಕ್ಕಬಳ್ಳಾಪುರ: ಬಿಸಿಯೂಟ ನೌಕರರಿಗೂ ಕೂಡ ಇಡಿಗಂಟು ನೀಡಬೇಕು, ಬರುವ ಬಜೆಟ್‌ನಲ್ಲಿ ನೌಕರರಿಗೆ ಕನಿಷ್ಠ 1000 ಸಾವಿರ ರು, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ. 28ರಂದು ಬುಧವಾರ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾಧ್ಯಕ್ಷೆ ಲಕ್ಷ್ಮೇದೇವಮ್ಮ, ನಿವೃತ್ತಿ ಹೊಂದಿದ ಹಾಗೂ ಅಪಘಾತದಲ್ಲಿ ಮಡಿದ ಕುಟುಂಬದವರಿಗೆ ಕೆಲಸ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು. ಬಿಸಿಯೂಟ ಕಾರ್ಯಕರ್ತೆಯರಿಗೆ ರಜೆ ವೇತನ ನೀಡಬೇಕು, ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಕಾಯಂಗೊಳಿಸಬೇಕು, ಖಾಲಿ ಇರುವ ಮುಖ್ಯ ಅಡುಗೆ ಹಾಗೂ ಹಾಗೂ ಸಹಾಯಕಿಯರ ಹುದ್ದೆಗಳನ್ನು ತುಂಬಬೇಕು, ಸಕಾಲದಲ್ಲಿ ವೇತನ ನೀಡಬೇಕು, ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ನೀಡಬೇಕು, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಕ್ಕಿ, ತೊಗರಿಯನ್ನು ಸಕಾಲದಲ್ಲಿ ಕೇಂದ್ರಗಳಿಗೆ ಪೂರೈಸಬೇಕು ಎಂಬುವರು ಸೇರಿದಂತೆ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.