Asianet Suvarna News Asianet Suvarna News

Hosapete: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

*  ಉಮಾ ಎಂಬುವರೇ ಮೂವರು ಮಕ್ಕಳಿಗೆ ಜನ್ಮ ನೀಡಿದ ತಾಯಿ
*  ಹೊಸಪೇಟೆ ನಗರದ ಅಂಜುಮನ್‌ ಆಸ್ಪತ್ರೆಯಲ್ಲಿ ಹೆರಿಗೆ
*  ಮಕ್ಕಳ ತೂಕ ಕಡಿಮೆ ಇರುವ ಹಿನ್ನಲೆಯಲ್ಲಿ ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ 
 

Mother Gave Birth to Triple Children in Hosapete grg
Author
Bengaluru, First Published Dec 11, 2021, 2:22 PM IST
  • Facebook
  • Twitter
  • Whatsapp

ಹೊಸಪೇಟೆ(ಡಿ.11): ನಗರದ(Hosapete) ಅಂಜುಮನ್‌ ಆಸ್ಪತ್ರೆಯಲ್ಲಿ ತಾಯಿಯೊಬ್ಬರು(Mother) ತ್ರಿವಳಿ ಹೆಣ್ಣು ಮಕ್ಕಳಿಗೆ ಶುಕ್ರವಾರ ಜನ್ಮ ನೀಡಿದ್ದಾರೆ. ಬಳ್ಳಾರಿ(Ballari) ಜಿಲ್ಲೆ ಸಂಡೂರು(Sandur) ತಾಲೂಕಿನ ವಿ. ನಾಗಲಾಪುರ ನಿವಾಸಿ ಪ್ರಕಾಶ್ ಎಂಬುವರ ಪತ್ನಿ ಉಮಾ ಮೂವರು ಮಕ್ಕಳಿಗೆ ಜನ್ಮ ನೀಡಿದ ತಾಯಿ. ತಾಯಿ ಮಕ್ಕಳು(Babies) ಆರೋಗ್ಯವಾಗಿದ್ದು, ಮಕ್ಕಳ ತೂಕ ಕಡಿಮೆ ಇರುವ ಹಿನ್ನಲೆಯಲ್ಲಿ ಬಳ್ಳಾರಿ ವಿಮ್ಸ್(VIMS) ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಸ್ಥಳೀಯ ಅಂಜುಮನ್‌ ಆಸ್ಪತ್ರೆಯಲ್ಲಿ ತಾಯಿ ಉಮಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರಾದ ಡಾ. ಅತಿಕಾಹಿನ, ಡಾ. ಸುರೇಖಾ ಹಾಗೂ ಡಾ. ಬಾಲಚಂದ್ರ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನಲ್ಲಿ ಬಂದು ಬಾಣಂತಿ ಹಕ್ಕು ಚಲಾವಣೆ

ಮಾನ್ವಿ: ರಾಯಚೂರು-ಕೊಪ್ಪಳ(Raichur) ಜಿಲ್ಲೆಯ ಶುಕ್ರವಾರ ನಡೆದ ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಪಟ್ಟಣದ ಖಾಸಗಿ ಆಸ್ಪತ್ರೆಯಿಂದ ಹೆರಿಗೆ(Delivery) ಆದ 3 ದಿನದಲ್ಲಿ ಗ್ರಾಪಂ ಸದಸ್ಯೆ ಸರಸ್ವತಿ ರಮೇಶ ಮತದಾನ(Vote) ಕೇಂದ್ರಕ್ಕೆ ಬಂದು ಹಕ್ಕು ಚಲಾಯಿಸಿದ್ದಾಳೆ.

Infosys Foundation; ನನಗೆ ಹೆರಿಗೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲೇ, ಇಂಥ ಕೆಲಸದಿಂದ ತೃಪ್ತಿ ಇದೆ

ನೀರಮಾನ್ವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗೋವಿನದೊಡ್ಡಿ ಗ್ರಾಮದ ವಾರ್ಡ್‌ ನಂ. 8 ಸದಸ್ಯೆ ಸರಸ್ವತಿ ರಮೇಶ ಕಳೆದ 3 ದಿನಗಳ ಹಿಂದೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಮತದಾನ ಹಕ್ಕು ಇರುವ ಗ್ರಾಪಂ ಸದಸ್ಯೆ ಆ್ಯಂಬುಲೆನ್ಸ್‌ನಲ್ಲಿ(Ambulance) ನೀರಮಾನ್ವಿ ಗ್ರಾಪಂ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದದ್ದರಿಂದ ತಾಲೂಕಿನಲ್ಲಿ ಶೇ. 100 ರಷ್ಟು ಮತದಾನವಾಗಿದೆ.

ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಅ.15 ರಂದು ನಡೆದಿತ್ತು. 

ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು(Female Child)ಅಂತ ತೋರಿಸಿ ಗಂಡು ಮಗು(Male Child) ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಉಡುಪಿ(Udupi) ಜಿಲ್ಲೆಯ ಕುಂದಾಪುರ(Kundapur) ತಾಲೂಕಿನ ಕೋಟೇಶ್ವರ ಮೂಲದ ಮುಸ್ತಫಾ ಎಂಬವರ ಪತ್ನಿ ಅಮ್ರೀನಾ ಎಂಬುವರು ಹೆರಿಗೆಗೆಂದು(Delivery) ಸೆ.27ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 

ಅದೇ ದಿನ ಹೆರಿಗೆಯಾಗಿದ್ದು ಹೆಣ್ಣುಮಗು ಜನಿಸಿದ ಅಂತ ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಮಗುವಿಗೆ ತೀವ್ರ ಅನಾರೋಗ್ಯ ಇದ್ದ ಕಾರಣ ಎನ್ಐಸಿಯುಗೆ ದಾಖಲು ಮಾಡಲಾಗಿತ್ತು. 
ಎಲ್ಲ ದಾಖಲೆಗಳಲ್ಲೂ ಹೆಣ್ಣು ಮಗು ಎಂದೇ ಆಸ್ಪತ್ರೆ ಸಿಬ್ಬಂದಿ ಉಲ್ಲೇಖಿಸಿದ್ದರು. ಆದರೆ. ಅ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್(Discharge) ಆಗಿ ಮನೆಗೆ ಹೋದ ಬಳಿಕ ಗಂಡು ಮಗು ಕೊಟ್ಟಿರುವುದು ಬೆಳಕಿಗೆ ಬಂದಿದೆ.  ಆಸ್ಪತ್ರೆ ದಾಖಲೆಗಳಲ್ಲೇ ಹೆಣ್ಣು ಮಗು ಅಂತ ಇದ್ದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಗಂಡು ಮಗು ಕೊಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಪೊಲೀಸ್(Police) ಠಾಣೆಯಲ್ಲಿ ದೂರು ನೀಡಲಾಗಿತ್ತು. 

ಆಸ್ಪತ್ರೆಯಿಂದ ಅಚಾತುರ್ಯ : ದೂರು ದಾಖಲು

108 ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಹಾವೇರಿ ತಾಲೂಕಿನ ಮರೋಳ ಗ್ರಾಮದ ಮಹಿಳೆಯೊಬ್ಬರು 108  ಅಂಬ್ಯುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಆ.05 ರಂದು ನಡೆದಿತ್ತು.

ಮಮತಾ ಹರಿಜನ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣಕ್ಕೆ 108 ಅಂಬ್ಯುಲೆನಸ್ಗೆ ಕರೆ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿದ 108 ಅಂಬುಲೆನ್ಸ್ ಸಿಬ್ಬಂದಿಗಳಾದ  EMT ನಾಮದೇವ, ಪೈಲೆಟ್ ಬಸುರಾಜ್ ಗೊರವರ್ ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯತ್ತಿದ್ದರು. 

ಈ ವೇಳೆ ಮಾರ್ಗ ಮಧ್ಯೆಯೇ ತಾಯಿಯು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂಬ್ಯುಲೆನ್ಸ್ ಸಿಬ್ಬಂದಿಗಳು ಸಮಯ ಪ್ರಜ್ಞೆ ಮೆರೆದು ಸುರಕ್ಷಿತ ಹೆರಿಗೆ ಮಾಡಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದರು. ಸದ್ಯ ಇಬ್ಬರನ್ನೂ ಗುತ್ತಲ ಆರೋಗ್ಯ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ.
 

Follow Us:
Download App:
  • android
  • ios