ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿಯಲ್ಲಿ ಘಟನೆ ನಡೆದಿದೆ. ಗುಜರಿಯಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿ ಅಸ್ವಸ್ಥರಾಗಿದ್ದಾರೆ. ವಿಷಾನಿಲ‌ ಗಾಳಿಯಲ್ಲಿ ಹರಡಿ ಅಕ್ಕಪಕ್ಕದ ನಿವಾಸಿಗಳೂ ಕೂಡ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಮೈಸೂರು(ಜೂ.07): ಗುಜರಿ ಗೋಡೌನ್‌ನಲ್ಲಿ ವಿಷಕಾರಿ ಅನಿಲ್ ಸೋರಿಕೆ‌ಯಾದ ಪರಿಣಾಮ ಐದು ಮಂದಿ ಅಸ್ವಸ್ಥರಾದ ಘಟನೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು(ಶುಕ್ರವಾರ) ನಡೆದಿದೆ. ಆಸ್ಪತ್ರೆಗೆ ಸೇರಿದವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿಯಲ್ಲಿ ಘಟನೆ ನಡೆದಿದೆ. ಗುಜರಿಯಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿ ಅಸ್ವಸ್ಥರಾಗಿದ್ದಾರೆ. ವಿಷಾನಿಲ‌ ಗಾಳಿಯಲ್ಲಿ ಹರಡಿ ಅಕ್ಕಪಕ್ಕದ ನಿವಾಸಿಗಳೂ ಕೂಡ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. 

ವಾಲ್ಮೀಕಿ ನಿಗಮ ಹಗರಣದ ಬೆನ್ನಲ್ಲೇ ಮೈಸೂರಿನಲ್ಲಿ ಮತ್ತೊಂದು ಹಗರಣ ಬೆಳಕಿಗೆ!

ಗುಜುರಿ ಪಕ್ಕದ ಹಳೆ ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಪುರುಷರು, ಮಹಿಳೆಯರು, ಮಕ್ಕಳು ಸೇರಿ ಐದು ಮಂದಿ ಜನರು ಅಸ್ವಸ್ಥರಾಗಿದ್ದಾರೆ. ಎನ್.ಆರ್. ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ನಡೆದಿದೆ. ಸ್ಥಳಕ್ಕೆ ಪೋಲಿಸರು ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.