Asianet Suvarna News Asianet Suvarna News

ಬಾಗಲಕೋಟೆ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ..!

ತಾಯಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದು, ಒಂದು ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎನ್ನಲಾಗ್ತಿದೆ. ತ್ರಿವಳಿ ಮಕ್ಕಳು ಜನನದಿಂದ ನಿಂಗಮ್ಮ-ಚನ್ನಬಸವ ದಂಪತಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. 

Mother who gave Birth to Triplets in Bagalkot grg
Author
First Published Dec 1, 2023, 10:00 PM IST

ಬಾಗಲಕೋಟೆ(ಡಿ.01): ತಾಯಿಯೊಬ್ಬಳು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ನಿಂಗಮ್ಮ ಎಂಬಾಕೆಯೇ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ‌ ನೀಡಿದ ಮಹಾ ತಾಯಿಯಾಗಿದ್ದಾಳೆ. 

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ನವಲಿ ಗ್ರಾಮದ ನಿಂಗಮ್ಮ ಅವರಿಗೆ ನಿನ್ನೆ ರಾತ್ರಿ ಇಳಕಲ್ ನಗರದ ಎಸ್.ಎಸ್. ಕಡಪಟ್ಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು(ಶುಕ್ರವಾರ) ಬೆಳಗಿನ ಜಾವ ವೈದ್ಯರು ಸಹಜ ಹೆರಿಗೆ ಮಾಡಿಸಿಕೊಂಡಿದ್ದಾರೆ. 

Shivamogga: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಭದ್ರಾವತಿಯ ಮಹಾತಾಯಿ!

ತಾಯಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದು, ಒಂದು ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎನ್ನಲಾಗ್ತಿದೆ. ತ್ರಿವಳಿ ಮಕ್ಕಳು ಜನನದಿಂದ ನಿಂಗಮ್ಮ-ಚನ್ನಬಸವ ದಂಪತಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. 

Follow Us:
Download App:
  • android
  • ios