Asianet Suvarna News Asianet Suvarna News

ಹಾಸನ: 33 ವರ್ಷದ ಮಗಳಿಗೆ ಮೆದುಳು ಜ್ವರ ಚಿಕಿತ್ಸೆಗಾಗಿ ನೆರವು ಕೋರಿದ ತಾಯಿ

ಈಗಾಗಲೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು ಯಾವುದೇ ಪ್ರಯೋಜನ ಆಗಿಲ್ಲ. ರಕ್ತ ಕಡಿಮೆ ಆಗಿ ದೇಹದ ಕೆಲವೆಡೆ ಮೂಳೆಗಳು ಮುರಿದಿದೆ. ಎರಡು ಹೆಣ್ಣು ಮಕ್ಕಳಲ್ಲಿ ಎರಡನೇ ಮಗಳಾದ ಸಂಗೀತ ನಡೆದಾಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ತಾನು ಸಾಲ ಮಾಡಿದ್ದೇವೆ. ಮಗಳ ಪರಿಸ್ಥಿತಿ ಕಂಡು ಅನೇಕ ಬಾರಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿ ನಂತರ ಇನ್ನೊಬ್ಬ ಮಗಳಿಗೆ ಬಾರ ಮಾಡಿ ಹೋಗುವುದು ಬೇಡ ಎಂದು ಬದುಕಿದ್ದೇವೆ ಎಂದರು

Mother Sought help to treat her 33 year-old daughter for Brain Fever in Hassan grg
Author
First Published Nov 18, 2023, 10:32 PM IST

ಹಾಸನ(ನ.18):  ಮೆದುಳು ಜ್ವರದಿಂದ ನರಳುತ್ತಿರುವ 33 ವರ್ಷದ ಮಗಳಿಗೆ ಚಿಕಿತ್ಸೆ ಕೊಡಿಸಲು ಉದಾರ ಮನಸ್ಸುಳ್ಳವರು ಧನ ಸಹಾಯ ನೀಡುವಂತೆ ತಾಯಿ ಪ್ರೇಮ ಅವರು ಮನವಿ ಮಾಡಿದರು

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ವಲ್ಲಬಾಯಿ ರಸ್ತೆ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಮ್ಮ ಮಗಳು ೩೩ ವರ್ಷದ ಸಂಗೀತ ಮೆದುಳು ಜ್ವರದಿಂದ ಬಳಲುತ್ತಿದ್ದು, ಈಕೆಗೆ ೮ ತಿಂಗಳ ಮಗು ಇದೆ. ೨೦ ವರ್ಷಗಳ ಕಾಲ ಚಿಕಿತ್ಸೆ ಕೊಡಿಸಲಾಗಿದ್ದು, ಈಗ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ತನಗೆ ಉಳಿದುಕೊಳ್ಳಲು ಸ್ವಂತ ಮನೆಯೂ ಇಲ್ಲದ ಬಡ ಕುಟುಂಬ. ಕಳೆದ ಆರು ತಿಂಗಳಿನಿಂದಲೂ ಬಾಡಿಗೆ ಕಟ್ಟಿರುವುದಿಲ್ಲ. ಮಗಳ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಅವಶ್ಯಕತೆ ಹೆಚ್ಚಿದೆ. ಮಗಳಿಗೆ ರಕ್ತವೂ ಕಡಿಮೆ ಇರುವ ಕಾರಣ ಮಲಗಿದಲ್ಲಿಯೆ ಊಟ, ಉಪಚಾರ ಮಾಡಿಸಬೇಕಿದೆ. ಕೈಕಾಲು ಕೂಡ ಸ್ವಾಧೀನ ಕಳೆದುಕೊಂಡಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ರಿಯಲ್ ಗಂಡ, ರೀಲ್ ಲೈಫ್ ಫ್ಯಾಮಿಲಿ ಜೊತೆ ಸತ್ಯ ಗೌತಮಿ ಜಾಧವ್ ಮೋಜು ಮಸ್ತಿ

ಈಗಾಗಲೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು ಯಾವುದೇ ಪ್ರಯೋಜನ ಆಗಿಲ್ಲ. ರಕ್ತ ಕಡಿಮೆ ಆಗಿ ದೇಹದ ಕೆಲವೆಡೆ ಮೂಳೆಗಳು ಮುರಿದಿದೆ. ಎರಡು ಹೆಣ್ಣು ಮಕ್ಕಳಲ್ಲಿ ಎರಡನೇ ಮಗಳಾದ ಸಂಗೀತ ನಡೆದಾಡಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ತಾನು ಸಾಲ ಮಾಡಿದ್ದೇವೆ. ಮಗಳ ಪರಿಸ್ಥಿತಿ ಕಂಡು ಅನೇಕ ಬಾರಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿ ನಂತರ ಇನ್ನೊಬ್ಬ ಮಗಳಿಗೆ ಬಾರ ಮಾಡಿ ಹೋಗುವುದು ಬೇಡ ಎಂದು ಬದುಕಿದ್ದೇವೆ ಎಂದರು. 

ಮೆದುಳು ಜ್ವರದಿಂದ ನರಳುತ್ತಿರುವ ಸಂಗೀತಗೆ ಆರ್ಥಿಕ ಸಹಾಯ ಮಾಡುವವರು ತಾಯಿ ಪ್ರೇಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಸಂಖ್ಯೆ ೨೫೦೧೧೦೮೦೦೯೫೩೨, ಐ.ಎಫ್.ಎಸ್.ಸಿ. ಕೋಡ್: ಸಿಎನ್‌ಆರ್‌ಬಿ0002501, ಬ್ರಾಂಚ್ ಬಿ.ಎಂ. ರೋಡ್ ಹಾಸನ ಕೆನರಾ ಬ್ಯಾಂಕ್ ಇಲ್ಲಿಗೆ ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೇಮ ಅವರ ಮೊಬೈಲ್ ಸಂಖ್ಯೆ: ೯೬೩೨೯೯೮೮೯೨ ಸಂಪರ್ಕಿಸಬಹುದಾಗಿದೆ.

Follow Us:
Download App:
  • android
  • ios