ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಕಸರತ್ತು ಮುಂದುವರೆದಿದೆ. ರಾಜ್ಯ ನಾಯಕರು ಕೇಂದ್ರ ನಾಯಕರ ಜೊತೆಗೆ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಪಟ್ಟಿ ಬಿಡುಗಡೆಗೆ ನಾಯಕರು ವಿಳಂಬ ಮಾಡುತ್ತಿದ್ದಾರೆ. ಪಟ್ಟಿ ರಿಲೀಸ್ ಮತ್ತೆ ಮುಂದಕ್ಕೆ ಹೋಗಿದೆ.
ಬೆಂಗಳೂರು (ಏ.10): ಬಿಜೆಪಿ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆ ಮಾಡಲಾಗುವುದು ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಪಟ್ಟಿ ರಿಲೀಸ್ ಮತ್ತೆ ಮುಂದಕ್ಕೆ ಹೋಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಆದರೆ ಬಿಜೆಪಿ ಮಾತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಇಂದು ಸಂಜೆ ಒಳಗಡೆ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು. 170-180 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಹಾಲಿ ಶಾಸಕರಲ್ಲಿ ಕೆಲವರನ್ನು ಹೊರತು ಪಡಿಸಿ ಎಲ್ಲರಿಗೂ ಟಿಕೆಟ್ ಸಿಗಲಿದೆ ಎಂದಿದ್ದರು. ಆದರೆ ಇದೀಗ ನಾಳೆ ಅಥವಾ ನಾಡಿದ್ದು ಪಟ್ಟಿ ಬಿಡುಗಡೆ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಅವರೇ ತಿಳಿಸಿದ್ದು, ಅಭ್ಯರ್ಥಿಗಳ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿರುವುದು ಸುಳ್ಳಲ್ಲ.
ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿರುವ ಕೇಸರಿ ಪಡೆ!
ಟಿಕೆಟ್ ಫೈನಲ್ ಸಂಬಂಧವಾಗಿ ರಾಜ್ಯ ನಾಯಕರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ಸಭೆ ಮೇಲೆ ಸಭೆ ನಡೆಸುತ್ತಿದೆ. ಕಳೆದ ಮೂರು ದಿನಗಳಿಂದ ಕೇಂದ್ರ ವರಿಷ್ಠರ ಜೊತೆಗೆ ಬಿಜೆಪಿ ಸಭೆ ನಡೆಸಿದರೂ ಸ್ಪಷ್ಟ ನಿರ್ಣಯ ಇನ್ನೂ ಸಿಕ್ಕಿಲ್ಲ. ಇಂದು ಮತ್ತೆ ಜೆಪಿ ನಡ್ಡಾ ಅವರೊಂದಿಗೆ ಮತ್ತೊಂದು ಸಭೆ ನಡೆಯಲಿದೆ.
ಹಿರಿಯ ನಾಯಕರ ಜೊತೆ ಬೆಳಗ್ಗೆ ಬಿಜೆಪಿ ಸಭೆ ನಡೆಸಿದೆ. ಚುನಾವಣಾ ಉಸ್ತುವಾರಿ ಧಮೇಂದ್ರ ಪ್ರಧಾನ್ ನಿವಾಸದಲ್ಲಿ ಸಭೆ ನಡೆಸಿದ್ದು, ಇದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿ ರಾಜ್ಯ ನಾಯಕರು ಭಾಗವಹಿಸಿದ್ದರು. ಧರ್ಮೇಂದ್ರ ಪ್ರಧಾನ್ ನಿವಾಸದ ಸಭೆ ಅಂತ್ಯವಾದ ಬಳಿಕ ನಾಯಕರು ಅಲ್ಲಿಂದ ತೆರಳಿದ್ದಾರೆ.
ನಡ್ಡಾ ಮನೆಯ ಸಭೆ ಶಾ ನಿವಾಸಕ್ಕೆ ಶಿಫ್ಟ್!: ಧರ್ಮೇಂದ್ರ ಪ್ರಧಾನ್ ನಿವಾಸದ ಸಭೆ ಅಂತ್ಯವಾದ ಬಳಿಕ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ರಾಜ್ಯನಾಯಕರು ತೆರಳಿದ್ದಾರೆ. ಜೆಪಿ ನಡ್ಡಾ ನಿವಾಸದಲ್ಲಿ ನಡೆಯಬೇಕಿದ್ದ ಸಭೆ ಅಮಿತ್ ಶಾ ನಿವಾಸಕ್ಕೆ ಶಿಫ್ಟ್ ಆಗಿದೆ. ಅಲ್ಲಿ ಸಭೆ ನಡೆದ ಬಳಿಕ ತೆರಳಿರುವ ರಾಜ್ಯ ನಾಯಕರು. ಮುಂದಿನ ಸಭೆಯನ್ನು ಜೆ ಪಿ ನಡ್ಡಾ ಮನೆಯಲ್ಲಿ ನಡೆಸಿದ್ದಾರೆ ಈ ಸಭೆಯಲ್ಲಿ ಸಿಎಂ, ಕಟೀಲು ಸೇರಿ ಹಲವು ಮಂದಿ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಗೆ ವಿರೋಧ, ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರ
ಇವೆಲ್ಲದರ ನಡುವೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಾಂಟಾಗಿದೆ. ಹೀಗಾಗಿ ಕೇಸರಿ ಕಲಿಗಳ ಆಯ್ಕೆಗೆ ಬಿಜೆಪಿ ಹೈಕಮಾಂಡ್ ನೂರೆಂಟು ಮಾನದಂಡವನ್ನು ಅನುಸರಿಸಿದೆಯಂತೆ. ಹೀಗಾಗಿ ಕೇಸರಿ ಪಡೆ ಸಭೆ ಮೇಲೆ ಸಭೆ ನಡೆಸುತ್ತಿದೆ. ಸಂಜೆ ಮತ್ತೆ ಮತ್ತೊಂದು ಸುತ್ತಿನ ಸಭೆ ಹಿರಿಯರ ಜೊತೆಗೆ ನಡೆಯಲಿದೆ.
Karnataka Assembly Election 2023: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಮತ್ತೆ ಸರ್ವೆಯ ಮೊರೆ ಹೋದ ಬಿಜೆಪಿ!
ಇದರ ನಡುವೆ ಟಿಕೆಟ್ ಹಂಚಿಕೆಗೆ ಬಿಜೆಪಿ ಮತ್ತೆ ಸರ್ವೇಯ ಮೊರೆ ಹೋಗಿದೆ. ಮೂವತ್ತರಿಂದ ನಲವತ್ತು ಕ್ಷೇತ್ರದಲ್ಲಿ ಮತ್ತೊಂದು ಸರ್ವೆಗೆ ನಾಯಕರು ಮುಂದಾಗಿದ್ದಾರೆ. ಮೊನ್ನೆ ರಾತ್ರಿಯಿಂದಲೇ ಸರ್ವೆಗೆ ಸೂಚಿಸಿರೋ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ. ಒಟ್ಟು ಮೂರು ಪ್ರತ್ಯೆಕ ಸಂಸ್ಥೆಗಳಿಂದ ಸರ್ವೆ. ಸರ್ವೆಯ ಆಧಾರದ ಮೇಲೆ ಟಿಕೆಟ್ ಫೈನಲ್ ಆಗಲಿದೆ. ಇಂದು ಸಂಜೆಯ ಒಳಗೆ ಮೂರು ಸರ್ವೆಯ ವರದಿ ಬರಲಿದ್ದು. ವರದಿ ಬಂದನಂತರ ಇಂದು ರಾತ್ರಿ ಮತ್ತೊಂದು ಸುತ್ತಿನ ನಾಯಕರ ಸಭೆ ನಡೆಯಲಿದೆ. ತದ ನಂತರವೆ ಟಿಕೆಟ್ ಫೈನಲ್ ಆಗಲಿದೆ. ಈ ಎಲ್ಲಾ ಹಿನ್ನೆಲೆ ಪಟ್ಟಿ ಬಿಡುಗಡೆಗೆ ನಾಯಕರು ವಿಳಂಬ ಮಾಡುತ್ತಿದ್ದಾರೆ.
