ಊಟದಲ್ಲಿ ಕೂದಲು ಸಿಕ್ಕಿತ್ತೆಂದು ಪತ್ನಿಯನ್ನು ಥಳಿಸಿ ತಲೆಬೋಳಿಸಿದ ಸೈಕೋ ಪತಿ!
ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ಪತ್ನಿಯನ್ನು ಮನಬಂದಂತೆ ಥಳಿಸಿ ತಲೆಬೋಳಿಸಿ ಸೈಕೋ ಪತಿಯೊಬ್ಬ ಮೃಗೀಯವಾಗಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಪಿಲಿಬಿತ್‍ನಲ್ಲಿ ನಡೆದಿದೆ.
ಉತ್ತರ ಪ್ರದೇಶ (ಡಿ.11): ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ಪತ್ನಿಯನ್ನು ಮನಬಂದಂತೆ ಥಳಿಸಿ ತಲೆಬೋಳಿಸಿ ಸೈಕೋ ಪತಿಯೊಬ್ಬ ಮೃಗೀಯವಾಗಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಪಿಲಿಬಿತ್‍ನಲ್ಲಿ ನಡೆದಿದೆ. ಸಣ್ಣ- ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದ ಗಂಡ ತನ್ನ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಪತಿಯ ಕಾಟಕ್ಕೆ ಬೇಸತ್ತ ಮಹಿಳೆ ಪಿಲಿಬಿತ್‍ನ ಗರ್ಜೋಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನನ್ನ ಪತಿ ನನಗೆ ನಿರಂತರ ಹಿಂಸೆ ಕೊಡುತ್ತಿದ್ದು, ಕೈಕಾಲು ಕಟ್ಟಿ ಹಾಕಿ ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾನೆ. ಪತಿ ಊಟ ಮಾಡುತ್ತಿದ್ದಾಗ ಆಹಾರದಲ್ಲಿ ಕೂದಲು ಸಿಕ್ಕಿದ್ದು, ಇದರಿಂದ ಅತೀವ ಪತಿ ಕೋಪಗೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಹೀಗಿದ್ದರೂ ಅತ್ತೆ-ಮಾವ ನನ್ನ ಸಹಾಯಕ್ಕೆ ಬರದೇ ಆತನಿಗೆ ಬೆಂಬಲಿಸಿದ್ದಾರೆ. ಮಾತ್ರವಲ್ಲ ತನ್ನ ಕೈ ಕಾಲುಗಳನ್ನು ಕಟ್ಟಿ ಬಲವಂತವಾಗಿ ಸಂಭೋಗಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ. ಘಟನೆಯ ಬಗ್ಗೆ ಪೋಷಕರಿಗೆ ದೂರವಾಣಿ ಮೂಲಕ ತಿಳಿಸಿದ್ದೆನಾದರೂ, ಮನೆಗೆ ಬಂದಾಗ ಥಳಿಸಲು ಪ್ರಯತ್ನಿಸಲಾಯಿತು. ಪತಿ ವರದಕ್ಷಿಣೆಗೆ ಒತ್ತಾಯಿಸಿ ಥಳಿಸುತ್ತಿರುವುದಾಗಿಯೂ ಮಹಿಳೆ ಹೇಳಿದ್ದಾಳೆ.
ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ, ಅತ್ತೆ ಮತ್ತು ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ದೂರುದಾರ ಪತ್ನಿ ತನ್ನ ತವರು ಮನೆಗೆ ಹೋಗಿದ್ದಾಳೆ.
ಗೆಳೆಯರೊಟ್ಟಿಗೆ ಪತ್ನಿ ಸೆಕ್ಸ್ ವಿಡಿಯೋ ಮಾಡಿ ಪತಿ ವಿಕೃತಿ:
ಬೆಂಗಳೂರು: ತನ್ನ ಗೆಳೆಯರೊಟ್ಟಿಗೆ ಬಲವಂತವಾಗಿ ಲೈಂಗಿಕೆ ಕ್ರಿಯೆ ನಡೆಸುವಂತೆ ಪ್ರಚೋದಿಸಿ ಬಳಿಕ ಆ ದೃಶ್ಯವನ್ನು ವಿಡಿಯೋ ಮಾಡಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ವಿಕೃತ ಮನಸ್ಸಿನ ಸಾಫ್‌್ಟಎಂಜಿನಿಯರ್‌ವೊಬ್ಬನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ 36 ವರ್ಷದ ವಯಸ್ಸಿನ ಸಾಫ್‌್ಟವೇರ್ ಎಂಜಿನಿಯರ್ ಜೋನ್ಸ್ (ಹೆಸರು ಬದಲಾಯಿಸಲಾಗಿದೆ) ಬಂಧಿತನಾಗಿದ್ದು, ಈತನ ವಿರುದ್ಧ ಪತ್ನಿ ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಹಾಗೂ ಮಾದಕ ವಸ್ತು ನಿಗ್ರಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru: ರೌಡಿ ಮೇಲೆ ಗುಂಡಿನ ದಾಳಿ: ಮೂವರ ಬಂಧನ
ಸೆಕ್ಸ್ ವಿಡಿಯೋ ಮುಂದಿಟ್ಟು ಕಿರುಕುಳ
12 ವರ್ಷಗಳ ಹಿಂದೆ ಪ್ರೀತಿಸಿ ಕನ್ನಡಿಗ ಯುವತಿಯನ್ನು ಕೇರಳ ಮೂಲದ ಜೋನ್ಸ್ ವಿವಾಹವಾಗಿದ್ದು, ಈ ದಂಪತಿಗೆ ಓರ್ವ ಮಗನಿದ್ದಾನೆ. ಸಾಫ್‌್ಟವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ದಂಪತಿ, ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಮದ್ಯ ಹಾಗೂ ಮಾದಕ ವ್ಯಸನಿಯಾದ ಜೋನ್ಸ್, ಮನೆಯಲ್ಲಿ ವಿನಾಕರಣ ಪತ್ನಿ ಜತೆ ಜಗಳ ಮಾಡುತ್ತಿದ್ದ. ಲೈಂಗಿಕವಾಗಿ ಆಕೆಯನ್ನು ಶೋಷಿಸಲಾರಂಭಿಸಿದ. ತನ್ನ ಪತ್ನಿಗೂ ಪರಿಚಯವಿದ್ದ ಇಬ್ಬರು ಗೆಳೆಯರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಪೀಡಿಸಿದ್ದ ಆರೋಪಿ, ಬಳಿಕ ಗೆಳೆಯರೊಟ್ಟಿಗೆ ಪತ್ನಿ ಸೆಕ್ಸ್ ವಿಡಿಯೋ ಮಾಡಿಕೊಂಡು ಕಿರುಕುಳ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸಿದಾಕೆಗೆ ಮದುವೆ : ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ 17ರ ತರುಣ
ಈ ರೀತಿಯ ಲೈಂಗಿಕ ದೌರ್ಜನ್ಯವೂ ಮೂರು ವರ್ಷಗಳಿಂದ ನಿರಂತರವಾಗಿ ನಡೆದಿದೆ. ಇದರಿಂದ ಬೇಸತ್ತ ಸಂತ್ರಸ್ತೆ, ಕೊನೆಗೆ ತನ್ನ ತಾಯಿ ಹಾಗೂ ಸೋದರಿ ನೆರವು ಪಡೆದು ಸಂಪಿಗೆಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತನ್ನ ಗೆಳೆಯರ ಜತೆ ಪತ್ನಿಗೆ ಅನೈತಿಕ ಸಂಬಂಧವಿತ್ತು. ನಾನೇನು ಸೆಕ್ಸ್‌ಗೆ ಆಕೆಯನ್ನು ಬಲವಂತವಾಗಿ ದೂಡಿಲ್ಲ ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.