ಬಾಗಲಕೋಟೆ: ಹುನ್ನೂರ ಚೆಕ್‍ಪೋಸ್ಟನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 2.10 ಕೋಟಿ ರೂ. ಜಪ್ತಿ!

ಬಾಗಲಕೋಟೆಯ ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್‍ಪೋಸ್ಟ್ ನಲ್ಲಿ ಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 2.10 ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ

more than Rs 2 crore cash  seized in Bagalkote gow

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಏ.10): ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್‍ಪೋಸ್ಟ್ ನಲ್ಲಿ ಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 2.10 ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ಮಾಹಿತಿ ನೀಡಿದ್ದಾರೆ. ಜಮಖಂಡಿಯ ಹುನ್ನೂರು ಚೆಕ್ ಪೋಸ್ಟನಲ್ಲಿ ಕಾರ್ಯನಿರತ ಸ್ಟಾಟಿಸ್ಟಿಕಲ್ ಸರ್ವೆನೆಸ್ಟ್ ತಂಡದ ಸದಸ್ಯರು ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಅನುಮಾನಾಸ್ಪದ ಒಂದು ವಾಹನವನ್ನು ತಡೆದು ನಿಲ್ಲಿಸಿ ತಪಾಸನೆಗೆ ಒಳಪಡಿಸಿದಾಗ ದಾಖಲೆ ಇಲ್ಲದ ಅಂದಾಜು 2.10 ಕೋಟಿ ರೂ.ಗಳ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ಸೌಹಾರ್ದ ಬ್ಯಾಂಕಿಗೆ ಸಂಬಂಧಿಸಿದವರಾಗಿ ತಿಳಿಸಿದ್ದು, ಒದಗಿಸಿರುವ ದಾಖಲಾತಿಗಳು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ದಾಖಲೆ ಒದಗಿಸಲು ಹೆಚ್ಚಿನ ಅವಕಾಶವನ್ನು ನೀಡಿ, ಸದರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಚುನಾವಣಾಧಿಕಾರಿಗಳ ಕಚೇರಿಯಿಂದ ಜಮಖಂಡಿಯ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗಿದೆ. ಪಂಚನಾಮೆ ಸಹಿತ ಜಿಲ್ಲಾಮಟ್ಟದ ಹಣ ಮುಟ್ಟುಗೋಲು ಪರಿಹಾರ ಸಮಿತಿಗೆ ವರದಿ ಸಲ್ಲಿಸಲಾಗಿದ್ದು,  ಸದರಿ ಸಮಿತಿಯು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.

ಚೆಕ್ ಪೋಸ್ಟ್‌ ನಲ್ಲಿ ದೊರೆತಿರುವ ಹಣದ ಮಾಲಿಕರು ಒಂದು ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್‍ಗೆ ಸಂಬಂಧಿಸಿದವರಾಗಿದ್ದು, ಅವರು ಹಿಪ್ಪರಗಿ ಸತ್ತಿ ಅಥಣಿ ಬನಹಟ್ಟಿ ರಬಕವಿ ಬೇರೆ ಬೇರೆ ಶಾಖೆಗಳಿಗೆ ಹಣ ರವಾನಿಸುತಿರುವುದಾಗಿ ಮೌಖಿಕವಾಗಿ ಮಾಹಿತಿ ನೀಡಿರುತ್ತಾರೆ.

ಬಿಜೆಪಿ ಪಟ್ಟಿ ರಿಲೀಸ್ ಮತ್ತೆ ಮುಂದಕ್ಕೆ! ಕೇಸರಿ ಕಲಿಗಳ ಆಯ್ಕೆ ವಿಳಂಬವಾಗುತ್ತಿರೋದ್ಯಾಕೆ?

ಚೆಕ್ ಪೋಸ್ಟನಲ್ಲಿ ತಪಾಸನೆ ನಡೆಸುವ ವೇಳೆಯಲ್ಲಿ ನಿಗದಿತ ನಮೂನೆಯಲ್ಲಿ ದಾಖಲೆಗಳು ಇಲ್ಲದೆ ಇರುವುದಕ್ಕೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಸಾಗಾಣಿಕೆಗೆ ಬಳಸುವ ಸಂಶಯ ಕಂಡು ಬಂದಿರುವುದರಿಂದ ಪ್ರಸ್ತುತ ಮುಟ್ಟುಗೋಲು ಕ್ರಮವನ್ನು ಕೈಗೊಳ್ಳಲಾಗಿದ್ದು, ಮುಂದಿನ ಕಾನೂನಿನ ಕ್ರಮದ ಬಗ್ಗೆ ಜಿಲ್ಲಾಮಟ್ಟದ ಸಮಿತಿಯು ಕೈಗೊಳ್ಳುವ ಕ್ರಮದ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಇನ್ನೊಂದು ಕಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.40 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಹಣ ಪತ್ತೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ.  ಬಾರ್ ಗೆ ಸೇರಿದ್ದ ಹಣ ಬ್ಯಾಂಕ್ ಗೆ ಕೊಂಡೊಯ್ಯುತ್ತಿದ್ದೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾನೆ. ಸೂಕ್ತ ದಾಖಲೆ ಇಲ್ಲದೆ ಅಧಿಕಾರಿಗಳು ಹಣ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

Karnataka Assembly Election 2023: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ 

ಗದಗದಲ್ಲಿ 1.50 ಕೋಟಿ ರೂ ಮೌಲ್ಯದ ಇನ್ಸುಲಿನ್ ಸೀಜ್!
ಗದಗ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ಸುಮಾರು 1.50 ಕೋಟಿ ರೂಪಾಯಿ ಮೌಲ್ಯದ ಇನ್ಸುಲಿನ್ ಸೀಜ್ ಮಾಡಲಾಗಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕಲಕೇರಿ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಗೋವಾ, ಹುಬ್ಬಳ್ಳಿ ನರಗುಂದ ಮಾರ್ಗವಾಗಿ ಔರಂಗಾಬಾದ್ ಗೆ ಹೊರಟ್ಟಿದ್ದ ವಾಹನದಲ್ಲಿ 61 ಇನ್ಸುಲಿನ್ ಬಾಕ್ಸ್ ಗಳು, ಸಾಗಾಟಕ್ಕೆ ಬಳಸಿದ ವಾಹನ ಜಪ್ತಿ ಮಾಡಲಾಗಿದೆ. ಎಸ್ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಸಿಪಿಐ ಮಠಪತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Latest Videos
Follow Us:
Download App:
  • android
  • ios